ಬೆಂಗಳೂರು :bangalore acid attack accused nagesh : ಇಡೀ ರಾಜ್ಯ ರಾಜಧಾನಿಯಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ರಾಜಧಾನಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೀತಿ ಮಾಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಸುಂಕದಕಟ್ಟೆಯಲ್ಲಿ ಯುವತಿಯ ಮುಖಕ್ಕೆ ಆಸಿಡ್ ಎರಚಿ ಆರೋಪಿ ನಾಗೇಶ್ ತಲೆಮರೆಸಿಕೊಂಡಿದ್ದ . ಕಳೆದ 16 ದಿನಗಳಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ನಾಗೇಶ್ನನ್ನು ಪೊಲೀಸರು ಇಂದು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ಯುವತಿಗೆ ಆಸಿಡ್ ಎರಚಿದ ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಆರೋಪಿ ನಾಗೇಶ್ ಕಣ್ಮರೆಯಾಗಿದ್ದ. ನಾಗೇಶ್ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಕಾಮಾಕ್ಷಿ ಪಾಳ್ಯ ಲೇಔಟ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನ ಹಾವ ಭಾವ ಹಾಗೂ ಚಲನವಲನಗಳು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ . ಸ್ಥಳೀಯರ ಮಾಹಿತಿ ಆಧರಿಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ಸುಂಕದ ಕಟ್ಟೆಯ ಮುತ್ತೂಟ್ ಫಿನ್ಕಾರ್ಪ್ ಬಳಿಯಲ್ಲಿ 23 ವರ್ಷದ ಯುವತಿಯ ಮೇಲೆ ನಾಗೇಶ್ ಆಸಿಡ್ ದಾಳಿ ನಡೆಸಿದ್ದ. ಯುವತಿಯನ್ನು ಪ್ರೀತಿಸುವಂತೆ ನಾಗೇಶ್ ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದ್ದಳು. ಆದರೆ ಯುವತಿಯ ನಿರ್ಧಾರವನ್ನು ಒಪ್ಪಿಕೊಳ್ಳಲು ನಾಗೇಶ್ ಸಿದ್ಧನಿರಲಿಲ್ಲ. ಬರೋಬ್ಬರಿ ಏಳು ವರ್ಷಗಳಿಂದ ಈ ಹಗ್ಗಜಗ್ಗಾಟ ನಡೆಯುತ್ತಿತ್ತು ಎನ್ನಲಾಗಿದೆ. ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಯುವತಿ ಹೇಳಿದ್ದಕ್ಕೆ ಕೋಪಗೊಂಡ ನಾಗೇಶ್ ಮುತ್ತೂಟ್ ಫಿನ್ಕಾರ್ಪ್ ಎದುರು ಆಸಿಡ್ ಎರಚಿ ಎಸ್ಕೇಪ್ ಆಗಿದ್ದ.
ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಯುವತಿಯನ್ನು ಎಮರ್ಜೆನ್ಸಿ ವಾರ್ಡ್ನಿಂದ ಬರ್ನಿಂಗ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಯುವತಿಯು ನೀಡಿದ ಹೇಳಿಕೆ ಆಧರಿಸಿದ ಪೊಲೀಸರು ನಾಗೇಶ್ ಪತ್ತೆಗಾಗಿ ಬಲೆ ಬೀಸಿದ್ದರು 16 ದಿನಗಳ ಕಾರ್ಯಾಚರಣೆಯ ಬಳಿಕ ಪೊಲೀಸರು ಆಸಿಡ್ ನಾಗೇಶ್ನನ್ನು ಬಂಧಿಸಿಲಾಗಿದೆ .
ಇದನ್ನು ಓದಿ : MS Dhoni : ಸಿನಿಮಾ ನಿರ್ಮಾಣಕ್ಕೆ ಮುಂದಾದ್ರು ಮಹೇಂದ್ರ ಸಿಂಗ್ ಧೋನಿ
ಇದನ್ನೂ ಓದಿ : Hebri Mother Daughter Murder Case : ತಾಯಿ ಮತ್ತು ಮಗಳ ಕೊಲೆ ಪ್ರಕರಣ : 48 ಗಂಟೆಯೊಳಗೆ ಆರೋಪಿ ಬಂಧನ
bangalore acid attack accused nagesh arrested in tamil nadu