attack on ayyappa devotees: ಕೇರಳದಲ್ಲಿ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ

ಕೇರಳ: (attack on ayyappa devotees) ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ದೇಶದ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಅಯ್ಯಪ್ಪ ಮಾಲಧಾರಿಗಳು ಸಾವಿರಾರು ಸಂಖ್ಯೆಯಲ್ಲಿ ಧಾವಿಸಿ ಬರುತ್ತಾರೆ. ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಭೇಟಿ ನೀಡುವ ಭಕ್ತರಲ್ಲಿ ಕರ್ನಾಟಕದ ಭಕ್ತರು ಕೂಡ ಸೇರಿದ್ದಾರೆ. ಕರ್ನಾಟಕದಿಂದ ಲಕ್ಷಾಂತರ ಮಂದಿ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಹೀಗೆ ಕರ್ನಾಟಕದ ಮೈಸೂರಿನಿಂದ ಶಬರಿಮಲೆಗೆ ತಲುಪುತ್ತಿದ್ದ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ ನಡೆದಿದೆ.

ಶಬರಿಮಲೆಗೆ ತಲುಪುತ್ತಿದ್ದ ಕೇರಳ ಮೂಲದ ಕಾರಿಗೆ ಅಯ್ಯಪ್ಪ ಭಕ್ತರು ಪ್ರಯಾಣಿಸುತ್ತಿದ್ದ ಟೆಂಪೋ ಒಂದು ಡಿಕ್ಕಿ ಹೊಡೆದಿದೆ. ಇದರಲ್ಲಿ ಕಾರಿನ ಚಾಲಕನ ತಪ್ಪಿದ್ದರೂ ಕೂಡ ಮೈಸೂರಿನಿಂದ ತೆರಳುತ್ತಿದ್ದ ಟೆಂಪೋ ಚಾಲಕನ ಮೇಲೆ ಸ್ಥಳೀಯರು ಹಲ್ಲೆ (attack on ayyappa devotees) ನಡೆಸಿದ್ದಾರೆ. ಈ ವೇಳೆ ಟೆಂಪೋದಲ್ಲಿದ್ದ ಮೈಸೂರಿನ ಅಯ್ಯಪ್ಪ ಭಕ್ತರು ಪ್ರಶ್ನೆ ಮಾಡಿದ್ದು, ಅವರ ಮೇಲೂ ಹಲ್ಲೆ ಮಾಡಿದ್ದಾರೆ. ಹೀಗಾಗಿ ಕರ್ನಾಟಕದ ಅಯ್ಯಪ್ಪ ಭಕ್ತರು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕೇರಳದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು ಬಳಿಕ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ಕೇರಳ ಮೂಲದ ಕಾರು ಚಾಲಕನ ತಪ್ಪಿರುವುದು ತಿಳಿದು ಬಂದಿದೆ. ಕಾರು ಚಾಲಕನ ತಪ್ಪನ್ನು ಅರಿತ ಪೊಲೀಸರು ಕರ್ನಾಟಕದ ಭಕ್ತರ ಬಳಿ ಕ್ಷಮೆ ಕೇಳುವಂತೆ ಚಾಲಕನಿಗೆ ತಿಳಿಸಿದ್ದಾರೆ. ಕಾರು ಚಾಲಕ ಭಕ್ತರ ಬಳಿ ಕ್ಷಮೆ ಕೇಳಿದ್ದು, ನಂತರ ಅಯ್ಯಪ್ಪ ಭಕ್ತರು ಶಬರಿಮಲೆಗೆ ತೆರಳಿದ್ದಾರೆ.

ಇದನ್ನೂ ಓದಿ : Crime report: ತಂದೆಯನ್ನು ಕೊಂದು 30 ತುಂಡುಗಳನ್ನಾಗಿ ಮಾಡಿ ಬೋರ್‌ ವೆಲ್‌ ಗೆ ಎಸೆದ ಮಗ

ಇದನ್ನೂ ಓದಿ : Kota : ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 3 ವಿದ್ಯಾರ್ಥಿಗಳು ಆತ್ಮಹತ್ಯೆ

Millions of Ayyappa Maladharis from Karnataka travel to Sabarimala to have Ayyappa’s darshan. Thus, there was an attack on Ayyappa devotees who were reaching Sabarimala from Mysore in Karnataka.

Comments are closed.