ಭಾನುವಾರ, ಏಪ್ರಿಲ್ 27, 2025
HomeCrimeCrime News : ಯುವತಿಯನ್ನು ನಗ್ನಗೊಳಿಸಿ ವಿಡಿಯೋ : ಹಣಕ್ಕೆ ಡಿಮ್ಯಾಂಡ್‌ ಇಟ್ಟ ಆರೋಪಿಗಳ ಬಂಧನ

Crime News : ಯುವತಿಯನ್ನು ನಗ್ನಗೊಳಿಸಿ ವಿಡಿಯೋ : ಹಣಕ್ಕೆ ಡಿಮ್ಯಾಂಡ್‌ ಇಟ್ಟ ಆರೋಪಿಗಳ ಬಂಧನ

- Advertisement -

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಕಾಮುಕರ ಅಟ್ಟಹಾಸ ಮೇರೆ ಮೀರಿದೆ. ಮಟ ಮಟ ಮಧ್ಯಾಹ್ನವೇ ಯುವತಿಯೋರ್ವಳನ್ನು ನಗ್ನಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲಾ ನಗ್ನ ವಿಡಿಯೋ ಶೂಟ್‌ ಮಾಡಿ ಹಣಕ್ಕೆ ಡಿಮ್ಯಾಂಡ್‌ ಮಾಡಿ ಇದೀಗ, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಮೈಸೂರಿನಲ್ಲಿ ನಡೆದಿದ್ದ ಗ್ಯಾಂಗ್‌ ರೇಪ್‌ ಪ್ರಕರಣದ ಬೆನ್ನಲ್ಲೇ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸಿಲಿಕಾನ್‌ ಸಿಟಿಯಲ್ಲಿ ಇದೀಗ ಕಾರಿನಲ್ಲಿ ಕುಳಿತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿರುವ ಅನುಗೊಂಡನಹಳ್ಳಿಯಲ್ಲಿ ನಿವೇಶನ ಕೊಳ್ಳಲು ಯುವತಿಯೋರ್ವಳು ಬಂದಿದ್ದಾಳೆ. ಈ ವೇಳೆಯಲ್ಲಿ ನಿವೇಶನ ವೀಕ್ಷಣೆ ಮಾಡಿ ಕಾರಿನಲ್ಲಿ ಕುಳಿತಿದ್ದ ಯುವತಿಯನ್ನು ಹೊರಗೆ ಎಳೆದ ಕಾಮುಕರು ಯುವತಿಯನ್ನು ನಗ್ನಗೊಳಿಸಿ ವಿಡಿಯೋ ಶೂಟ್‌ ಮಾಡಿದ್ದಾರೆ. ಅಲ್ಲದೇ ಯುವತಿಗೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ.

ನಂತರದಲ್ಲಿ ಐದು ಲಕ್ಷ ರೂಪಾಯಿ ಹಣವನ್ನು ನೀಡಬೇಕು ಇಲ್ಲವಾದ್ರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇವೆ. ಹಣ ನೀಡಿದ್ರೆ ವಿಡಿಯೋ ಡಿಲೀಟ್‌ ಮಾಡುವುದಾಗಿ ತಿಳಿಸಿದ್ದಾರೆ. ಈ ವೇಳೆಯಲ್ಲಿ ಕುರಿ ಕಾಯುತ್ತಿದ್ದ ವ್ಯಕ್ತಿ ಸ್ಥಳಕ್ಕೆ ಬರುತ್ತಿದ್ದಂತೆಯೇ ಅವರೆಲ್ಲಾ ಎಸ್ಕೇಪ್‌ ಆಗಿದ್ದಾರೆ. ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿಗಳಾದ ಆಸಿಫ್ (29 ವರ್ಷ), ನವಾಜ್ ಪಾಷಾ(22 ವರ್ಷ), ಲಿಯಾಖತ್ ಪಾಷಾ (30 ವರ್ಷ ), ಸಲ್ಮಾನ್ ಖಾನ್ (28 ವರ್ಷ ) ಹಾಗೂ ರೋಹಿದ್ (26 ವರ್ಷ) ಎಂಬವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನುಗೊಂಡನಹಳ್ಳಿ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ತಂಡ ಬೇರೆ ಕಡೆಯಲ್ಲಿಯೂ ಇಂತಹದ್ದೇ ಪ್ರಕರಣ ನಡೆಸಿದೆಯಾ ಅನ್ನೋ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಆದರೆ ಬೆಂಗಳೂರು ಹೊರವಲಯದಲ್ಲಿ ನಡೆದಿರುವ ಘಟನೆ ಇದೀಗ ಸಿಲಿಕಾನ್‌ ಸಿಟಿ ಜನರಿಗೆ ಶಾಕ್‌ ಮೂಡಿಸಿದೆ.

ಇದನ್ನೂ ಓದಿ : ಕೊರೊನಾದಿಂದ 20 ಲಕ್ಷ ಸಾಲದ ಹೊರೆ, 4 ಹೆಣ್ಣು ಮಕ್ಕಳೊಂದಿಗೆ ಹೊಳೆಗೆ ಹಾರಿದ ಮಹಿಳೆ

ಇದನ್ನೂ ಓದಿ : ಮಹಿಳಾ ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಸಾಮೂಹಿಕ ಅತ್ಯಾಚಾರ

( Arrest of accused for making nude video and demanding money )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular