ನಂದಿನಿ ಬೇಡವೆಂದ ಟಿಟಿಡಿಗೆ ಮಹಾಮೋಸ : ತಿರುಪತಿ ಪ್ರಸಾದ ವಿವಾದಕ್ಕೆ ಬಿಗ್ ಟ್ವಿಸ್ಟ್
ತಿರುಪತಿ: ಹಿಂದೂಗಳ ಪಾಲಿಗೆ ತಿರುಮಲ ದೇವಸ್ಥಾನ ಪವಿತ್ರ ದೇವಸ್ಥಾನ. ಆದರೆ ತಿರುಪತಿ ಲಡ್ಡು ಪ್ರಸಾದವನ್ನು ತಯಾರಿಸಲು ಕಲಬೆರಕೆ ತುಪ್ಪ ಬಳಕೆ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ರೋಚಕ ತಿರುವು ದೊರಕಿದೆ.
ನಂದಿನಿ ತುಪ್ಪ ಪೂರೈಕೆ ಮಾಡುತ್ತಿದ್ದ ಖಾಸಗಿ ಡೈರಿ ಕಂಪನಿಯು ಹಾಲನ್ನು ಬಳಕೆ ಮಾಡದೆಯೇ ಕೇವಲ ರಾಸಾಯನಿಕಗಳನ್ನೇ ಬಳಸಿ ತುಪ್ಪ ತಯಾರಿಸುತ್ತಿದ್ದ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದೆ ಟಿಟಿಡಿಗೆ ಕರ್ನಾಟಕದ ಕೆಎಂಎಫ್ನಿಂದ ನಂದಿನಿ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿತ್ತು.
ಆದರೆ ನಂದಿನಿ ಉತ್ಪನ್ನಗಳ ದರ ಜಾಸ್ತಿ ಎಂದು ಟಿಟಿಡಿ ನಂದಿನಿ ತುಪ್ಪವನ್ನು ತಿರಸ್ಕಾರ ಮಾಡಿತ್ತು. ಇದಾದ ಬಳಿಕ ಖಾಸಗಿ ಕಂಪನಿಯೊಂದು ಪ್ರಸಾದ ಲಡ್ಡು ತಯಾರಿಕೆಗೆ ಅಗ್ಗದ ದರದಲ್ಲಿ ತುಪ್ಪ ಒದಗಿಸುವುದಾಗಿ ಹೇಳಿತ್ತು.
ಹೀಗಾಗಿ ಖಾಸಗಿ ಡೈರಿಯೊಂದಿಗೆ ಟಿಟಿಡಿ ಒಡಂಬಡಿಕೆ ಮಾಡಿಕೊಂಡಿತ್ತು. ಈ ಬಗ್ಗೆ ವಿವಾದ ವ್ಯಕ್ತವಾದ ಹಿನ್ನೆಲೆಯಲ್ಲಿ ನಡೆಸಲಾದ ತನಿಖೆಯಲ್ಲಿ ಖಾಸಗಿ ಡೈರಿಯು ಕೇವಲ ರಾಸಾಯನಿಕಗಳನ್ನೇ ಬಳಕೆ ಮಾಡಿ ತುಪ್ಪ ತಯಾರಿಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಹಿಂದೆ ಪ್ರಾಣಿಯ ಕೊಬ್ಬು ಮಿಶ್ರಿತ ತುಪ್ಪವನ್ನು ಪೂರೈಕೆ ಮಾಡಿದ್ದ ಈ ಕಂಪನಿಯ ಉತ್ಪನ್ನವನ್ನು ಟಿಟಿಡಿಯೇ ತಿರಸ್ಕರಿಸಿತ್ತು. ಇದಾದ ಬಳಿಕ ಆ ರೀತಿಯ ತುಪ್ಪ ಪೂರೈಕೆ ಮಾಡುವುದಿಲ್ಲ ಎಂದಿದ್ದ ಉತ್ತರಾಖಂಡ ಮೂಲದ ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿಯು ಮತ್ತೆ ಅದೇ ತುಪ್ಪ ಬಳಕೆ ಮಾಡಿದೆ ಎಂದು ಸಿಬಿಐ ತನಿಖೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಂಟ್ವಾಳದ ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ಮಾಡಿ ₹1.16 ಕೋಟಿ ವಂಚಿಸಿದ ಖದೀಮರು..!
2019ರಿಂದ 2024ರ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಈ ಕಂಪನಿಯು 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ ಮಾಡಿತ್ತು. 2022ರಲ್ಲಿ ಈ ಡೈರಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಯ್ತಾದರೂ ಬೇರೆ ಬೇರೆ ಹೆಸರಿನಲ್ಲಿ ಈ ಕಂಪನಿಯು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಈ ಕಂಪನಿಯು ಟಿಟಿಡಿಗೆ ಈವರೆಗೆ 250 ಕೋಟಿ ರೂಪಾಯಿಗಳನ್ನು ವಂಚಿಸಿದೆ ಎನ್ನುವುದು ತನಿಖೆಯಲ್ಲಿ ಹೊರಬಿದ್ದಿದೆ.
ಉತ್ತರಾಖಂಡದ ಭಗವಾನ್ಪುರದಲ್ಲಿ ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರು ನಡೆಸುತ್ತಿದ್ದ ಕಂಪನಿ ಇದಾಗಿದ್ದು ಈ ಡೈರಿಗೆ ಮೊನೊಡಿಗ್ಲಿಸರೈಡ್ಸ್ ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ನಂತಹ ರಾಸಾಯನಿಕಗಳನ್ನು ಪೂರೈಸುತ್ತಿದ್ದ ಆರೋಪಿ ಅಜಯ್ ಕುಮಾರ್ ಸುಗಂಧ್ ಬಂಧನದ ಬಳಿಕ ಒಂದೊಂದೇ ವಿಚಾರ ಹೊರಬೀಳುತ್ತಿದೆ.



