Nayanthara : ಕ್ಲೈಮ್ಯಾಕ್ಸ್ ಹಂತಕ್ಕೆ ಕಬ್ಜ ಶೂಟಿಂಗ್ : ಉಪ್ಪಿ-ಸುದೀಪ್ ಸಿನಿಮಾಕ್ಕೆ ನಾಯಕಿಯಾದ್ರಾ ನಯನತಾರಾ?!

ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ಬಹುನೀರಿಕ್ಷಿತ ಸಿನಿಮಾಗಳ ಭರಾಟೆ ಒಂದೆಡೆಯಾದರೇ, ಇನ್ನು ಶೂಟಿಂಗ್ ಹಂತದಲ್ಲೇ ಸದ್ದು ಮಾಡ್ತಿರೋ ಸಿನಿಮಾಗಳು ಕೆಲವು.‌ ಇಂಥ ಸಿನಿಮಾಗಳಲ್ಲಿ ಅಭಿಮಾನಿಗಳನ್ನು ಸೆಳಿತೀರೋದು ಮಲ್ಟಿ ಸ್ಟಾರ್ ಸಿನಿಮಾ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಈ ಚಿತ್ರ ಸಾಕಷ್ಟು ಕುತೂಹಲ‌ ಮೂಡಿಸಿದೆ. ಅದರಲ್ಲೂ ಚಿತ್ರದ ನಾಯಕಿಯಾಗಿ ನಯನತಾರಾ ( Nayanthara) ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಕೊರೋನಾ ನಡುವೆಯೂ ಸದ್ದಿಲ್ಲದೇ ಈ ಸಿನಿಮಾ ಈಗಾಗಲೇ ಸಿನಿಮಾ ಶೂಟಿಂಗ್ ಪೂರ್ತಿಗೊಳಿಸಿದೆ. ಇನ್ನೇನು ಕ್ಲೈಮ್ಯಾಕ್ಸ್ ಹಂತದಲ್ಲಿರೋ ಈ ಸಿನಿಮಾ ಶೂಟಿಂಗ್ ಗೆ ಫೆ.1 ರಿಂದ ಮತ್ತೆ ಚಾಲನೆ ನೀಡಲು ನಿರ್ದೇಶಕರು ಸಿದ್ಧತೆ ನಡೆಸಿದ್ದಾರೆ. ಹೈದ್ರಾಬಾದ್ ನಲ್ಲಿ ಫೆಬ್ರವರಿ ೧ ರಿಂದ ಸಿನಿಮಾ ಫೈನಲ್ ಶೂಟಿಂಗ್ ನಡೆಯಲಿದ್ದು, ಇದಕ್ಕಾಗಿ ನಿರ್ದೇಶಕರು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ.

ಅಂತಿಮ ಹಂತದ ಕಬ್ಜ ಸಿನಿಮಾ ಶೂಟಿಂಗ್ ಗಾಗಿ ಹೈದ್ರಾಬಾದ್ ನಲ್ಲಿ ಅದ್ದೂರಿ ಸೆಟ್ ಕೂಡ ಹಾಕಲಾಗಿದೆಯಂತೆ. ವಿಶೇಷ ಅಂದ್ರೇ ಲಾಸ್ಟ್ ಶೆಡ್ಯೂಲ್‌ನ ಶೂಟಿಂಗ್ ನಲ್ಲಿ ನಟ ಉಪೇಂದ್ರ್, ಸುದೀಪ್ ಹಾಗೂ ಹಿರೋಯಿನ್ ಭಾಗಿಯಾಗಲಿದ್ದಾರಂತೆ. ಇನ್ನು ಮಲ್ಟಿ ಸ್ಟಾರ್‌ ಸಿನಿಮಾ ಕಬ್ಜ ಅಂತಿಮ ಹಂತದ ಶೂಟಿಂಗ್ ಗೆ ತಲುಪಿದ್ರೂ ಹೀರೋಯಿನ್ ಯಾರೆಂಬ ಕುತೂಹಲವನ್ನು ನಿರ್ದೇಶಕ ಆರ್.ಚಂದ್ರು ಬಿಟ್ಟು ಕೊಟ್ಟಿಲ್ಲ. ಸಿನಿಮಾ ಶೂಟಿಂಗ್ ಕೊನೆ ಹಂತ ತಲುಪಿದ ಮಾಹಿತಿ‌ಕೊಟ್ರು ಕೂಡ ಹಿರೋಯಿನ್ ಯಾರೆಂಬ ಗುಟ್ಟು ಬಿಟ್ಟು ಕೊಡಲು ಚಂದ್ರು ಒಪ್ಪಿಲ್ಲ.

ಮೂಲಗಳ ಮಾಹಿತಿ ಪ್ರಕಾರ ಉಪ್ಪಿ ಹಾಗೂ ಕಿಚ್ಚ್ ಸರ್ ಕಾಮಿನೇಶನ್ ನ ಈ ಸಿನಿಮಾಗಾಗಿ ಚಂದ್ರು ಪರಭಾಷೆಯಿಂದ ನಾಯಕಿ ಯನ್ನು ಕರೆತಂದಿದ್ದಾರಂತೆ. ಮೂಲಗಳ ಮಾಹಿತಿ ಪ್ರಕಾರ ನಿರ್ದೇಶಕ ಚಂದ್ರು ತಮ್ಮ ಬಹುನೀರಿಕ್ಷಿತ ಸಿನಿಮಾ ಕಬ್ಜಗಾಗಿ ಸೌತ್ ಸಿನಿಸ್ಟಾರ್,ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ಅವರನ್ನು ನಾಯಕಿಯಾಗಿ ಕರೆತರುತ್ತಿ ದ್ದಾರಂತೆ. ಈಗಾಗಲೇ 75 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ನಯನತಾರಾ ಸುದೀಪ್ ಹಾಗೂ ಉಪೇಂದ್ರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಬ್ಜ ಸಿನಿಮಾದಲ್ಲಿ ಉಪೇಂದ್ರ್ ಗ್ಯಾಂಗ್ ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ನಟ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈಗ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರೋದು ಸಿನಿಮಾದ ಮೇಲೆ ಅಭಿಮಾನಿಗಳ ನೀರಿಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ : ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ

ಇದನ್ನೂ ಓದಿ : Rashmika Saree Photoshoot : ಸೀರೆಯಲ್ಲಿ ಮಿಂಚಿದ ಪುಷ್ಪ ಸುಂದರಿ : ರಶ್ಮಿಕಾ ಮಂದಣ್ಣ ಸ್ಪೆಶಲ್ ಪೋಟೋಶೂಟ್

( Nayanthara join Sudeep and Upendra acting new movie Kabza)

Comments are closed.