Avatar 2: ಅವತಾರ್ 2 ಸಿನಿಮಾ ವೀಕ್ಷಣೆ ವೇಳೆ ಹೃದಯಾಘಾತದಿಂದ ಸಾವು

ಪೆದ್ದಾಪುರಂ: (Avatar 2) ದೇಶದಾದ್ಯಂತ ಎರಡು ದಿನಗಳ ಹಿಂದೆ ಬಿಡುಗಡೆಯಾದ ಅವತಾರ್‌ 2 ಚಿತ್ರ ವೀಕ್ಷಿಸುತ್ತಿರುವ ವೇಳೆಯಲ್ಲಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂ ನಗರದಲ್ಲಿ ನಡೆದಿದೆ. ಹೃದಯಾಘಾತದಿಂದ ಸಾವನ್ನಪ್ಪಿರುವ ವ್ಯಕ್ತಿಯನ್ನು ಲಕ್ಷ್ಮಿರೆಡ್ಡಿ ಶ್ರೀನು ಎಂದು ಗುರುತಿಸಲಾಗಿದೆ.

ಶ್ರೀನು ಅವರು ಚಿತ್ರ (Avatar 2) ವೀಕ್ಷಿಸಲು ತನ್ನ ಕಿರಿಯ ಸಹೋದರನೊಂದಿಗೆ ಬಂದಿದ್ದರು. ಸಿನಿಮಾ ನೋಡುತ್ತಿರುವ ಹೊತ್ತಿನಲ್ಲೇ ಶ್ರೀನು ಕುಸಿದು ಬಿದ್ದಿದ್ದಾರೆ. ತಕ್ಷಣ ಆತನ ಕಿರಿಯ ಸಹೋದರ ರಾಜು ಅವರನ್ನು ಪೆದ್ದಾಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಲಕ್ಷ್ಮೀರೆಡ್ಡಿ ಶ್ರೀನು ಅವರು ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಇದೇ ರೀತಿಯಾಗಿ ತೈವಾನ್‌ನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು 2010 ರಲ್ಲಿ ಬಿಡುಗಡೆಯಾದ ‘ಅವತಾರ್’ ಚಲನಚಿತ್ರದ ಮೊದಲ ಭಾಗವನ್ನು ವೀಕ್ಷಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಏಜೆನ್ಸ್ ಫ್ರಾನ್ಸ್ ಪ್ರೆಸ್ 2010 ರಲ್ಲಿ ವರದಿ ಮಾಡಿತ್ತು. ವ್ಯಕ್ತಿಗೆ ಅಧಿಕ ರಕ್ತದೊತ್ತಡ ಇದ್ದು ಅವನನ್ನು ಪರೀಕ್ಷಿಸಿದ ವೈದ್ಯರ ಪ್ರಕಾರ, “ಚಲನಚಿತ್ರವನ್ನು ನೋಡುವ ಅತಿಯಾದ ಉತ್ಸಾಹ” ಅವನ ರೋಗಲಕ್ಷಣಗಳನ್ನು ಪ್ರಚೋದಿಸಿತು. ಹೀಗಾಗಿ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದರು.

ಇದನ್ನೂ ಓದಿ : Attempt to murder case: ಪತ್ನಿಯೊಂದಿಗೆ ಜಗಳ: 2 ವರ್ಷದ ಮಗನನ್ನು ಬಾಲ್ಕನಿಯಿಂದ ಎಸೆದು ಬಳಿಕ ತಾನೂ ಜಿಗಿದ ವ್ಯಕ್ತಿ

ಇದನ್ನೂ ಓದಿ : Toxic Spinach :ಹುಷಾರ್ : ಪಾಲಕ್ ಸೊಪ್ಪು ತಿಂದು ಆಸ್ಪತ್ರೆ ಸೇರಿದ ಸಾವಿರಾರು ಜನರು

ಇದನ್ನೂ ಓದಿ : Fire disaster-6 died: ಮನೆಗೆ ಬೆಂಕಿ: ಒಂದೇ ಕುಟುಂಬದ 6 ಮಂದಿ ದುರ್ಮರಣ

(Avatar 2) An incident occurred in Peddapuram city of Kakinada district of Andhra Pradesh where a person died of heart attack while watching the movie Avatar 2 which was released two days ago across the country. The person who died of heart attack has been identified as Lakshmireddy Srinu.

Comments are closed.