Bengaluru Hit and run: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ: ಎಮ್‌ಬಿಎ ವಿದ್ಯಾರ್ಥಿನಿ ಗಂಭೀರ ಗಾಯ

ಬೆಂಗಳೂರು: (Bengaluru Hit and run) ಕಾಲೇಜು ಮುಗಿಸಿ ರಸ್ತೆ ದಾಟುತ್ತಿದ್ದ ವೇಳೆ ಅತೀ ವೇಗದಿಂದ ಬಂದ ಕಾರೊಂದು ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದಿದ್ದು, ಕಾರು ಗುದ್ದಿದ ರಭಸಕ್ಕೆ ಐವತ್ತು ಮೀಟರ್‌ ದೂರಕ್ಕೆ ಹೋಗಿ ಬಿದ್ದಿರುವ ಘಟನೆ ಬೆಂಗಳೂರಿನ ಬಿಐಎಮ್‌ಎಸ್‌ ಕಾಲೇಜಿನ ಎದುರು ನಡೆದಿದೆ. ಗಾಯಾಳು ವಿದ್ಯಾರ್ಥಿಯನ್ನು ಸ್ವಾತಿ ಎಂದು ಗುರುತಿಸಲಾಗಿದ್ದು, ಆಕೆ ಪ್ರಥಮ ವರ್ಷದ ಎಮ್‌ ಬಿಎ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಪ್ರಥಮ ವರ್ಷದ ಎಮ್‌ಬಿಎ ವಿದ್ಯಾರ್ಥಿನಿ ಸ್ವಾತಿ ಕಾಲೇಜು ಮುಗಿಸಿ ಕಾಲೇಜಿನ ಎದುರುಗಡೆ ರಸ್ತೆ ದಾಟುತ್ತಿದ್ದ ಸಂದರ್ಭ ಅತೀ ವೇಗದಿಂದ ಕಾರೊಂದು ಢಿಕ್ಕಿ ಹೊಡೆದಿದ್ದು, ರಭಸಕ್ಕೆ ಸ್ವಾತಿ ಐವತ್ತು ಮೀಟರ್‌ ದೂರದಲ್ಲಿ ಬಿದ್ದಿದ್ದಾಳೆ. ಪರಿಣಾಮ ಸ್ವಾತಿ ಪ್ರಜ್ಞೆ ಕಳೆದುಕೊಂಡಿದ್ದು, ಆಕೆಯ ಬೆನ್ನು ಮೂಳೆ ಹಾಗೂ ಪಕ್ಕೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

ಅಪಘಾತಕ್ಕೆ ಬಿಬಿಎಂಪಿ ನೇರ ಹೊಣೆ: ವಿದ್ಯಾರ್ಥಿಗಳು, ಸ್ಥಳೀಯರ ಆಕ್ರೋಶ
ಇನ್ನೂ ಈ ಅಪಘಾತಕ್ಕೆ ಬಿಬಿಎಂಪಿ ನೇರ ಹೊಣೆಯಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಐಎಮ್‌ಎಸ್‌ ಕಾಲೇಜಿನ ಮುಂದಿರುವ ರಸ್ತೆಯ ಎರಡು ಕಡೆ ಹಂಪ್ಸ್‌ ಗಳನ್ನು ಹಾಕಲಾಗಿತ್ತು. ಆ ಸಮಯದಲ್ಲಿ ವಾಹನಗಳು ನಿಧಾನವಾಗಿ ಬರುತ್ತಿದ್ದವು. ಹಾಗಾಗಿ ವಿದ್ಯಾರ್ಥಿಗಳು ರಸ್ತೆ ದಾಟಲು ಅನುಕೂಲವಾಗುತ್ತಿತ್ತು.

ಕಳೆದ ಎಂಟು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಕಾರ್ಯಕ್ರಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮೋದಿ ಅವರು ಇದೇ ರಸ್ತೆಯಲ್ಲಿ ಸಾಗಿದ್ದ ಕಾರಣ ಬಿಬಿಎಂಪಿ ಅಧಿಕಾರಿಗಳು ಹಂಪ್ಸ್‌ ಗಳನ್ನು ತೆರವು ಮಾಡಿದ್ದರು. ನಂತರ ಬಿಬಿಎಂಪಿ ಟ್ರಾಫಿಕ್‌ ವಿಭಾಗದ ಅಧಿಕಾರಿಗಳು ಹಂಪ್ಸ್‌ ಹಾಕಿಲ್ಲ. ಬಿಐಎಮ್‌ಎಸ್‌ ಕಾಲೇಜಿನ ಅಕ್ಕಪಕ್ಕ ಆರ್‌ವಿ ಕಾಲೇಜು ಆರ್ಕಿಡ್‌ ಶಾಲೆಯೂ ಇದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಮಕ್ಕಳು ಇದೇ ಜಾಗದಲ್ಲಿ ರಸ್ತೆ ದಾಟುತ್ತಾರೆ.

ಹಂಪ್ಸ್‌ ಇದ್ದಿದ್ದರೆ ಸ್ವಾತಿಗೆ ಅಗುವ ಅನಾಹುತ ತಪ್ಪುತಿತ್ತು. ಸ್ವಾತಿಗೆ ಕಾರಿನಲ್ಲಿ ಗುದ್ದಿದ ಕಾರು ಚಾಲಕ ಅಪಘಾತವೆಸಗಿ ಆರ್‌ ವಿ ಕಾಲೇಜಿನ ಒಳಗೆ ಹೋಗಿದ್ದ. ಆರೋಪಿಯನ್ನು ಮೊದಲ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದ ಕೃಷ್ಣಭಾರ್ಗವ್‌ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ. ಇನ್ನೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಸ್ವಾತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಗೆ ಶಿಪ್ಟ್‌ ಮಾಟಲಾಗಿದೆ.

ಇದನ್ನೂ ಓದಿ : Blast in showstar event: ಶೋ ಸ್ಟಾರ್‌ ಈವೆಂಟ್‌ ಸೈಟ್‌ನಲ್ಲಿ ಸ್ಪೋಟ: ತಪ್ಪಿದ ಬಾರೀ ಅನಾಹುತ

ಇದನ್ನೂ ಓದಿ : Shahjahanpur Truck bus accident: ದಟ್ಟ ಮಂಜಿನಿಂದಾಗಿ ಟ್ರಕ್‌-ಬಸ್ ಢಿಕ್ಕಿ: 18 ಮಂದಿಗೆ ಗಾಯ

ಘಟನೆಯ ಕುರಿತು ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Bengaluru Hit and run: MBA student seriously injured in car collision while crossing road

Comments are closed.