ಬೆಂಗಳೂರು : ಐಶಾರಾಮಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿಯಲ್ಲಿ ನಡೆದಿದೆ.

ತಮಿಳುನಾಡಿನ ಹೊಸೂರು ಶಾಸಕ ಶಾಸಕರ ಪುತ್ರ ಕರುಣ ಸಾಗರ್, ಪತ್ನಿ ಬಿಂದು, ಉತ್ಸವ್, ಸ್ನೇಹಿತರಾದ ರೋಹಿತ್, ಅಕ್ಷಯ್ ಗೋಯಲ್, ಹುಬ್ಬಳ್ಳಿಯ ರೋಹಿತ್, ಡಾ.ಧನುಷಾ, ಇಶಿತಾ ಮೃತಪಟ್ಟವರಾಗಿದ್ದಾರೆ. ತಡರಾತ್ರಿ ಸುಮಾರು 1.45ರಿಂದ 2 ಗಂಟೆ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅತಿ ವೇಗ ಹಾಗೂ ನಿರ್ಲಕ್ಷ್ಯ, ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಕಾರಿನಲ್ಲಿದ್ದ ಯಾರು ಕೂಡ ಸೀಟ್ ಬೆಲ್ಟ್ ಹಾಕಿರಲಿಲ್ಲ ಇದರಿಂದಾಗಿ ಏರ್‌ಬ್ಯಾಗ್ ಓಪನ್ ಆಗಿರಲಿಲ್ಲ. ಪುಟ್‌ಪಾತ್ ಹತ್ತಿ ಎರಡು ಬೊಲ್ಲಾರ್ಡ್‌ಗೆ ಢಿಕ್ಕಿಯಾಗಿದೆ. ನೈಟ್ ಬೀಟ್‌ನಲ್ಲಿದ್ದ ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಡಿಸಿಪಿ ರವಿಕಾಂತೇಗೌಡ ಹೇಳಿದ್ದಾರೆ.
ಶಾಸಕರ ಪುತ್ರ ಕರುಣ ಸಾಗರ್ ನಿನ್ನೆಯಷ್ಟೇ ತನ್ನ ಐಷಾರಾಮಿ ಆಡಿ ಕ್ಯೂ3ನಲ್ಲಿ ಕಾರಿನಲ್ಲಿ ಕಟ್ಟಡ ಸಾಮಗ್ರಿ ಖರೀದಿಗೆ ಬಂದಿದ್ದರು ಎನ್ನಲಾಗುತ್ತಿದೆ. ಮೃತಪಟ್ಟವರಲ್ಲಿ ಬಹುತೇಕರು ಕೋರಮಂಗಲದ ಪಿಜಿಯಲ್ಲಿ ಉಳಿದುಕೊಂಡಿದ್ದರು ಎನ್ನಲಾಗುತ್ತಿದೆ. ಈ ಕುರಿತು ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Crime News : ಮನೆ ಕಳ್ಳತನ ಮಾಡೋಕೆ ವಿಮಾನದಲ್ಲಿ ಬರ್ತಿದ್ದ! ಹೈಟೆಕ್ ಕಳ್ಳರು ಅಂದರ್ ಆಗಿದ್ದು ಹೇಗೆ ಗೊತ್ತಾ
ಇದನ್ನೂ ಓದಿ : Bangalore : ಮಾರಕಾಸ್ತ್ರ ಹಿಡಿದು ಬಾರ್ ಒಳಗೆ ನುಗ್ಗಿದ ಪುಡಿ ರೌಡಿಗಳು !
(Koramangala Audi car Accident 7 death)