Udupi : ಪ್ರಿಯತಮೆಯ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಉಡುಪಿ : ಪ್ರೀತಿಸಿದ ಹುಡುಗಿಗೆ ಬೇರೊಬ್ಬರ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥವಾದ ಬೆನ್ನಲ್ಲೇ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ. ನಂತರ ತಾನೂ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕೂಡ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಉಡುಪಿಯ ರಾಂಪುರದ ನಿವಾಸಿಯಾಗಿರುವ ಸಂದೇಶ್‌ ಕುಲಾಲ್‌ ( 26 ವರ್ಷ) ಎಂಬಾತನೇ ಮೃತಪಟ್ಟವನು. ಸಂದೇಶ್‌ ಅಂಬಾಗಿಲು ನಿವಾಸಿಯಾಗಿರುವ ಸೌಮ್ಯಶ್ರೀ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆದರೆ ಸೌಮ್ಯಶ್ರೀಗೆ ಕಳೆದೊಂದು ವಾರದ ಹಿಂದೆಯಷ್ಟೆ ವಿವಾಹ ನಿಶ್ಚಯವಾಗಿತ್ತು. ಇದರಿಂದ ಕೋಪಗೊಂಡ ಸಂದೇಶ್‌, ನಿನ್ನೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸೌಮ್ಯಶ್ರೀಯನ್ನು ಅಂಬಾಗಿಲು ಸಮೀಪದಲ್ಲಿ ಅಡ್ಡಗಟ್ಟಿ ಜಗಳವಾಡಿದ್ದಾನೆ. ನಂತರ ಆಕೆಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.

ಪ್ರೇಯಸಿಯನ್ನು ಹತ್ಯೆಗೈದಿದ್ದ ಆರೋಪಿ ನಂತ ತಾನೂ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂದೇಶ್‌ ಕುಲಾಲ್‌ ಸಾವನ್ನಪ್ಪಿದ್ದಾನೆ. ಈ ಕುರಿತು ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿದ್ದು, ಇಬ್ಬರ ಮರಣೋತ್ತರ ಕಾರ್ಯ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : Udupi : ಪ್ರೀತಿಸಿದಾಕೆಗೆ ಮತ್ತೋರ್ವನ ಜೊತೆ ನಿಶ್ವಿತಾರ್ಥ : ಉಡುಪಿಯಲ್ಲಿ ಪ್ರೇಯಸಿಯ ಕತ್ತು ಕೊಯ್ದ ಪ್ರಿಯಕರ

ಇದನ್ನೂ ಓದಿ : Koramangala Accident : ಬೆಂಗಳೂರಲ್ಲಿ ಐಶಾರಾಮಿ ಕಾರು ಅಪಘಾತ : ಶಾಸಕರ ಪುತ್ರ, ಸೊಸೆ ಸೇರಿ 7 ಮಂದಿ ದುರ್ಮರಣ

Comments are closed.