ಸೋಮವಾರ, ಏಪ್ರಿಲ್ 28, 2025
HomeCrimeLeenamariapaul: 200 ಕೋಟಿ ಸುಲಿಗೆ ಆರೋಪ: ನಟಿ ಹಾಗೂ ರೂಪದರ್ಶಿ ಲೀನಾ ಮರಿಯಾ ಪೌಲ್ ಬಂಧನ

Leenamariapaul: 200 ಕೋಟಿ ಸುಲಿಗೆ ಆರೋಪ: ನಟಿ ಹಾಗೂ ರೂಪದರ್ಶಿ ಲೀನಾ ಮರಿಯಾ ಪೌಲ್ ಬಂಧನ

- Advertisement -

ಉದ್ಯಮಿ ಪತ್ನಿಯಿಂದ 200 ಕೋಟಿ ರೂಪಾಯಿ ಸುಲಿಗೆ ಮಾಡಲು ಬಾಯ್ ಪ್ರೆಂಡ್ ಗೆ ಸಹಾಯ ಮಾಡಿದ ಆರೋಪದಡಿಯಲ್ಲಿ ಬಾಲಿವುಡ್ ನಟಿ ಹಾಗೂ ರೂಪದರ್ಶಿ , ಮದ್ರಾಸ್ ಕೆಫೆ ಸಿನಿಮಾ ನಾಯಕಿ ಲೀನಾ ಮರಿಯಾ ಪೌಲ್ ನ್ನು ಸೆ.5 ರಂದು ಇಡಿ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಪೋರ್ಟಿಸ್ ಹೆಲ್ತ್ ಕೇರ್ ಪ್ರಚಾರಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ರನ್ನು ಅವರನ್ನು ವಂಚಿಸಲು ಬಾಯ್ ಪ್ರೆಂಡ್ ಗೆ ಸಹಾಯ ಮಾಡಿದ ಆರೋಪ  ಲೀನಾ ಮರಿಯಾ ಪೌಲ್ ಮೇಲಿದೆ.

ವರದಿಗಳ ಪ್ರಕಾರ ನಟಿ ಲೀನಾ ಹಾಗೂ ಆಕೆಯ ಬಾಯ್ ಪ್ರೆಂಡ್ ಮೇಲೆ ಎಂಸಿಓಸಿಎ ( ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾನೂನು) ಕಾನೂನು ಜಾರಿ ಮಾಡಲಾಗಿದೆ. 2019 ರಲ್ಲಿ ಶಿವಿಂದರ್ ರನ್ನು ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಶಿವಿಂದರ್ ಸಿಂಗ್ ರನ್ನು ಜೈಲಿನಿಂದ ಬಿಡಿಸುವುದಾಗಿ ಅದಿತಿ ಸಿಂಗ್ ಗೆ ಲೀನಾ ಮರಿಯಾ ಪೌಲ್ ಬಾಯ್ ಪ್ರೆಂಡ್ ಸುಕೇಶ್ ಚಂದ್ರಶೇಖರ್ ಹೇಳಿದ್ದಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಲ್ಲದೇ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದುಕೊಂಡೇ, ಕಾರ್ಪೋರೇಟ್ ಸಂಸ್ಥೆ ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ.

ಈ ಎಲ್ಲ ಪ್ರಕರಣಗಳಲ್ಲೂ ಲೀನಾ ಆತನಿಗೆ ಸಹಾಯಕಿಯಾಗಿದ್ದು, ಇಡಿ ಆಕೆಯ ಮೇಲೆ ಕಣ್ಗಾವಲು ಇಟ್ಟಿತ್ತು. ಸುಕೇಶ್ ಚಂದ್ರಶೇಖರ್ ವಂಚನೆ,ಸುಲಿಗೆಯಿಂದಲೇ ಅಪಾರ ಸಂಪತ್ತು ಸಂಪಾದಿಸಿದ್ದು, ಆತನ ಮನೆ ಮೇಲೆ ದಾಳಿ ನಡೆಸಿದ್ದ ಇಡಿ 16 ಐಷಾರಾಮಿ ಕಾರು ಹಾಗೂ ಕೇಜಿಗಟ್ಟಲೇ ಚಿನ್ನ ವಶಪಡಿಸಿಕೊಂಡಿತ್ತು.

Actress leena-maria-paul arrest in extortion racket

RELATED ARTICLES

Most Popular