Bengaluru Prostitution: ಸಿಲಿಕಾನ್‌ ಸಿಟಿಯಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ ದಂಧೆ: ಖೆಡ್ಡಾಗೆ ಬಿದ್ರೆ ಕಥೆ ಅಷ್ಟೇ!

ಬೆಂಗಳೂರು: (Bengaluru Prostitution) ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ತಲೆಯೆತ್ತಿದ್ದು, ಟ್ವಿಟ್ಟರ್‌ ಟೆಲಿಗ್ರಾಂ ಮೂಲಕ ನಕಲಿ ಗಂಡ ಹೆಂಡತಿಯರ ಹೈಫೈ ವೇಶ್ಯಾವಾಟಿಕೆ ನಡೆಯುತ್ತಿದೆ. ವೀಕೆಂಡ್‌ ಗಳಲ್ಲಿ ಉದ್ಯಮಿಗಳಿಗೆ, ಕೋಟಿ ಕುಳಗಳಿಗೆ ಗಾಳ ಹಾಕಿ, ಬ್ಯುಸಿನೆಸ್ಸ್‌ ಲಾಸ್‌ ಆಗಿದೆ ತುರ್ತು ಹಣದ ಅವಶ್ಯಕತೆಯಿದೆ ಎಂದು ಹೇಳಿ ನಕಲಿ ಪತ್ನಿಯನ್ನು ಕೋಟಿ ಕುಳಾಯಿಗಳ ಬಳಿ ಕಳಿಸುವ ಹೈಫೈ ವೇಶ್ಯಾವಾಟಿಕೆ ದಂಧೆ ಇದೀಗ ಬೆಂಗಳೂರಿನಲ್ಲಿ ತಲೆಯೆತ್ತಿದೆ. ಈ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ಅಖಾಡಕ್ಕಿಳಿದಿದ್ದು, ಈಗಾಗಲೇ ಆರು ದಂಪತಿಗಳನ್ನು ಬಂಧಿಸಿದ್ದು, ಉಳಿದವರಿಗೆ ಬಲೆ ಬೀಸಿದ್ದಾರೆ.

ಟ್ವಿಟ್ಟರ್‌ ಟೆಲಿಗ್ರಾಂ ಮೂಲಕ ನಕಲಿ ಗಂಡ ಹೆಂಡತಿಯರ ಹೈಫೈ ವೇಶ್ಯಾವಾಟಿಕೆ ದಂಧೆಯನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದು, ಇವರ ಈ ದಂಧೆ ಸಾಕಷ್ಟು ಆಶ್ಚರ್ಯ ತರುವಂತದ್ದು. ನಾವು ದಂಪತಿಗಳು ಎಂದು ಹೇಳಿ ಟ್ವೀಟರ್‌ ಹಾಗೂ ಟೆಲಿಗ್ರಾಮ್‌ ನಲ್ಲಿ ಹಾಕಿಕೊಂಡು ಹಲವು ಉದ್ಯಮಿಗಳು, ಕೋಟಿ ಕುಳಾಯಿಗಳನ್ನು ಸಂಪರ್ಕಿಸುತ್ತಾರೆ. ನಂತರ ಅವರ ಬಗ್ಗೆ ಕೆಲವು ನಕಲಿ ಮಾಹಿತಿಗಳನ್ನು ಅವರ ಬಳಿ ಹೊಂಚಿಕೊಳ್ಳುತ್ತಾರೆ. ನಾವು ಕೋವಿಡ್‌ ನಿಂದಾಗಿ, ಹಲವು ಸಮಸ್ಯೆಗಳಿಂದಾಗಿ ಬ್ಯುಸಿನೆಸ್ಸ್‌ ಅಲ್ಲಿ ನಮಗೆ ಸಿಕ್ಕಾಪಟ್ಟೆ ಲಾಸ್‌ ಆಗಿದೆ. ಈಗ ನಮಗೆ ತುರ್ತು ಹಣದ ಅವಶ್ಯಕತೆಯಿದೆ. ಹಾಗಾಗಿ ನಮ್ಮ ಪತ್ನಿಯನ್ನ ಒಮ್ಮೆ ಲೈಂಗಿಕ ಕ್ರೀಯೆಗೆ ಕಳುಹಿಸಿಕೊಡುತ್ತೇನೆ. ಇಂತಿಷ್ಟು ಹಣವನ್ನು ಹಾಕಿ ಎಂದು ಡಿಮ್ಯಾಂಡ್‌ ಮಾಡುತ್ತಾರೆ.

ಜೊತೆಗೆ ಭಾವನಾತ್ಮಕವಾಗಿ ಉದ್ಯಮಿಗಳನ್ನು ಶೀಮಂತರನ್ನ ಬ್ಲ್ಯಾಕ್‌ ಮೇಲ್‌ ಮಾಡುವ ಮೂಲಕ ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಾರೆ. ಇವರ ಮಾತಿಗೆ ನಂಬಿ ಜನರು ಸಾವಿರಾರು ರೂಪಾಯಿಗಳನ್ನು ಇವರಿಗೆ ಹಾಕುವ ಕೆಲಸವನ್ನು ಮಾಡ್ತಾರೆ. ಅವರಿಂದ ಅಡ್ವಾನ್ಸ್‌ ಬಂದ ನಂತರ ದಂದೆಕೋರರು ನಗರಕ್ಕೆ ಬಂದು ದಂದೆಯನ್ನು ನಡೆಸುತ್ತಾರೆ. ಒಂದು ಗಂಟೆಗೆ ಸುಮಾರು 40 – 50 ಸಾವಿರ ಹಣಕ್ಕೆ ಬೇಡಿಕೆ ಇಡುತ್ತಾರೆ ಎಂಬ ಮಾಹಿತಿ ಕೂಡ ಲಭಿಸಿದೆ.

ಆದರೆ ಇದೀಗ ಈ ದಂಧೆ ಬಗ್ಗೆ ಸಿಸಿಬಿ ಪೊಲೀಸರಿಗೆ ತಿಳಿದುಬಂದಿದ್ದು, ಇದಕ್ಕಾಗಿ ಸುಮಾರು ಆರು ತಂಡಗಳನ್ನ ರಚಿಸಿ ನಗರದ ಎಲ್ಲಾ ಕಡೆ ದಂಧೆಕೋರರ ಮೇಲೆ ಕಣ್ಣಿಡುತ್ತಾರೆ. ಆ ಸಮಯದಲ್ಲಿ ಸಿಸಿಬಿ ಪೊಲೀಸರಿಗೆ ಇವರು ನಿಜವಾದ ದಂಪತಿಗಳಲ್ಲ, ನಕಲಿ ದಂಪತಿಗಳು ಎಂದು ತಿಳಿದು ಬರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಆರು ದಂಪತಿಗಳನ್ನು ಬಂಧಿಸಿದ್ದು, ಇವರನ್ನು ಬಹುತೇಕ ಉತ್ತರ ಭಾರತದವರು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಇದಲ್ಲದೇ ಈ ಗ್ಯಾಂಗ್‌ ಗಳಿಗೆ ಒಬ್ಬ ನಾಯಕ ಕೂಡ ಇರುವುದು ತಿಳಿದುಬಂದಿದೆ.

ಮಾಹಿತಿ ಮೇರೆಗೆ ಪೊಲೀಸರು ಗ್ಯಾಂಗ್‌ ಲೀಡರ್‌ ನ ಬಂಧನಕ್ಕೆ ಬಲೆ ಬೀಸಿದ್ದು, ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಮಾಹಿತಿಯ ಪ್ರಕಾರ, ವೀಕೆಂಡ್‌ ನಲ್ಲಿ ಸುಮಾರು 50 ರಿಂದ 60 ನಕಲಿ ಜೋಡಿಗಳು ಉತ್ತರ ಭಾರತದಿಂದ ಬೆಂಗಳೂರಿಗೆ ಬರುತ್ತಿರುವುದು ಸಿಸಿಬಿ ಪೊಲೀಸರಿಗೆ ತಿಳಿದುಬಂದಿದೆ. ಬಂಧನಕ್ಕೊಳಗಾದ ಆರು ದಂಪತಿಗಳಲ್ಲದೇ ಇನ್ನು ಹಲವರು ಸಿಲಿಕಾನ್‌ ಸಿಟಿಯಲ್ಲಿ ದಂಧೆ ನಡೆಸಿಕೊಂಡು ಓಡಾಡುತ್ತಿರುವುದು ತಿಳಿದುಬಂದಿದ್ದು, ಅವರಿಗೂ ಕೂಡ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ : Sathna truck accident: ಸ್ಟೇಷನರಿ ಬಸ್‌ಗಳಿಗೆ ಟ್ರಕ್ ಢಿಕ್ಕಿ: 6 ಮಂದಿ ಸಾವು, 50 ಮಂದಿಗೆ ಗಾಯ: 10 ಲಕ್ಷ ರೂ ಪರಿಹಾರ ಘೋಷಣೆ

ಇದು ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ, ದೊಡ್ಡ ದೊಡ್ಡ ಸಿಟಿಗಳಲ್ಲಿ ಕೂಡ ಈ ದಂಧೆ ನಡೆಯುತ್ತಿರುವುದು ಪೊಲೀಸರಿಗೆ ತಿಳಿದುಬಂದಿದ್ದು, ಪೊಲೀಸರು ಇದೀಗ ಅಲರ್ಟ್‌ ಆಗಿದ್ದಾರೆ.

Bengaluru Prostitution: Prostitution going on in Silicon City: If it falls to Khedda, the story is the same!

Comments are closed.