marriage age of women : ಮಹಿಳೆಯರ ಮದುವೆಯ ಕನಿಷ್ಟ ವಯಸ್ಸು 18 ರಿಂದ 21 ವರ್ಷಕ್ಕೆ ಏರಿಸಲು ಸಂಪುಟ ಅಸ್ತು..!

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಮದುವೆ ಕನಿಷ್ಟ ವಯಸ್ಸನ್ನು 18ರಿಂದ 21 ವರ್ಷಕ್ಕೆ ಏರಿಸುವ ಬಗ್ಗೆ ಘೋಷಣೆ ಮಾಡಿದ್ದರು. ಅದರಂತೆ ನಿನ್ನೆ ಮಹಿಳೆಯರ ವಿವಾಹದ ಕನಿಷ್ಟ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ(marriage age of women) ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಪುರುಷರ ವಿವಾಹದ ಕನಿಷ್ಟ ವಯಸ್ಸು 21 ಆಗಿದೆ. ಇದೀಗ ಮಹಿಳೆಯರಿಗೂ ವಿವಾಹದ ಕನಿಷ್ಟ ವಯಸ್ಸನ್ನು 21ಕ್ಕೆ ವರ್ಷಕ್ಕೆ ಏರಿಸುವ ಸಲುವಾಗಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ವಿಶೇಷ ವಿವಾಹ ಕಾಯ್ದೆ ಹಾಗೂ ಹಿಂದೂ ವಿವಾಹ ಕಾಯ್ದೆಗಳಲ್ಲಿ ಬದಲಾವಣೆ ತರಲು ಮುಂದಾಗಿದೆ. ಕೇಂದ್ರ ಸರ್ಕಾರವು ದೇಶದ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದೆ. ಹೆಣ್ಣು ಮಕ್ಕಳ ಆರೋಗ್ಯ ಸುರಕ್ಷಿತವಾಗಿ ಇರಬೇಕು ಅಂದರೆ ಅವರ ಮದುವೆ ವಯಸ್ಸು ಕೂಡ ಸರಿಯಾಗಿ ಇರಬೇಕು ಎಂದು ಪ್ರಧಾನಿ ಮೋದಿ 2020ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಹೇಳಿದ್ದರು.

ಜಯಾ ಜೆಟ್ಲಿ ನೇತೃತ್ವದ ಕೇಂದ್ರದ ಕಾರ್ಯಪಡೆಯು ನೀತಿ ಆಯೋಗಕ್ಕೆ ಹಿಂದಿನ ವರ್ಷ ಶಿಫಾರಸ್ಸು ಸಲ್ಲಿಸಿತ್ತು. ಜಯಾ ಜೆಟ್ಲಿ ನೇತೃತ್ವದ ಕಾರ್ಯಪಡೆ ಸಲ್ಲಿಸಿದ ಪ್ರಸ್ತಾಪವನ್ನು ನೀತಿ ಆಯೋಗ ಬೆಂಬಲಿಸಿದೆ.ಕಳೆದ ವರ್ಷ ಜೂನ್​ನಲ್ಲಿ ರಚಿಸಲಾದ ಕಾರ್ಯಪಡೆಯಲ್ಲಿ ಸರ್ಕಾರದ ಉನ್ನತ ತಜ್ಞ ವಿ.ಕೆ ಪೌಲ್​, ಆರೋಗ್ಯ ಸಚಿವಾಲಯ, ಕಾನೂನು ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸದಸ್ಯರು ಇದ್ದರು. ತಾಯ್ತನದ ವಯಸ್ಸಿನ ಮಿತಿ,ತಾಯಂದಿರ ಮರಣ ಪ್ರಮಾಣ, ಪೌಷ್ಠಿಕಾಂಶದ ಬಗ್ಗೆ ಅಧ್ಯಯನ ಮಾಡಲು ಈ ಸಮಿತಿ ರಚಿಸಲಾಗಿತ್ತು.

ಈ ವಿಶೇಷ ಕಾರ್ಯಪಡೆಯು ಮಹಿಳೆಯು ಮೊದಲ ಬಾರಿಗೆ ಗರ್ಭ ಧರಿಸುವ ವೇಳೆಯಲ್ಲಿ ಆಕೆಯ ವಯಸ್ಸು ಕನಿಷ್ಟ 21 ವರ್ಷವಾಗಿರಬೇಕು ಎಂದು ಹೇಳಿದೆ.ಅಲ್ಲದೇ ಮದುವೆ ವಿಳಂಬ ಮಾಡುವುದರಿಂದ ಸಮಾಜ ಹಾಗೂ ಮಕ್ಕಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಜಯಾ ಜೆಟ್ಲಿ, ಈ ಶಿಫಾರಸಿನ ಉದ್ದೇಶ ಜನಸಂಖ್ಯೆ ನಿಯಂತ್ರಣ ಮಾಡುವುದಲ್ಲ.ದೇಶದಲ್ಲಿ ಜನಸಂಖ್ಯೆ ನಿಯಂತ್ರಣದಲ್ಲಿದೆ.ಮಹಿಳೆಯರ ಸಬಲೀಕರಣವೊಂದೇ ನಮ್ಮ ಉದ್ದೇಶವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : Group Captain Varun Singh : ಹೆಲಿಕಾಪ್ಟರ್​ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​ ನಿಧನ

ಇದನ್ನೂ ಓದಿ: Kerala High Court :‘ಮಗಳ ಮದುವೆಗೆ ಪೋಷಕರು ನೀಡುವ ಉಡುಗೊರೆ ವರದಕ್ಷಿಣೆಯಲ್ಲ’ : ಕೇರಳ ಹೈಕೋರ್ಟ್​ ಮಹತ್ವದ ಆದೇಶ

Cabinet clears push to raise marriage age of women from 18 to 21

Comments are closed.