Bandemath swamiji suicide case : ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಪತ್ತೆ

ರಾಮನಗರ: (Bandemath swamiji suicide case)ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸಾಕ್ಷ್ಯವೊಂದು ಸಿಕ್ಕಿದೆ. ನೀಲಾಂಬಿಕೆ ಹನಿಟ್ರ್ಯಾಪ್ ಅವರು ಬಸವಲಿಂಗ ಸ್ವಾಮೀಜಿ ಅವರೊಂದಿಗೆ ಮಾತನಾಡುತ್ತಿದ್ದಾಗ ವಿಡಿಯೋ ಕಾಲ್ ರೆಕಾರ್ಡ್ ಮಾಡಿದ್ದ ಸ್ಮಾರ್ಟ್ ಫೋನ್ ಅನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.

ಈ ಮೊದಲು ವಿಚಾರಣೆ ವೇಳೆ ಹಳೆಯ ಮೊಬೈಲ್ ನಾಶಪಡಿಸಿದ್ದೇನೆ ಎಂದು ನೀಲಾಂಬಿಕೆ ಹಲವು ಬಾರಿ ಹೇಳಿದ್ದಳು. ಆದರೆ ನಿರಂತರ ವಿಚಾರಣೆಯ ನಂತರ ನಿಜವಾದ ಮಾಹಿತಿ ಹೊರಬಿದ್ದಿದೆ(Bandemath swamiji suicide case).ಈ ಮೊಬೈಲ್ ಅನ್ನು ನೀಲಾಂಬಿಕೆ ಹಲವು ಬಾರಿ ಫ್ಲಾಶ್ (ಫ್ಯಾಕ್ಟರಿ ರಿಸೆಟ್) ಮಾಡಿಸಿದ್ದಾಳೆ. ಹೀಗಾಗಿ ಈ ಉಪಕರಣ ಬಳಸಿ ಏನೆಲ್ಲಾ ಮಾಡಲಾಗಿತ್ತು ಎಂಬ ಮಾಹಿತಿ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಸಂಗತಿ ಎನಿಸಿದೆ

ಇದನ್ನೂ ಓದಿ : Cattle smuggling : ಜಾನುವಾರು ಕಳ್ಳಸಾಗಣಿಕೆ : ಪೊಲೀಸರ ಕಾರ್ಯಾಚರಣೆ, 8 ಟ್ರಕ್‌ ವಶ

ವಿಡಿಯೊ ರೆಕಾರ್ಡ್ ಮಾಡಿದ ನಂತರ ಅದರಲ್ಲಿದ್ದ ಮೂರು ವಿಡಿಯೋಗಳನ್ನು ಕಣ್ಣೂರು ಶ್ರೀಗಳಿಗೆ ತೋರಿಸಿ ಮಹದೇವಯ್ಯನಿಗೆ ನೀಲಾಂಬಿಕೆಯೇ ಕಳುಹಿಸಿದ್ದಳು. ಆ ನಂತರ ಹಳೆಯ ಮೊಬೈಲ್ ಫ್ಲಾಶ್ ಮಾಡಿಸಿ, ಬೇರೊಂದು ಹೊಸ ಮೊಬೈಲ್ ಖರೀದಿಸಿದ್ದಳು.ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ನಂತರ ಹೊಸ ಮೊಬೈಲ್ ಅನ್ನೂ ಹಲವು ಬಾರಿ ಫ್ಲಾಶ್ ಮಾಡಿಸಿದ್ದಳು. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಯಾವುದೇ ಮಾಹಿತಿ ಸಿಗಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ : Woman burned alive : ಪಕ್ಕದ ಮನೆಯವರಿಂದ ಮಹಿಳೆ ಸಜೀವ ದಹನ : ವಾಮಾಚಾರದ ಆರೋಪ

ಇದೀಗ ಪೊಲೀಸರು ಮೃತ ಬಂಡೇಮಠ ಸ್ವಾಮೀಜಿ ಬಳಸುತ್ತಿದ್ದ ಎರಡು ಮೊಬೈಲ್‌ಗಳ ಸ್ಕ್ರೀನ್‌ಲಾಕ್ ಓಪನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಗಳ ಮೊಬೈಲ್‌ನಲ್ಲಿ ಹಲವು ಸ್ಫೋಟಕ ಮಾಹಿತಿಗಳು ದೊರೆತಿದ್ದು , ನೀಲಾಂಬಿಕೆಯು ಕಾಲ್ ರೆಕಾರ್ಡ್ ಮಾಡಿರುವುದು ಗೊತ್ತಾದ ನಂತರ ಸ್ವಾಮೀಜಿ ಆಕೆಯ ನಂಬರ್ ಬ್ಲಾಕ್ ಮಾಡಿದ್ದರು. ಈ ವಿಚಾರವು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Retired officer murdered : ಇಂಟಲಿಜೆನ್ಸ್‌ ಬ್ಯೂರೊದ ನಿವೃತ್ತ ಅಧಿಕಾರಿ ಕೊಲೆ ; ಕಾರು ಗುದ್ದಿಸಿ ಹಂತಕರು ಎಸ್ಕೇಪ್‌

ಬಂಡೇಮಠದ ಸ್ವಾಮೀಜಿ ಜೊತೆಗೆ ಎರಡು ವರ್ಷಗಳಿಂದ ನೀಲಾಂಬಿಕೆ ಸಂಪರ್ಕದಲ್ಲಿ ಇದ್ದಳು. ಏಪ್ರಿಲ್‌ನಿಂದ ವಾಟ್ಸಾಪ್‌ನ ವಿಡಿಯೊ ಕಾಲ್ ರೆಕಾರ್ಡ್ ಮಾಡಲು ಆಕೆ ಯತ್ನಿಸುತ್ತಿದ್ದಳು. ಈ ಬಗ್ಗೆ ಜೂನ್ ತಿಂಗಳಲ್ಲಿ ಸ್ವಾಮೀಜಿಗೆ ವಿಷಯ ಗೊತ್ತಾಗಿತ್ತು. ಹನಿಟ್ರ್ಯಾಪ್ ವಿಷಯ ಅರಿವಾಗುತ್ತಿದ್ದಂತೆಯೇ ಸ್ವಾಮೀಜಿ ನೀಲಾಂಬಿಕೆಯಿಂದ ದೂರವಾಗಿದ್ದರು.

ನೀಲಾಂಬಿಕೆ ಹೆಣೆದ ಬಲೆಗೆ ಇನ್ನು ಹಲವು ಸ್ವಾಮೀಜಿಗಳೂ ಬಿದ್ದಿರುವುದು ತನಿಖೆ ವೇಳೆ ಬಯಲಾಗಿದೆ. ನೀಲಾಂಬಿಕೆ ನಿರಂತರವಾಗಿ ಹಲವು ಸ್ವಾಮೀಜಿಗಳೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದರು. ಹೀಗೆ ಮಾತನಾಡುವಾಗ ಮುಖ ತೋರಿಸದೇ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಳು. ಇದಕ್ಕಾಗಿ ವಿಶೇಷ ಆಪ್ ಬಳಸಿದ್ದಾಳೆ. ಹಲವು ಸ್ವಾಮೀಜಿಗಳು ನನಗೆ ಆತ್ಮೀಯರಾಗಿದ್ದಾರೆ ಎಂದು ನೀಲಾಂಬಿಕೆ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

(Bandemath swamiji suicide case) The police have got an important evidence regarding the suicide case of Basavalinga Swamiji of Bandemath. The police have now seized the smartphone where Nilambike Honeytrap had recorded the video call when she was talking to Basavalinga Swamiji.

Comments are closed.