ಕೊಡಗು : ಸ್ನೇಹ ಬಳಸಿ ಮಂಚಕ್ಕೆ ಕರೆದು ವಿಡಿಯೋ ಮಾಡುತ್ತಿದ್ದ ಅನ್ಯಧರ್ಮೀಯ ವಿದ್ಯಾರ್ಥಿ ಬಂಧನ
ಕೊಡಗು: ಕೊಡಗು ಭಾಗದಲ್ಲಿರುವ ಯುವತಿಯರ ಪೋಷಕರು ಬೆಚ್ಚಿ ಬೀಳುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಡಗಿನ ಪದವಿ ವಿಭಾಗದ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ ಸ್ನೇಹ ಬೆಳೆಸುತ್ತಿದ್ದ ಬೆಂಗಳೂರಿನ ಕಿರಾತಕನೊಬ್ಬ ಬಳಿಕ ಮಂಚಕ್ಕೆ ಕರೆಯುತ್ತಿದ್ದ ಪ್ರಕರಣ ಇದೀಗ ತಿಳಿದು ಬಂದಿದೆ. ಮೊದಲು ಸ್ನೇಹ,, ಬಳಿಕ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ವಿಡಿಯೋ ಮಾಡಿಕೊಂಡು ಪೀಡಿಸುತ್ತಿದ್ದ ಕಾಮುಕನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರಿನ ನಿವಾಸಿ ಮೊಹಮ್ಮದ್ ಸವಾದ್ ಎಂದು ಗುರುತಿಸಲಾಗಿದೆ. ಸಂಪಿಗೆಹಳ್ಳಿಯ ಕಾಲೇಜಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿದ್ದ ಈತ ಕೊಡಗು ಭಾಗದ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ ಈ ವಂಚನೆಯ ಜಾಲಕ್ಕೆ ಬೀಳಿಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:
ಮೊದಲು ಸ್ನೇಹ ಮಾಡಿಕೊಳ್ಳುತ್ತಿದ್ದ ಈತ ಬಳಿಕ ಲವ್ ಹೆಸರಿನಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಲೈಂಗಿಕ ಕ್ರಿಯೆಯ ದೃಶ್ಯಾವಳಿಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದುಕೊಳ್ತಿದ್ದ. ಈ ವಿಡಿಯೋ ತುಣುಕುಗಳನ್ನು ಆತನ ಸ್ನೇಹಿತರು ವೈರಲ್ ಮಾಡುತ್ತಿದ್ದರು. ಸವಾದ್ನ ಕಳ್ಳಾಟಗಳು ತಿಳಿದ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ.
ಈ ಸಂಬಂಧ ಆರ್ಟಿಐ ಕಾರ್ಯಕರ್ತ ಹ್ಯಾರಿಸ್ ಎಂಬವರು ಮಾತನಾಡಿದ್ದು, ಕೊಡಗು ಅಭಿವೃದ್ಧಿ ಸಮಿತಿಗೆ ಈ ಬಗ್ಗೆ ದೂರು ಕೇಳಿ ಬಂದಿತ್ತು. ವಿಡಿಯೋಗಳನ್ನು ನಾನು ಕೂಡಲೇ ಎಸ್ಪಿಯವರ ಗಮನಕ್ಕೆ ತಂದಿದ್ದೆ. ಕೂಡಲೇ ಕಾರ್ಯಪ್ರವೃತ್ತರಾದ ಕೊಡಗು ಎಸ್ಪಿ ಬಿಂದುಮಣಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಆತನನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.



