Top Upcoming Electric Cars in India : ಭಾರತದಲ್ಲಿ 2022ರಲ್ಲಿ ರಸ್ತೆಗೆ ಇಳಿಯಲಿರುವ ಟಾಪ್ ಎಲೆಕ್ಟ್ರಿಕಲ್‌ ಕಾರ್‌ಗಳು!!

ಕ್ಲೀನರ್‌ ಕಾರುಗಳನ್ನು ಖರೀದಿಸಲು ಬಯಸುತ್ತಿರುವ ಗ್ರಾಹಕರು ಹೈಬ್ರಿಡ್‌ ಪವರ್‌ ಟ್ರೇನ್‌ಗಳನ್ನು ಒದಗಿಸುವ ಹೆಚ್ಚು ಹೆಚ್ಚು ಮುಖ್ಯವಾಹಿನಿಯ ವಾಹನ ತಯಾರಕರಿಂದ ಪರ್ಯಾಯ ಕಾರ್‌ಗಳನ್ನು ಎದುರುನೋಡುತ್ತಿದ್ದಾರೆ. ಜೊತೆಗೆ ಇತ್ತೀಚೆಗೆ ಮಾರುಕಟ್ಟೆಗೆ ಸೇರಿರುವ ಎಲೆಕ್ಟ್ರಿಕ್‌ ಕಾರುಗಳ (Top Upcoming Electric Cars in India) ಸಂಖ್ಯೆ ಭಾರಿ ಏರಿಕೆಯಾಗಿದೆ. ಅತ್ಯುತ್ತಮ ಹೈಬ್ರಿಡ್‌ಗಳು ಮತ್ತು ಪ್ಲಗ್‌–ಇನ್‌ ಹೈಬ್ರಿಡ್‌ಗಳು ಇಂಧನ ದಕ್ಷತೆ ವಿಷಯದಲ್ಲಿ ಹಳೆಯ ಇಂಧನ ಆವೃತ್ತಿಗಳನ್ನು ಮೀರಿಸುವುದಲ್ಲದೆ, ಕಾರ್ಯಕ್ಷಮತೆಯ ದೃಷ್ಟಿಯಿಂದಲೂ ಅವುಗಳನ್ನು ಮೀರುಸುತ್ತದೆ. ಎಲೆಕ್ಟ್ರಿಕಲ್‌ ವೆಹಿಕಲ್‌ಗಳು ಆಕರ್ಷಕವಾಗಿವೆ, ಪ್ರಾಯೋಗಿಕವಾಗಿವೆ ಮತ್ತು ವೇಗದ ಚಾರ್ಜಿಂಗ್‌ ದರಗಳನ್ನು ನೀಡುತ್ತವೆ. ರೇಂಜ್‌ ಆಂಕ್ಸೈಟಿ ಅನ್ನು ತಡೆಯಲು ಸಾಕಷ್ಟು ಶ್ರೇಣಿಯನ್ನು ನೀಡುತ್ತವೆ.

2022 ರಲ್ಲಿ ರಸ್ತೆಗೆ ಇಳಿಯಲಿರುವ ಎಲೆಕ್ಟ್ರಿಕಲ್‌ ಕಾರ್‌ಗಳು :

  • ಹುಂಡೈ ಐಯೋನಿಕ್‌ 5 EV
    ಹುಂಡೈ ಕೋರಿಯಾದ ಆಟೋಮೇಕರ್‌ ಕಂಪನಿ 2022 ರ ಮಧ್ಯಂತರದಲ್ಲಿ ಭಾರತದಲ್ಲಿ ಐಯೋನಿಕ್‌ 5 EV ಕಾರ್‌ ಅನ್ನು ಪರಿಚಯಿಸುವ ನಿರೀಕ್ಷೆಯಿದೆ. ಹುಂಡೈ ಐಯೋನಿಕ್‌ 5 ಅನ್ನು 58kWh ಬ್ಯಾಟರಿ ಪ್ಯಾಕ್‌ ಮತ್ತು ದೊಡ್ಡ 77.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಅಂತಾರಾಷ್ಟ್ರೀಯವಾಗಿ ನೀಡಲಾಗುವುದು.

    ದೊಡ್ಡ ಬ್ಯಾಟರಿಯನ್ನು 4WD ಕಾನ್ಫಿಗರೇಶನ್‌ನೊಂದಿಗೆ ನಿರ್ದಿಷ್ಟಪಡಿಸಬಹುದು. ಎಲೆಕ್ಟ್ರಿಕಲ್‌ ಪವರ್‌ಟ್ರೈನ್‌ ಗರಿಷ್ಠ 305 bnp ಪವರ್‌ ಮತ್ತು 605Nm ಗರಿಷ್ಠ ಟಾರ್ಕ್‌ ಅನ್ನು ಹೊರಹಾಕುತ್ತದೆ. ಈ ಕಾರು 481 ಕಿಮೀ ದೂರವನ್ನು ಕ್ರಮಿಸಬಹುದಾಗಿದೆ.

ಇದನ್ನೂ ಓದಿ : Asha bhat Sudha murthy : ಇನ್ಪೋಸಿಸ್‌ ಸುಧಾಮೂರ್ತಿ ಅವರನ್ನು ಭೇಟಿ ಮಾಡಿದ ರಾಬರ್ಟ್‌ ಬೆಡಗಿ ಆಶಾ ಭಟ್‌ : Photo Viral

  • ಕಿಯಾ EV6
    ದಕ್ಷಿಣ ಕೋರಿಯಾದ ಕಾರು ತಯಾರಿಕಾ ಕಂಪನಿಯಾದ ಕಿಯಾದ ಮೊದಲ ಆಲ್‌– ಎಲೆಕ್ಟ್ರಿಕಲ್‌ ಕಾರ್‌ EV6 ಆಗಿದೆ. ಕಂಪನಿಯು ವಿಶೇಷವಾಗಿ EV ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದು E-GMP ಪ್ಲಾಟ್‌ಫಾರ್ಮ್‌ ಅನ್ನು ಆಧರಿಸಿರುವ ಹುಂಡೈ ಐಯೋನಿಕ್‌ 5 ನ ಸೋದರ ಸಂಬಂಧಿ ಎನ್ನಬಹುದು. ಜೂನ್‌ 2022 ರ ವೇಳೆಗೆ ಭಾರತದಲ್ಲಿ ಲಭ್ಯವಿರುತ್ತದೆ ಎಂದು ವರದಿಯಾಗಿದೆ.

    ಭಾರತದಲ್ಲಿ ಕಿಯಾ ನೀಡಲು ಉದ್ದೇಶಿಸಿರುವ ನಿರ್ದಷ್ಟ ಎಂಜಿನ್‌ ಕಾನ್ಫಿಗರೇಶನ್‌ ಸರಿಯಾಗಿ ತಿಳಿದಿಲ್ಲವಾದರೂ, ಪ್ರಪಂಚದಾದ್ಯಂತ ಲಭ್ಯವಿರುವ ವಿವಿಧ ಕಾರ್‌ಗಳಿಂದ ತಿಳಿದಿದೆ. ಇವುಗಳು ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುವ 58 kWh ಬ್ಯಾಟರಿ ಪ್ಯಾಕ್‌ ಆವೃತ್ತಿಯನ್ನು ಒಳಗೊಂಡಿವೆ. ರಿಯರ್‌–ವೀಲ್‌ ಡ್ರೈವ್‌ (RWD) ಜೊತೆಗೆ 170 hp ಉತ್ಪಾದಿಸುವ ಸಿಂಗಲ್‌ ಮೋಟಾರ್‌ ಮತ್ತುಆಲ್‌–ವೀಲ್‌–ಡ್ರೈವ್‌ (AWD) ಜೊತೆಗೆ 235hp ಉತ್ಪಾದಿಸುವ ಡ್ಯುಯಲ್‌–ಮೋಟಾರ್‌ ಸೆಟಪ್‌ ಹೊಂದಿದೆ.
  • ಹೊಂಡಾ ಸಿಟಿ ಹೈಬ್ರಿಡ್‌
    ಇದು ನಿಖರವಾಗಿ ಮುಂಬರುವ ಮಾದರಿಯಲ್ಲದಿದ್ದರೂ, ಇದು ಎಲೆಕ್ಟ್ರಿಕ್‌ ವಾನಗಳಿಗೆ ಯೋಗ್ಯವಾದ ಪ್ರತಿಸ್ಪರ್ಧಿ ಮತ್ತು ಪರಿಸರಕ್ಕೆ ಹೊಂದಿಕೊಂಡಿದೆ. ಹೊಂಡಾ ಸಿಟಿ ಹೈಬ್ರಿಡ್‌ ಅನ್ನು ಭಾರತದಲ್ಲಿ ರೂ. 19.49 ಲಕ್ಷಕ್ಕೆ ಬಿಡುಗಡೆ ಮಾಡಲಾಗಿದೆ. ಇದು ತಯಾರಕರ ಮೊದಲ ಸಮೂಹ–ಮಾರುಕಟ್ಟೆ ಎಲೆಕ್ಟ್ರಿಕ್‌ ವಾಹನವಾಗಿದೆ. ಅದರ ವಲಯದಲ್ಲಿ ಸ್ವಯಂ ಚಾರ್ಜಿಂಗ್‌ ಹೈಬ್ರಿಡ್‌ ವ್ಯವಸ್ಥೆಯನ್ನು ಸಂಯೋಜಿಸಿರುವ ಮೊದಲನೆಯದು.

    ಹೊಂಡಾ ಸಿಟಿ ಹೈಬ್ರಿಡ್‌ ಅನ್ನು ಪೆಟ್ರೋಲ್‌ ಎಂಜಿನ್‌ನೊಂದಿಗೆ ಎರಡು ಎಲೆಕ್ಟ್ರಿಕ್‌ ಮೋಟಾರ್‌ಗಳೊಂದಿಗೆ ಸಂಯೋಜಿಸಲಾಗುತ್ತಿದೆ. ಇದು 98PS ಮತ್ತು 127Nm ಟಾರ್ಕ್ನೊಂದಿಗೆ 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಎಲೆಕ್ಟ್ರಿಕ್‌ ಮೋಟಾರ್‌ಗಳು 109 PS ಅನ್ನು ಒದಗಿಸುತ್ತವೆ. ಒಟ್ಟು ವಿದ್ಯುತ್‌ ಉತ್ಪಾದನೆಯನ್ನು 126 PS ಗೆ ತರುತ್ತದೆ. ಗರಿಷ್ಠ ಟಾರ್ಕ್‌ 253 Nm ಆಗಿದೆ.

ಇದನ್ನೂ ಓದಿ : 1000 EV Charging Unit : ರಾಜ್ಯದಲ್ಲಿ ಹೆಚ್ಚುವರಿ 1000 ಇವಿ ಚಾರ್ಜಿಂಗ್ ಘಟಕ : ಸಚಿವ ಸುನಿಲ್‌ ಕುಮಾರ್‌

(Top Upcoming Electric Cars in India 2022 Kia EV6, Hyundai Ioniq 5 EV)

Comments are closed.