Bhaskar Reddy Arrested : ಮಾಜಿ ಸಂಸದನ ಹತ್ಯೆ ಪ್ರಕರಣ : ಆಂಧ್ರ ಸಿಎಂ ಜಗಮೋಹನ್‌ ರೆಡ್ಡಿ ಚಿಕ್ಕಪ್ಪ ಭಾಸ್ಕರ್ ರೆಡ್ಡಿ ಅರೆಸ್ಟ್‌

ನವದೆಹಲಿ: (Bhaskar Reddy Arrested) ಮಾಜಿ ಸಂಸದ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈಎಸ್ ಭಾಸ್ಕರ್ ರೆಡ್ಡಿ ಅವರನ್ನು ಕೇಂದ್ರ ತನಿಖಾ ದಳ ಇಂದು ಬಂಧಿಸಿದೆ.

ವಿವೇಕಾನಂದ ರೆಡ್ಡಿ ಆಂಧ್ರಪ್ರದೇಶದ ದಿವಂಗತ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಸಹೋದರ ಮತ್ತು ಹಾಲಿ ಎಪಿ ಸಿಎಂ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪ. ರಾಜ್ಯ ವಿಧಾನಸಭಾ ಚುನಾವಣೆಗೆ ವಾರಗಳ ಮೊದಲು ಮಾರ್ಚ್ 15, 2019 ರ ರಾತ್ರಿ ಅವರ ಸೋದರಳಿಯ ಪ್ರತಿನಿಧಿಸುವ ಕ್ಷೇತ್ರವಾದ ಪುಲಿವೆಂದುಲದಲ್ಲಿನ ಅವರ ನಿವಾಸದಲ್ಲಿ ಅವರು ಕೊಲೆಯಾಗಿದ್ದಾರೆ.

ಇದೀಗ ಅದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್‌ ಮೋಹನ್‌ ರೆಡ್ಡಿ ಅವರ ಚಿಕ್ಕಪ್ಪ ಭಾಸ್ಕರ್‌ ರೆಡ್ಡಿ ಅವರನ್ನು ಸಿಬಿಐ ಬಂಧಿಸಿದೆ. ಇದೀಗ ಭಾಸ್ಕರ್‌ ರೆಡ್ಡಿಯನ್ನು ಬಿಗಿ ಭದ್ರತೆಯ ನಡುವೆ ಕಡಪಾದಲ್ಲಿರುವ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ಜೈಲು ಅತಿಥಿಗೃಹಕ್ಕೆ ಸ್ಥಳಾಂತರಿಸಿದ ಸಿಬಿಐ ಅಧಿಕಾರಿಗಳು ನಂತರ ಹೈದರಾಬಾದ್‌ ಗೆ ಶಿಫ್ಟ್‌ ಮಾಡಿ ಅಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪ್ರಕರಣವನ್ನು ಆರಂಭದಲ್ಲಿ ರಾಜ್ಯ ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿತು, ಆದರೆ ಜುಲೈ 2020 ರಲ್ಲಿ ಸಿಬಿಐಗೆ ಹಸ್ತಾಂತರಿಸಲಾಯಿತು. ಸಿಬಿಐ ಚಾರ್ಜ್ ಶೀಟ್ ಪ್ರಕಾರ, ವಿವೇಕಾನಂದ ರೆಡ್ಡಿ ಅವರು ಕಡಪ ಲೋಕಸಭೆಯಿಂದ ಹಾಲಿ ಅವಿನಾಶ್ ರೆಡ್ಡಿ ಬದಲಿಗೆ ತನಗೆ ಅಥವಾ ವೈಎಸ್ ಶರ್ಮಿಳಾ (ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ) ಅಥವಾ ವೈಎಸ್ ವಿಜಯಮ್ಮ (ಜಗನ್ ಮೋಹನ್ ರೆಡ್ಡಿ ಅವರ ತಾಯಿ) ಅವರಿಗೆ ಸಂಸದೀಯ ಚುನಾವಣೆ ಟಿಕೆಟ್ ಬಯಸಿದ್ದರು.

ಇದನ್ನೂ ಓದಿ : Mumbai accident : ಭೀಕರ ಬಸ್‌ ಅಪಘಾತ : 12 ಮಂದಿ ಸಾವು, 27 ಮಂದಿಗೆ ಗಾಯ

ಇದನ್ನೂ ಓದಿ : ದೇವನಹಳ್ಳಿ : ಮಾಜಿ ಶಾಸಕ ವೆಂಕಟಸ್ವಾಮಿ ಹೃದಯಾಘಾತದಿಂದ ಸಾವು

ಇದನ್ನೂ ಓದಿ : Mangaluru accident : ಮಂಗಳೂರು : ಬಸ್- ಕಾರು ನಡುವೆ ಭೀಕರ ಅಪಘಾತ: ಆರು ಮಂದಿ ಸಾವು

Bhaskar Reddy Arrested: Ex-MP Murder Case: Andhra CM Jagmohan Reddy’s Uncle Bhaskar Reddy Arrested

Comments are closed.