Assault on merchant: ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ: ಹಫ್ತಾ ಕೊಡದಿದ್ದಕ್ಕೆ ವ್ಯಾಪಾರಿ ಮೇಲೆ ಹಲ್ಲೆ

ಬೆಂಗಳೂರು: (Assault on merchant) ಹಫ್ತಾ ನೀಡಲಿಲ್ಲ ಎನ್ನುವ ಕಾರಣಕ್ಕೆ ಪುಂಡರು ಮೀನಿನ ಅಂಗಡಿ ವ್ಯಾಪಾರಿ ಮೇಲೆ ಲಾಂಗ್‌ ಬೀಸಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಜೈ ಭಾರತ್‌ ನಗರದಲ್ಲಿ ನಡೆದಿದೆ.

ಸುಜಿತ್‌ ಎಂಬಾತ ನಿನ್ನೆ ರಾತ್ರಿ ಬಾಣಸವಾಡಿಯಲ್ಲಿರುವ ಮೀನಿನ ಅಂಗಡಿಗೆ ಬಂದು ಹಫ್ತಾ ಕೇಳಿದ್ದಾನೆ. ಮೀನಿನ ಅಂಗಡಿ ವ್ಯಾಪಾರಿ ಹಫ್ತಾ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸುಜೀತ್‌ ಲಾಂಗ್‌ ಬೀಸಿ ವ್ಯಾಪಾರಿಯ ಮೇಲೆ ಹಲ್ಲೆ (Assault on merchant) ನಡೆಸಿದ್ದಾನೆ.

ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಬಾಣಸವಾಡಿ ಪೊಲೀಸರು ಆರೋಪಿ ಸುಜಿತ್‌ ನನ್ನು ಬಂಧಿಸಿದ್ದಾರೆ. ಪೊಲೀಅರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಅಂಗಡಿ ವ್ಯಾಪಾರಿ ಹಾಗೂ ಆರೋಪಿಯ ನಡುವೆ ಹಣದ ವಿಚಾರಕ್ಕೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಆರೋಪಿ ಸುಜಿತ್‌ ಲಾಂಗ್‌ ಹಿಡಿದು ಅಂಗಡಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಅಂಗಡಿಯ ವ್ಯಾಪಾರಿ ಕೂಡ ಈ ಬಗ್ಗೆ ಹೇಳಿಕೊಂಡಿದ್ದು, ಪ್ರತಿದಿನ ಪುಡಿರೌಡಿಗಳು ಇಲ್ಲಿಗೆ ಬಂದು ಹಫ್ತಾ ಕೇಳುತ್ತಾರೆ. ಆರೋಪಿ ಕೂಡ ಪ್ರತಿದಿನ ಬಂದು ಹಣ ಕೇಳುತ್ತಾನೆ. ನಿನ್ನೆ ಕೂಡ ಹಣ ಕೇಳಿದ್ದಾನೆ. ಈ ಹಿಂದೆ ಹಲವು ಭಾರಿ ಆತನಿಗೆ ಹಣ ನೀಡಿದ್ದೆ. ನಿನ್ನೆ ಆತ ಬಂದು ಹಣ ಕೇಳಿದಾಗ ಹಣ ಕೊಡಲು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ತನ್ನ ಅಸಾಹಯಕತೆ ತೋಡಿಕೊಂಡಿದ್ದಾನೆ.

ಇದನ್ನೂ ಓದಿ : Car overturned- 3 died: ಬ್ಲೂಬಕ್‌ ಗೆ ಢಿಕ್ಕಿ ಹೊಡೆದು ಕಾರು ಪಲ್ಟಿ: ಮೂವರು ಸಾವು, ನಾಲ್ವರಿಗೆ ಗಾಯ

ಇದನ್ನೂ ಓದಿ : HIV Positive Injection‌ : ಪತ್ನಿಗೆ ಎಚ್ ಐವಿ ಚುಚ್ಚುಮದ್ದು ಹಾಕಿಸಿ ವಿಚ್ಚೇದನ ಕೊಟ್ಟ ಪಾಪಿ ಪತಿ

ಇದನ್ನೂ ಓದಿ : Dehli bus accident: ಬಸ್‌ ಮುಖಾಮುಖಿ ಢಿಕ್ಕಿ: ಮೂವರು ಸಾವು, ಇಬ್ಬರು ಗಂಭೀರ

(Assault on merchant) The incident took place in Jai Bharat Nagar of Banasawadi, Bengaluru, where thugs attacked a fish shop merchant with a long winder because he did not give him a khafta.

Comments are closed.