Sugarcane Juice : ಮೂತ್ರಕೋಶದ ಸೋಂಕಿನಿಂದ ಬಳಲುತ್ತೀದಿರಾ ? ಹಾಗಾದರೆ ಬಳಸಿ ಕಬ್ಬಿನ ಜ್ಯೂಸ್‌

ಮೂತ್ರಕೋಶದ ಸೋಂಕು ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. (Sugarcane Juice)ಈ ಸಮಸ್ಯೆ ಮಹಿಳೆಯರು ಹಾಗೂ ಪುರುಷರಿಬ್ಬರಿಗೂ ಬರಬಹುದಾಗಿದೆ. ಆದರೆ ಈ ಸೋಂಕಿನಿಂದಾಗಿ ಮಹಿಳೆಯರಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೂತ್ರಕೋಶದ ಸೋಂಕು ಹೊಂದಿರುವ ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಾಗಿರುತ್ತಾರೆ. ಯಾಕೆಂದರೆ ಪದೇ ಪದೇ ಮೂತ್ರ ವಿಸರ್ಜನೆಯಾಗುವುದರಿಂದ ದೂರ ಪ್ರಯಾಣ ಮಾಡುವುದು ಇವರಿಗೆ ಕಷ್ಟವಾಗಿರುತ್ತದೆ. ಬೇರೆಯವರು ಆಡಿಕೊಳ್ಳುವವರು ಎನ್ನುವ ಸಂಕೋಚ ಇವರನ್ನುಕಾಡುತ್ತದೆ. ಆದರೆ ಮೂತ್ರಕೋಶದ ಸೋಂಕುನ್ನು ನಿರ್ಲಕ್ಷಿಸಬಾರದು.

ಯುಟಿಐ ಇದ್ದಾಗ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಯುಟಿಐ ಸೋಂಕು ಹೆಚ್ಚಾಗಿ ಇ-ಕೊಲಿ ಬ್ಯಾಕ್ಟಿರಿಯಾದಿಂದ ಉಂಟಾಗುತ್ತದೆ. ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದರಿಂದ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಕಬ್ಬಿನ ಜ್ಯೂಸ್‌ನ್ನು ಕೆಳಗೆ ತಿಳಿಸಿದ ರೀತಿಯಲ್ಲಿ ಮಾಡಿ ಕುಡಿದರೆ ಸಂಪೂರ್ಣವಾಗಿ ಗುಣವಾಗುತ್ತದೆ. ಈ ಕಬ್ಬಿನ ಜ್ಯೂಸ್‌ನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ಕಬ್ಬಿನ ಜ್ಯೂಸ್‌
ಕಾಳುಮೆಣಸಿನ ಪುಡಿ
ಲಿಂಬೆಹಣ್ಣು

ತಯಾರಿಸುವ ವಿಧಾನ :
ಒಂದು ಲೋಟ ಕಬ್ಬಿನ ಜ್ಯೂಸ್‌ಗೆ ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಹಾಕಿಕೊಳ್ಳಬೇಕು. ನಂತರ ಅದಕ್ಕೆ ಎಂಟರಿಂದ ಹತ್ತು ಹನಿ ಲಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬಹುದಾಗಿದೆ. ಇದನ್ನು ದಿನ ಬಿಟ್ಟು ದಿನ ಮಾಡಿ ಕುಡಿಯುವುದರಿಂದ ಮೂತ್ರಕೋಶದ ಸೋಂಕಿನಿಂದ ದೂರವಿರಬಹುದಾಗಿದೆ. ಅಷ್ಟೇ ಅಲ್ಲದೇ ಜ್ಯೂಸ್‌ನ್ನು ಕುಡಿಯುವುದರಿಂದ ಮೂತ್ರಕೋಶ ಹಾಗೂ ಕಿಡ್ನಿಯಲ್ಲಿ ಆಗುವ ಕಲ್ಲುಗಳನ್ನು ತಡೆಗಟ್ಟುತ್ತದೆ. ಕಬ್ಬಿನಲ್ಲಿ ಮೂತ್ರವರ್ಧಕ ಗುಣಗಳು ನಮ್ಮ ದೇಹಕ್ಕೆ ಹೆಚ್ಚು ಸಿಗುತ್ತದೆ.

ನಮ್ಮ ದೇಹದ ವಿಷಕಾರಿ ಅಂಶಗಳು ದೇಹದಲ್ಲಿ ಉಳಿದುಕೊಂಡರೆ ಅದರಿಂದ ಮೂತ್ರನಾಳದ ಸೋಂಕು ಮತ್ತು ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗುತ್ತದೆ. ಈ ತರಹದ ಸಮಸ್ಯೆಗಳನ್ನು ಕಬ್ಬಿನ ಜ್ಯೂಸ್‌ ಮುಖ್ಯವಾಗಿ ನಮ್ಮ ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಮೂತ್ರದ ಮೂಲಕ ಹೊರ ಹಾಕುತ್ತದೆ. ಕಬ್ಬಿನ ರಸದಲ್ಲಿ ಅತ್ಯುತ್ತಮ ಪ್ರಮಾಣದ ಪೊಟ್ಯಾಶಿಯಂ ಅಂಶವಿರುವುದರಿಂದ ನಮ್ಮ ಹೊಟ್ಟೆಯ ಭಾಗದಲ್ಲಿ ಕಂಡು ಬರುವ ಪಿಹೆಚ್‌ ಮಟ್ಟವನ್ನು ಉತ್ತಮವಾಗಿಸುತ್ತದೆ.

ಇದನ್ನೂ ಓದಿ : Heart Attack: ಹದಿಹರೆಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; ಪೋಷಕರು ತೆಗೆದುಕೊಳ್ಳಲೇಬೇಕಿದೆ ಮುಂಜಾಗ್ರತಾ ಕ್ರಮ..!

ಇದನ್ನೂ ಓದಿ : High Cholesterol : ಈ 5 ಹಣ್ಣುಗಳನ್ನು ತಿನ್ನಿ; ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡಿಕೊಳ್ಳಿ…

ಇದನ್ನೂ ಓದಿ : Home Remedies for Diabetes : ಸಕ್ಕರೆ ಕಾಯಿಲೆ ಸಮಸ್ಯೆಗೆ, ಒಣ ನೆಲ್ಲಿಕಾಯಿ ಪುಡಿಯಲ್ಲಿದೆ ಚಮತ್ಕಾರ

ನಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಜೀರ್ಣರಸವನ್ನು ಉತ್ಪತ್ತಿ ಮಾಡಲು ನೆರವಾಗುತ್ತದೆ. ಇನ್ನೂ ದಪ್ಪ ಇರುವವರಿಗೆ ತೂಕವನ್ನು ಇಳಿಸುವಲ್ಲಿ ಕಬ್ಬಿನ ಜ್ಯೂಸ್‌ ತುಂಬಾ ಸಹಾಯ ಮಾಡುತ್ತದೆ. ಕಬ್ಬಿನ ಜ್ಯೂಸ್‌ನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಹೊಗಲಾಡಿಸುತ್ತದೆ. ಈ ಜ್ಯೂಸ್‌ನ್ನು ಕುಡಿಯುವುದರಿಂದ ಹಲ್ಲಿನ ಸಮಸ್ಯೆ ಹಾಗೂ ಬಾಯಿಯಲ್ಲಿ ಉಂಟಾಗುವ ದುರ್ವಾಸನೆಯನ್ನು ದೂರ ಮಾಡುತ್ತದೆ. ಹಲ್ಲುಗಳಲ್ಲಿರುವ ಎನಾಮೆಲ್‌ನ್ನು ರಕ್ಷಿಸುತ್ತದೆ.

Suffering from a bladder infection? So use sugarcane juice

Comments are closed.