Bangalore Suicide case: ಮಕ್ಕಳಿಗೆ ಮದುವೆ ಆಗಿಲ್ಲ ಎಂಬ ಚಿಂತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಂಗಳೂರು: ( Bangalore Suicide case) ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್‌ ನಲ್ಲಿರುವ ಆಂಜನೇಯ ದೇಗುಲದ ಬಳಿಯಲ್ಲಿ ನಡೆದಿದೆ. ತಾಯಿ ಯಶೋಧಾ(70 ವರ್ಷ), ಮಗಳು ಸುಮನ(41 ವರ್ಷ), ಮಗ ನರೇಶ್ ಗುಪ್ತಾ(36 ವರ್ಷ) ಆತ್ಮಹತ್ಯೆಗೆ ಶರಣಾದ ವ್ಯಕ್ತಿಗಳು. ಮೇಲ್ನೋಟಕ್ಕೆ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಮೃತ ತಾಯಿ ಯಶೋದಾ ಅವರಿಗೆ ಮೂವರು ಮಕ್ಕಳಿದ್ದು, ಮಗಳಿಗೆ ಮದುವೆ ಆಗಿ ರಾಜಾಜಿನಗರದಲ್ಲಿ ನೆಲೆಸಿದ್ದರು. ಇನ್ನೋರ್ವ ಮಗಳು ಹಾಗೂ ಮಗ ತಾಯಿ ಜೊತೆಗೆ ಮಹಾಲಕ್ಷ್ಮಿ ಲೇಔಟ್‌ ಬಳಿಯಲ್ಲಿ ನೆಲೆಸಿದ್ದಾರೆ. ಮೃತ ನರೇಶ್‌ ಕಾಂಟ್ರ್ಯಾಕ್ಟ್‌ ಕೆಲಸ ಮಾಡಿಕೊಂಡಿದ್ದ. ತಾಯಿ ಜೊತೆ ವಾಸವಾಗಿದ್ದ ಇಬ್ಬರೂ ಮಕ್ಕಳಿಗೂ ಮದುವೆ ಆಗಿರಲಿಲ್ಲ ಇದೇ ಕಾರಣಕ್ಕೆ ಮೂವರು ವಿಷ ಸೇವಿಸಿ ಆತ್ಮಹತ್ಯೆ ( Bangalore Suicide case) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸಂಬಂಧಿಕರು ಹಲವು ಬಾರಿ ಯಶೋಧಾ ಅವರಿಗೆ ಕರೆ ಮಾಡಿದ್ದು, ಅವರು ಕರೆ ಸ್ವೀಕರಿಸಿರಲಿಲ್ಲ. ಹಾಗಾಗಿ ರಾಜಾಜಿನಗರದಲ್ಲಿ ವಾಸವಾಗಿರುವ ಮಗಳಿಗೆ ಸಂಬಂಧಿಕರು ಕರೆ ಮಾಡಿದ್ದಾರೆ. ಆಕೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಆತ್ಮಹತ್ಯೆಗೆ ನಿಖರ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ : Coffee Plantation Owner : ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರ ಮೇಲೆ ಅಸ್ಸಾಂ ಕಾರ್ಮಿಕರಿಂದ ಹಲ್ಲೆ

ಇದನ್ನೂ ಓದಿ : Ballari Road Accident : ಬಸ್‌ ಹರಿದು ಮೂವರು ಹಾಸ್ಟೇಲ್‌ ವಿದ್ಯಾರ್ಥಿಗಳ ಸಾವು

ಇದನ್ನೂ ಓದಿ : Haryana Accident : ದಟ್ಟ ಮಂಜಿನಿಂದಾಗಿ ಸರಣಿ ಅಪಘಾತ, ಹಲವು ವಾಹನಗಳು ಜಖಂ : 4 ಮಂದಿಗೆ ತೀವ್ರ ಗಾಯ

ಮಹಾಲಕ್ಷ್ಮಿ ಲೇಔಟ್‌ 11ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೂರು ದಾಖಲಾಗಿದೆ. ಮೃತದೇಹಗಳನ್ನು ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ತನಿಖೆ ನಂತರ ನಿಖರ ಮಾಹಿತಿಗಳು ತಿಳಿದುಬರಿಲಿದೆ.

ಇದನ್ನೂ ಓದಿ : Madhyapradesh fire accident: ಗುಡಿಸಲಿಗೆ ಬೆಂಕಿ: ವೃದ್ದ ದಂಪತಿ ಸಜೀವ ದಹನ

ಇದನ್ನೂ ಓದಿ : Nelamangala car accident: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ : ಪಾದಚಾರಿ ಸಾವು

ಇದನ್ನೂ ಓದಿ : Maharashtra Gangrape:16 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್:‌ 8 ಮಂದಿ ಬಂಧನ

( Bangalore Suicide case) The incident in which three members of the same family committed suicide took place near Anjaneya Temple in Mahalakshmi Lay Out, Bangalore. Mother Yashodha (70 years), daughter Sumana (41 years), son Naresh Gupta (36 years) committed suicide. It is suspected that the three committed suicide by consuming poison.

Comments are closed.