Black magic crime case: ಸೊಸೆಗೆ ಸತ್ತ ಮಾನವ ಮೂಳೆಗಳ ಪುಡಿಯನ್ನು ತಿನ್ನುವಂತೆ ಒತ್ತಾಯ: ಪತಿ, ಅತ್ತೆ ವಿರುದ್ದ ದೂರು

ಪುಣೆ: (Black magic crime case) ಸ್ಥಳೀಯ ನಿಗೂಢ ಶಾಸ್ತ್ರಜ್ಞರ ಸಲಹೆಯ ಮೇರೆಗೆ ಅತ್ತೆ ಹಾಗೂ ಪತಿ ಇಬ್ಬರು , ಮಹಿಳೆಯೊಬ್ಬರಿಗೆ ಗರ್ಭಧರಿಸಲು ಮಾನವನ ಮೂಳೆಯ ಪುಡಿಗಳನ್ನು ತಿನ್ನುವಂತೆ ಒತ್ತಾಯಿಸಿರುವ ಘಟನೆ ನಡೆದಿದೆ. ಈ ಕುರಿತು ಮಹಿಳೆ ದೂರು ನೀಡಿದ್ದು, ಪೊಲೀಸರು ಪತಿ, ಅತ್ತೆ ಮತ್ತು ಮಾವ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸಂತ್ರಸ್ತ ಮಹಿಳೆ ಪತಿ, ಅತ್ತೆ ಮತ್ತು ಮಾವ ಸೇರಿದಂತೆ ಕುಟುಂಬದ ಏಳು ಜನರ ವಿರುದ್ಧ ಪ್ರತ್ಯೇಕ ವಿಷಯಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಮದುವೆಯ ಸಮಯದಲ್ಲಿ ನಗದು, ಚಿನ್ನ ಮತ್ತು ಬೆಳ್ಳಿ ಆಭರಣ ಸೇರಿದಂತೆ ವರದಕ್ಷಿಣೆ ನೀಡುವುದಾಗಿ ಅತ್ತೆ ಮಾವ ಹಾಗೂ ಗಂಡ ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇನ್ನೊಂದು ದೂರಿನಲ್ಲಿ ಅತ್ತೆ ಹಾಗೂ ಪತಿ ಇಬ್ಬರು ತಾನು ಗರ್ಭಧರಿಸುವ ಸಲುವಾಗಿ ಮಾನವನ ಮೂಳೆಯ ಪುಡಿಗಳನ್ನು ತಿನ್ನುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಪೋಲೀಸರ ಪ್ರಕಾರ, ಮಹಿಳೆ ನೀಡಿದ ಎರಡನೇ ದೂರಿನಲ್ಲಿ, ಅಮವಾಸ್ಯೆಯ ರಾತ್ರಿಯಂದು ಮನೆಯಲ್ಲಿ ಮೂಢನಂಬಿಕೆ ಚಟುವಟಿಕೆಗಳಲ್ಲಿ ಮಹಿಳೆಯನ್ನು ತೊಡಗಿಸಿಕೊಳ್ಳುವಂತೆ ಅತ್ತೆಯಂದಿರು ಒತ್ತಾಯಿಸುತ್ತಿದ್ದು, ಮಹಿಳೆಯನ್ನು ಬಲವಂತವಾಗಿ ಸ್ಮಶಾನಕ್ಕೆ ಕರೆದೊಯ್ದು ಅಲ್ಲಿ ಸತ್ತ ಮಾನವನ ಪುಡಿಮಾಡಿದ ಮೂಳೆಗಳನ್ನು ತಿನ್ನಲು ಒತ್ತಾಯಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರದ ಕೊಂಕಣ ಪ್ರದೇಶದ ಯಾವುದೋ ಅಜ್ಞಾತ ಪ್ರದೇಶಕ್ಕೆ ಕರೆದೊಯ್ದು, ಮಹಿಳೆಯನ್ನು ಜಲಪಾತದ ಅಡಿಯಲ್ಲಿ ಕೂರಿಸಿ ಅಘೋರಿ ಅಭ್ಯಾಸವನ್ನು ನಡೆಸುವಂತೆ ಬಲವಂತ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ವಿಡಿಯೋ ಕರೆಗಳ ಮೂಲಕ ನಿಗೂಢ ಮಾಂತ್ರಿಕರಿಂದ ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಅತ್ತೆ, ಮಾವ ಹಾಗೂ ಪತಿ ಸೇರಿದಂತೆ ಕುಟುಂಬದ ಏಳು ಮಂದಿಯ ವಿರುದ್ದ ಮೂಢನಂಬಿಕೆ ವಿರೋಧಿ ಕಾಯ್ದೆ ಸೆಕ್ಷನ್ 3 ರ ಜೊತೆಗೆ ಐಪಿಸಿ ಸೆಕ್ಷನ್ 498 ಎ, 323, 504, 506 ಹಾಗೂ ಅಮಾನವೀಯ, ದುಷ್ಟ ಮತ್ತು ಅಘೋರಿ ಅಭ್ಯಾಸಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : Bomb threat to plane: ಗೋವಾ-ಮಾಸ್ಕೋ ವಿಮಾನಕ್ಕೆ ಬಾಂಬ್ ಬೆದರಿಕೆ: ಉಜ್ಬೇಕಿಸ್ತಾನ್‌ದಲ್ಲಿ ತುರ್ತು ಭೂಸ್ಪರ್ಶ

ಇದನ್ನೂ ಓದಿ : Truck-car collision: ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿ : 3 ಸಾವು, 2 ಮಂದಿಗೆ ಗಾಯ

ಇನ್ನೂ ಘಟನೆಯ ಕುರಿತು ” ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಈ ಆಚರಣೆಗಳು ನಡೆದ ನಿರ್ದಿಷ್ಟ ಸ್ಮಶಾನವನ್ನು ಹುಡುಕಲು ಪ್ರಾರಂಭಿಸಿದ್ದೇವೆ. ನಾವು ಈ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ನಂತರ ಘಟನೆಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು. ಈ ಪ್ರಕರಣದ ಮೇಲ್ವಿಚಾರಣೆಯನ್ನು ಎಸಿಪಿ ಶ್ರೇಣಿಯ ಪೊಲೀಸ್‌ ಅಧಿಕಾರಿಗಳು ನಡೆಸುತ್ತಾರೆ. ಇನ್ನೂ ಮಹಿಳೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ,” ಎಂದು ಡಿಸಿಪಿ ಶರ್ಮಾ ಅವರು ತಿಳಿಸಿದ್ದಾರೆ.

Black magic crime case: Daughter-in-law forced to eat powder of dead human bones: Complaint against husband, mother-in-law

Comments are closed.