LPG Cylinders: ಬಿಪಿಎಲ್​ ಕಾರ್ಡ್​ದಾರರಿಗೆ 500 ರೂಪಾಯಿಗೆ ಎಲ್​ಪಿಜಿ ಸಿಲಿಂಡರ್​​​ : ಶೀಘ್ರದಲ್ಲೇ ಯೋಜನೆ ಜಾರಿ

ರಾಜಸ್ಥಾನ : LPG Cylinders : ತಮ್ಮ ರಾಜ್ಯದ ಬಿಪಿಎಲ್​ ಮತ್ತು ಉಜ್ವಲಾ ವರ್ಗದ ಜನರಿಗೆ ತಲಾ ಐದು ನೂರು ರೂಪಾಯಿಗಳಿಗೆ ಗ್ಯಾಸ್​ ಸಿಲಿಂಡರ್​​ ನೀಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​​​ ಘೋಷಣೆ ಮಾಡಿದ್ದಾರೆ. ಅಲ್ವಾರ್​​ ಜಿಲ್ಲೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಅಶೋಕ್​ ಗೆಹ್ಲೋಟ್​, ಬೆಲೆ ಏರಿಕೆ ಎನ್ನುವುದು ನಮ್ಮ ಮುಂದಿರುವ ಗಂಭೀರ ವಿಚಾರವಾಗಿದೆ. ಮುಂದಿನ ವರ್ಷ ಏಪ್ರಿಲ್​ 1ರ ಬಳಿಕ ಬಿಪಿಎಲ್​ ಕುಟುಂಬಗಳಿಗೆ ತಲಾ ಐದು ನೂರು ರೂಪಾಯಿಗಳಂತೆ ವರ್ಷದಲ್ಲಿ 12 ಗ್ಯಾಸ್​ ಸಿಲಿಂಡರ್​​ಗಳನ್ನು ನೀಡುತ್ತೇವೆ. ಸರ್ಕಾರದ ಕಲ್ಯಾಣ ಯೋಜನೆಯಿಂದ ಯಾರೂ ವಂಚಿತರಾಗಬಾರದು ಎಂದು ಹೇಳಿದ್ದಾರೆ.


ನಮ್ಮ ಸರ್ಕಾರವು ವಿವರಗಳನ್ನು ಅಧ್ಯಯನ ಮಾಡುತ್ತಿದೆ. ಮುಂದಿನ ತಿಂಗಳು ವಿಧಾನಸಭೆಯಲ್ಲಿ ಬಜೆಟ್​ ಮಂಡಿಸುತ್ತೇನೆ. ನಾನು ಕೇವಲ ಒಂದು ವಿಷಯವನ್ನು ಹೇಳಲು ಇಚ್ಛಿಸುತ್ತೇನೆ. ಉಳಿದ ಘೋಷಣೆಗಳನ್ನು ನಾನು ಬಜೆಟ್​​ನಲ್ಲಿ ಮಾಡುತ್ತೇನೆ. ಉಜ್ವಲ ಯೋಜನೆ ಹೆಸರಿನಲ್ಲಿ ಪ್ರಧಾನಿ ಮೋದಿ ಎಲ್​ಪಿಜಿ ಕನೆಕ್ಷನ್​ ಮತ್ತು ಗ್ಯಾಸ್​ ಸ್ಟೌ ಕೊಡುವ ನಾಟಕ ಮಾಡಿದ್ದಾರೆ. 400 ರೂಪಾಯಿ ಇದ್ದ ಸಿಲಿಂಡರ್​ ಬೆಲೆ 1040 ರೂಪಾಯಿಗೆ ಏರಿಕೆ ಮಾಡಿದ್ದಾರೆ. ಹೀಗಾಗಿ ಯಾರೂ ಎಲ್​ಪಿಜಿ ಖರೀದಿ ಮಾಡುತ್ತಿಲ್ಲ. ಇದೆಲ್ಲವನ್ನು ನಾವು ಅಧ್ಯಯನ ಮಾಡಿದ್ದೇವೆ. ಏಪ್ರಿಲ್​ 1ರಿಂದ ನಮ್ಮ ರಾಜ್ಯದ ಜನತೆಗೆ 12 ಸಿಲಿಂಡರ್​ಗಳು ಸಿಗಲಿದೆ. ಈಗಿನ ಬೆಲೆ 1040 ರೂಪಾಯಿಯ ಬದಲಿಗೆ ಪ್ರತಿ ವರ್ಷ 500 ರೂಪಾಯಿಗೆ ಸಿಗಲಿದೆ ಎಂದು ಗೆಹ್ಲೋಟ್​ ಹೇಳಿದ್ದಾರೆ.

ಮುಂದಿನ ವರ್ಷ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನ ಅಶೋಕ್​ ಗೆಹ್ಲೋಟ್​ ಇಂತಹದ್ದೊಂದು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ವಿಜಯಶಾಲಿಯಾಗಿ ಹೊರಹೊಮ್ಮಿದೆ. 200 ವಿಧಾನಸಭಾ ಸ್ಥಾನಗಳಲ್ಲಿ 100 ಸ್ಥಾನವನ್ನು ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಿತ್ತು. ಈ ಬಾರಿ ಆಂತರಿಕ ಕಲಹ ಜೋರಾಗಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರಗೊಳ್ಳುವ ನಿರೀಕ್ಷೆಯಿದೆ ಎಂದು ರಾಜಕೀಯ ಪಂಡಿತರು ಹೇಳ್ತಿದ್ದಾರೆ.

ಇದನ್ನು ಓದಿ : Karnataka Assembly Election : 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ : ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇಲ್ಲಿದೆ

ಇದನ್ನೂ ಓದಿ : News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?

LPG Cylinders At Just Rs 500 In THIS State From Next Year. Deets Here

Comments are closed.