Bangalore Crime : ಯುವತಿಯ ಪ್ರೀತಿಗೆ ಇದೆಂತಾ ಶಿಕ್ಷೆ : ಯುವಕನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪಾಪಿಗಳು

ಬೆಂಗಳೂರು : Bangalore Crime : ಸಂಬಂಧಿಕರ ಯುವತಿಯನ್ನು ಪ್ರೀತಿಸಿದ ತಪ್ಪಿಗೆ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಯನ್ನು ಕಿಡ್ನಾಪ್‌ ಮಾಡಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿರುವ ಘಟನೆ ಸಿಲಿಕಾನ್‌ ಸಿಟಿಯ ಕುಂಬಳಗೋಡಿನಲ್ಲಿ ನಡೆದಿದೆ. ಸದ್ಯ ಅರೆಬೆಂದ ಯುವಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬೆಂಗಳೂರು ನಗರದ ಆರ್‌ಆರ್‌ ನಿವಾಸಿ ಶಶಾಂಕ್‌ ಎಂಬಾತನೇ ಹಲ್ಲೆಗೆ ಒಳಗಾದವನು. ಮೈಸೂರು ಮೂಲದ ತನ್ನದೇ ಕುಟುಂಬದ ಯುವತಿಯನ್ನು ಶಶಾಂಕ್‌ ಪ್ರೀತಿ ಮಾಡುತ್ತಿದ್ದ. ಶಶಾಂಕ್‌ ಯುವತಿಯನ್ನು ಸೋಮವಾರ ಯುವತಿ ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದಳು. ಹೀಗಾಗಿ ಶಶಾಂಕ್‌ ಬೆಂಗಳೂರಿನ ಆರ್‌ಆರ್‌ ನಗರದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ.

ಯುವತಿಯನ್ನು ಬೆನ್ನಟ್ಟಿಕೊಂಡು ಬಂದಿದ್ದ ಯುವತಿಯ ಪೋಷಕರು ಶಶಾಂಕ್‌ ಮನೆಗೆ ಬಂದು ವಾರ್ನಿಂಗ್‌ ಕೊಟ್ಟು, ಯುವತಿಯನ್ನು ಕರೆದುಕೊಂಡು ಹೋಗಿದ್ದರು. ಇನ್ಮುಂದೆ ತಾನು ಯುವತಿಯ ವಿಚಾರಕ್ಕೆ ತಲೆ ಹಾಕುವುದಿಲ್ಲ ಅಂತಾನೂ ಹೇಳಿದ್ದ. ಆದರೆ ಶಶಾಂಕ್‌ ಕಾಲೇಜಿಗೆ ತೆರಳುತ್ತಿದ್ದ ವೇಳೆಯಲ್ಲಿ ಇನ್ನೋವಾ ಕಾರಿನಲ್ಲಿ ಬಂದಿದ್ದ ಯುವಕರ ತಂಡ ಕಿಡ್ನಾಪ್‌ ಮಾಡಿದ್ದು, ಕುಂಬಳಗೋಡಿನಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೈಕಾಲು ಕಟ್ಟಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದಾರೆ.

ಇದನ್ನೂ ಓದಿ : Heavy Rainfall : ಭಾರೀ ಮಳೆಯಿಂದ ಭೂಕುಸಿತ, ಪ್ರವಾಹಕ್ಕೆ ಸಿಲುಕಿ 30 ಕ್ಕೂ ಹೆಚ್ಚು ಮಂದಿ ಸಾವು

ಇದನ್ನೂ ಓದಿ : Rajasthan Gangrape Case : 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ, ಆಸಿಡ್ ಎಸೆದು ಹತ್ಯೆ

ಸ್ಥಳೀಯರು ಶಶಾಂಕ್‌ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಶಾಂಕ್‌ ದೇಹ ಶೇ.70 ರಷ್ಟು ಸುಟ್ಟು ಹೋಗಿದ್ದು, ಈ ಕುರಿತು ಕುಂಬಳಗೋಡು ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.

Bangalore Crime: This is the punishment for the love of a young woman: Sinners who poured petrol on a young man and set him on fire

Comments are closed.