Attempt to murder case: ಪತ್ನಿಯೊಂದಿಗೆ ಜಗಳ: 2 ವರ್ಷದ ಮಗನನ್ನು ಬಾಲ್ಕನಿಯಿಂದ ಎಸೆದು ಬಳಿಕ ತಾನೂ ಜಿಗಿದ ವ್ಯಕ್ತಿ

ದೆಹಲಿ: (Attempt to murder case) ಪತ್ನಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದ ವ್ಯಕ್ತಿಯೊಬ್ಬ ತನ್ನ ಎರಡು ವರ್ಷದ ಮಗನನ್ನು ಮೂರು ಅಂತಸ್ತಿನ ಮನೆಯ ಬಾಲ್ಕನಿಯಿಂದ ಎಸೆದು ನಂತರ ಆತನೂ ಜಿಗಿದ ಘಟನೆ ದೆಹಲಿಯ ಕಲ್ಕಾಜಿಯ ಕೊಳೆಗೇರಿಯಲ್ಲಿ ನಡೆದಿದೆ.

ತಂದೆ ಮತ್ತು ಮಗನಿಗೆ ಗಂಭೀರ (Attempt to murder case) ಗಾಯಗಳಾಗಿದ್ದು, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಆಸ್ಪತ್ರೆಗೆ (ಎಐಐಎಂಎಸ್) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನ್ ಸಿಂಗ್ ಮತ್ತು ಅವರ ಪತ್ನಿ ಪೂಜಾ ಕಳೆದ ಕೆಲವು ತಿಂಗಳುಗಳಿಂದ ಜಗಳವಾಡುತ್ತಿದ್ದರು. ಇದೇ ಕಾರಣಕ್ಕೆ ಪೂಜಾ ಮನೆ ಬಿಟ್ಟು ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ಅಜ್ಜಿಯ ಮನೆಗೆ ಬಂದಿದ್ದಳು. ಶುಕ್ರವಾರ ರಾತ್ರಿ ಅವರನ್ನು ಭೇಟಿಯಾಗಲು ಮಾನ್ ಸಿಂಗ್ ಆಕೆಯ ಅಜ್ಜಿ ಮನೆಗೆ ಬಂದಿದ್ದರು. ಈ ವೇಳೆ ಇಬ್ಬರ ಮಧ್ಯೆಯೂ ಜಗಳ ನಡೆದಿದೆ. ಕೋಪದ ಭರದಲ್ಲಿ, ಮಾನ್‌ ಸಿಂಗ್ ತನ್ನೆರಡು ವರ್ಷದ ಮಗನನ್ನು ಬಾಲ್ಕನಿಯಿಂದ ಎಸೆದು ನಂತರ ತಾನೂ ಬಾಲ್ಕನಿಯಿಂದ ಜಿಗಿದಿದ್ದಾನೆ.

ಘಟನೆಯಿಂದ ಗಾಯಗೊಂಡ ಮಗು ಮತ್ತು ಮಾನ್‌ ಸಿಂಗ್‌ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ ಆಸ್ಪತ್ರೆಗೆ (ಎಐಐಎಂಎಸ್) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಮಾನ್‌ ಸಿಂಗ್‌ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ನೋಯ್ಡಾದಲ್ಲಿ ಐಶ್ವರ್ಯಾ ರೈ ಬಚ್ಚನ್ ನಕಲಿ ಪಾಸ್‌ಪೋರ್ಟ್ ಪತ್ತೆ: ಮೂವರ ಬಂಧನ

ಇದನ್ನೂ ಓದಿ : Mangalore Bomb Blast Case: ಉಗ್ರ ಶಾರೀಖ್‌ ನನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಿದ ಎನ್.ಐ.ಎ

ಇದನ್ನೂ ಓದಿ : Toxic Spinach :ಹುಷಾರ್ : ಪಾಲಕ್ ಸೊಪ್ಪು ತಿಂದು ಆಸ್ಪತ್ರೆ ಸೇರಿದ ಸಾವಿರಾರು ಜನರು

(Attempt to murder case) A man who had a heated argument with his wife threw his two-year-old son from the balcony of a three-storey house and then he also jumped, an incident took place in Delhi’s Kalkaji slum.

Comments are closed.