ಮಂಗಳವಾರ, ಏಪ್ರಿಲ್ 29, 2025
HomeCrimeSister in Law kidnapped : ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್‌ ಮಾಡಿದ ಬಾವ

Sister in Law kidnapped : ಮದುವೆಯಾಗಲು ನಾದಿನಿಯನ್ನೇ ಕಿಡ್ನಾಪ್‌ ಮಾಡಿದ ಬಾವ

- Advertisement -

ಬೆಂಗಳೂರು : ಪತ್ನಿಯ ಸಹೋದರಿಯ ಪ್ರೀತಿಗೆ ಬಿದ್ದಿದ್ದ ವ್ಯಕ್ತಿಯೋರ್ವ ಮದುವೆಯಾಗಲು ನಿಕಾರಿಸಿದ ನಾದಿನಿಯನ್ನೇ ಕಿಡ್ನಾಪ್‌ (Sister in Law kidnapped) ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ದೇವರಾಜ್‌ ಎಂಬಾತನಿಗೆ ಈಗಾಗಲೇ ಮದುವೆಯಾಗಿತ್ತು. ಮದುವೆಯಾದ ನಂತರದಲ್ಲಿ ಪತ್ನಿಯ ತಂಗಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದ. ಆದರೆ ಬಾವನ ಪ್ರೀತಿಯನ್ನು ನಾದಿನಿ ನಯವಾಗಿಯೇ ತಿರಸ್ಕರಿಸಿದ್ದಳು. ಆದರೆ ಇದು ದೇವರಾಜ್‌ನನ್ನು ಕೆರಳುವಂತೆ ಮಾಡಿತ್ತು. ಕೊನೆಗೆ ದೇವರಾಜ್‌ ತನ್ನನ್ನು ಮದುವೆಯಾಗುವಂತೆ ಪೀಡಿಸುವುದಕ್ಕೆ ಶುರು ಮಾಡಿದ್ದಾನೆ. ನಾದಿನಿ ಒಪ್ಪದೇ ಇದ್ದಾಗ ದೇವರಾಜ್‌ ಆಕೆಯನ್ನು ಕಿಡ್ನಾಪ್‌ ಮಾಡಿದ್ದಾನೆ.

ನಾದಿನಿಯನ್ನು ಬಲವಂತವಾಗಿ ಮದುವೆಯಾಗುವ ಸಲುವಾಗಿ ತನ್ನ ಸ್ನೇಹಿತರಾದ ನವೀನ್‌ ಹಾಗೂ ಕುಮಾರ್‌ ಅವರ ಜೊತೆಗೆ ಸೇರಿಕೊಂಡು ನಾದಿನಿಯನ್ನು ಕಿಡ್ನಾಪ್‌ ಮಾಡಿದ್ದಾನೆ. ಈ ಕುರಿತು ಯುವತಿಯ ಪೋಷಕರು ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಅಂತಿಮವಾಗಿ ಕೊಡಿಗೆಹಳ್ಳಿ ಠಾಣೆಯ ಪೊಲೀಸರು ಆರೋಪಿಗಳಾದ ದೇವರಾಜ್‌, ನವೀನ್‌ ಹಾಗೂ ಕುಮಾರ್‌ ಎಂಬವರನ್ನು ಬಂಧಿಸಿ, ಯುವತಿಯನ್ನು ರಕ್ಷಿಸಿದ್ದಾರೆ.

ಪತಿಯೊಂದಿಗೆ ಮನೆಯಲ್ಲಿದ್ದ ವೇಳೆ ಪತ್ನಿ ಅನುಮಾನಾಸ್ಪದ ಸಾವು: ಪತಿ ಸ್ಥಿತಿ ಗಂಭೀರ

52 ವರ್ಷದ ಮಹಿಳೆಯು ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆಯು ದಕ್ಷಿಣ ದೆಹಲಿಯ ಸಾಕೇತ್​​ನಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈಯಲಾಗಿದ್ದು ಆಕೆಯ ಪತಿಗೆ ಗಂಭೀರ ಗಾಯಗಳಾಗಿವೆ ಎಂದು ಸಾಕೇತ್​​ನ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ದಂಪತಿಯ ಸೋದರಳಿಯ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ವೇಳೆಯಲ್ಲಿ ಸೋದರಳಿಯ ನನಗೆ ನನ್ನ ಅತ್ತೆಯು ಕರೆ ಮಾಡಿ ಆದಷ್ಟು ನಮ್ಮ ಮನೆಗೆ ಆಗಮಿಸುವಂತೆ ಹೇಳಿದ್ದರು. ಕೂಡಲೇ ಸೋದರಳಿಯ ಅವರ ಮನೆಗೆ ತೆರಳಿದ ವೇಳೆ ಮಾವ ಮನೆ ಬಾಗಿಲನ್ನು ತೆರೆದರು. ಆಗ ಅವರ ಬಟ್ಟೆಯಲ್ಲಾ ರಕ್ತಸಿಕ್ತವಾಗಿತ್ತು. ಹಾಗೂ ಅವರ ಕುತ್ತಿಗೆಯ ಮೇಲೆ ಆಳವಾದ ಗಾಯವಾಗಿತ್ತು.

57 ವರ್ಷದ ಮೃತ ಮಹಿಳೆಯ ಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಯಾವುದೇ ಹೇಳಿಕೆಗಳನ್ನು ನೀಡಲು ಶಕ್ತರಿಲ್ಲದ ಕಾರಣ ಇಲ್ಲಿಯವರೆಗೆ ಅವರನ್ನು ವಿಚಾರಣೆಗೊಳಪಡಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಂಪತಿ ವಾಸವಿದ್ದ ಮನೆಗೆ ದೆಹಲಿ ಕ್ರೈಂ ಬ್ರ್ಯಾಂಚ್​ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆಯ ದಂಪತಿ ವಾಸವಿದ್ದ ಮನೆಯ ಮಲಗುವ ಕೋಣೆಯ ಪಕ್ಕದಲ್ಲಿರುವ ಡ್ರಾಯಿಂಗ್​ ರೂಮ್​ನಲ್ಲಿ ರಕ್ತದ ಕಲೆಯನ್ನು ಹೊಂದಿದ್ದ ಚಾಕು ಪತ್ತೆಯಾಗಿದೆ. ಅಪರಾಧ ನಡೆದ ಸ್ಥಳದಿಂದ ಸಂಬಂಧ ಪಟ್ಟ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : Karnataka : ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂಬರ್​ 1

ಇದನ್ನೂ ಓದಿ : 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

( Brother in Law kidnapped by Sister in Law forcing her to Marry Kodigehalli police station limits Bangalore)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular