bengali actress pallavi dey : ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಫ್ಲಾಟ್​ನಲ್ಲಿ ಶವವಾಗಿ ಪತ್ತೆ

bengali actress pallavi dey : ಬೆಂಗಾಲಿ ಕಿರುತೆರೆಯ ಪ್ರಸಿದ್ಧ ನಟಿ ಪಲ್ಲವಿ ಡೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಗರ್ಫಾದಲ್ಲಿರುವ ಫ್ಲಾಟ್​ನಲ್ಲಿ ಪಲ್ಲವಿ ವಾಸವಿದ್ದರು. ಇದೇ ಫ್ಲಾಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪಲ್ಲವಿ ಮೃತ ದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಆತ್ಮಹತ್ಯೆ ಎಂದು ತಿಳಿದು ಬಂದಿದೆ .


ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಪೊಲೀಸ್​ ಅಧಿಕಾರಿ, ಈ ಘಟನೆ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಕೂಡಲೇ ಫ್ಲಾಟ್​ಗೆ ತೆರಳು ಪಲ್ಲವಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಪಲ್ಲವಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.


ಆದರೆ ಪಲ್ಲವಿ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ ಎಂಬುದು ಆಕೆಯ ಪೋಷಕರ ವಾದವಾಗಿದೆ. ನಮ್ಮ ಮಗಳು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುವ ಪೈಕಿಯಲ್ಲ. ಇಲ್ಲಿ ಬೇರೆಯದ್ದೇನೋ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಪಲ್ಲವಿ ಸಾಗ್ನಿಕ್​​ ಚಕ್ರವರ್ತಿ ಜೊತೆ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದರು. ಹೀಗಾಗಿ ಪೊಲೀಸರು ಪ್ರಕರಣ ಸಂಬಂಧ ಸಾಗ್ನಿಕ್​ ಚಕ್ರವರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ


ಆದರೆ ಈ ಆರೋಪಗಳನ್ನು ತಳ್ಳಿ ಹಾಕಿರುವ ಸಾಗ್ನಿಕ್​ ಪೋಷಕರು ಪಲ್ಲವಿ ಹಾಗೂ ಸಾಗ್ನಿಕ್​ ನಡುವೆ ಆತ್ಮಹತ್ಯೆ ಮಾಡಿಕೊಳ್ಳುವಂತ ಸಮಸ್ಯೆ ಇರಲಿಲ್ಲ. ನಮಗೂ ಅವರ ಲಿವ್​ ಇನ್​ ರಿಲೇಷನ್​ಶಿಪ್​ ಬಗ್ಗೆ ಕೊಂಚ ಅಸಮಾಧಾನವಿತ್ತು. ಮದುವೆಯಾಗಿಯೇ ಒಟ್ಟಿಗೆ ಇರಬಹುದಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿತ್ತು. ಈ ಬಗ್ಗೆ ನಾವು ಸಾಗ್ನಿಕ್​ ಜೊತೆಯಲ್ಲಿಯೂ ಮಾತನಾಡಿದ್ದೆವು. ನಮಗೆ ತಿಳಿದ ಹಾಗೆ ಅವರ ನಡುವೆ ಅಂತಹ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದಾರೆ.


ಮೃತ ಪಲ್ಲವಿ ಡೇ ಪ್ರಸ್ತುತಯ ಮೊನೆ ಮನೆ ನಾ ಧಾರವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಧಾರವಾಹಿಯಲ್ಲಿ ಪಲ್ಲವಿಗೆ ಜೋಡಿಯಾಗಿ ನಾಯಕನ ಪಾತ್ರದಲ್ಲಿ ಸ್ಯಾಮ್​ ಭಟ್ಟಾಚಾರ್ಯ ನಟಿಸುತ್ತಿದ್ದರು. ಇದಕ್ಕೂ ಮೊದಲು ಪಲ್ಲವಿ ಡೇ ನಟಿಸಿದ್ದ ರೇಷಮ್​ ಝಾನ್ಸಿ ಹಾಗೂ ಅಮಿ ಸಿರ್ಜೇರ ಧಾರವಾಹಿಗಳು ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದವು.
ಮೊನೆ ಮನೆ ನಾ ಧಾರವಾಹಿಯಲ್ಲಿ ನಟಿಸುತ್ತಿರುವ ಅನಮಿತ್ರ ಬತಾಬ್ಯಾನ್​ ಈ ವಿಚಾರವಾಗಿ ಆಘಾತ ಹೊರ ಹಾಕಿದ್ದು, ಮೇ 12ರಂದು ನಾವು ಒಟ್ಟಾಗಿ ನಟಿಸಿದ್ದೆವು. ನಾವು ಅಂದು ಚೆನ್ನಾಗಿಯೇ ಮಾತುಕತೆ ನಡೆಸಿದ್ವಿ. ನಿಜಕ್ಕೂ ಇದೊಂದು ಶಾಕಿಂಗ್​ ನ್ಯೂಸ್​, ನನಗೆ ಇವುಗಳನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇದನ್ನು ಓದಿ : Tomato fever in Udupi : ಉಡುಪಿಯ 4 ವರ್ಷದ ಮಗುವಿಗೆ ಟೊಮೆಟೊ ಜ್ವರ ? ಸ್ಪಷ್ಟನೆ ಕೊಟ್ಟ ಆರೋಗ್ಯ ಇಲಾಖೆ

ಇದನ್ನೂ ಓದಿ : IPL 2022 AB de Villiers : ಆರ್‌ಸಿಬಿಗೆ ಮರಳಲಿದ್ದಾರೆ ಎಬಿ ಡಿವಿಲಿಯರ್ಸ್ : ವಿರಾಟ್‌ ಕೊಹ್ಲಿ ಹೇಳಿಕೆ

bengali actress pallavi dey passes away pallavis family alleges foul play

Comments are closed.