ಬೆಂಗಳೂರು: 49 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಮೆಡಿಕಲ್ ವಿದ್ಯಾರ್ಥಿಯನ್ನು(Medical student harasses woman) ಪೊಲೀಸರು ಬಂಧಿಸಿದ ಆಘಾತಕಾರಿ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ವಿಜಯ್ ಭಾರದ್ವಾಜ್ ಎಂದು ಗುರುತಿಸಲಾಗಿದೆ. 28 ವರ್ಷದ ವಿಜಯ್ ಭಾರದ್ವಾಜ್ ಬಿಹಾರದ ಮುಜಾಫರ್ ನಗರ ಮೂಲದವನಾಗಿದ್ದ. ವಿಜಯ್ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಮೂರನೆ ವರ್ಷದ ವಿದ್ಯಾರ್ಥಿಯಾಗಿದ್ದ. ಈತ ಬನಶಂಕರಿಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ವಾಸವಿದ್ದ ಎನ್ನಲಾಗಿದೆ.
ಅಮೃತಹಳ್ಳಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು ಈ ಸಂಬಂಧ ಪೊಲೀಸರು ಆರೋಪಿ ವಿಜಯ್ ಭಾರದ್ವಾಜ್ ವಿರುದ್ಧ ಸೆಕ್ಷನ್ 354 ಎ, 345 ಬಿ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೊಸಕೋಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ವೀರಣ್ಣನಪಾಳ್ಯ ಜಂಕ್ಷನ್, ಹೆಬ್ಬಾಳ ರಿಂಗ್ ರಸ್ತೆಯಲ್ಲಿ ವಿಜಯ್ ತಮ್ಮ ಕಾರನ್ನು ಹಿಂಬಾಲಿಸಲು ಆರಂಭಿಸಿದನು ಎಂದು ಮಹಿಳೆ ದೂರಿದ್ದಾರೆ. ಆರೋಪಿಗಳು ಗೊರಗುಂಟೆ ಪಾಳ್ಯ ಜಂಕ್ಷನ್ವರೆಗೆ ಕಾರನ್ನು ಹಿಂಬಾಲಿಸಿದ್ದಾರೆ. ಮಹಿಳೆಯ ಪುತ್ರ ಕಾನ್ಸ್ಟೇಬಲ್ಗಳ ಸಮೀಪ ಹೋಗಿ ಕಾರನ್ನು ನಿಲ್ಲಿಸಿದ ಬಳಿಕ ಅವರು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ದೂರಿನಲ್ಲಿ ಮಹಿಳೆ ತಿಳಿಸಿರುವ ಮಾಹಿತಿಯ ಪ್ರಕಾರ, ವೀರಣ್ಣನ ಪಾಳ್ಯ ಜಂಕ್ಷನ್ನಲ್ಲಿ ಸುಮಾರು 2 ಗಂಟೆ ಸುಮಾರಿಗೆ ಅವರ ಕಾರು ಪಂಕ್ಚರ್ ಆಗಿತ್ತು. ಅವರ ಪುತ್ರ ಕಾರನ್ನು ನಿಲ್ಲಿಸಿ ಇದನ್ನು ಸರಿಪಡಿಸುತ್ತಿದ್ದರು. ಈ ವೇಳೆ ಅದೇ ಸ್ಥಳಕ್ಕೆ ಆಗಮಿಸಿದ ವಿಜಯ್ ತನ್ನ ಹಾಗೂ ತನ್ನ ಮಗಳ ವಿರುದ್ಧ ಅಶ್ಲೀಲ ಭಾಷಾ ಪ್ರಯೋಗ ಮಾಡಿದ್ದಾನೆ. ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಟೈರ್ ಬದಲಾಯಿಸುತ್ತಿದ್ದಂತೆಯೇ ನಾವು ಸ್ಥಳದಿಂದ ತೆರಳಿದವು. ಆದರೆ ಆರೋಪಿ ಮಾತ್ರ ನಮ್ಮನ್ನು ಹಿಂಬಾಲಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಯು ತನ್ನ ವಾಹನದಿಂದ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗೊರಗುಂಟೆಪಾಳ್ಯದಲ್ಲಿ ನಮಗೆ ಇಬ್ಬರು ಕಾನ್ಸ್ಟೇಬಲ್ಗಳು ಕಾಣಸಿಗುತ್ತಿದ್ದಂತೆಯೇ ಆತ ಪರಾರಿಯಾಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಆರೋಪಿಗಾಗಿ ಎರಡು ದಿನಗಳ ಕಾಲ ತಲಾಶ್ ನಡೆಸಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದಾರೆ.
Bengaluru: Medical student sexually harasses 49-year-old woman and her daughter; arrested
ಇದನ್ನು ಓದಿ : Kerala High Court :‘ಮಗಳ ಮದುವೆಗೆ ಪೋಷಕರು ನೀಡುವ ಉಡುಗೊರೆ ವರದಕ್ಷಿಣೆಯಲ್ಲ’ : ಕೇರಳ ಹೈಕೋರ್ಟ್ ಮಹತ್ವದ ಆದೇಶ
ಇದನ್ನೂ ಓದಿ: Big Relief to Aryan Khan:ಶಾರೂಕ್ ಪುತ್ರ ಆರ್ಯನ್ ಖಾನ್ಗೆ ಬಿಗ್ ರಿಲೀಫ್ ನೀಡಿದ ಮುಂಬೈ ಹೈಕೋರ್ಟ್..!