Darshan: ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್: ಗಣೇಶ ಚತುರ್ಥಿಗೆ ದರ್ಶನ್ ಸಿನಿಮಾ ಟೈಟಲ್ ಅನೌನ್ಸ್

ರಾಬರ್ಟ್ ಸಿನಿಮಾದ ಬಳಿಕ ಚಾಲೆಂಜಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎಂದು ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಮತ್ತೊಮ್ಮೆ ಯಜಮಾನ ಚಿತ್ರತಂಡದ ಜೊತೆ ದರ್ಶನ್ ಒಂದಾಗುತ್ತಿದ್ದು, ಹೊಸ ಸಿನಿಮಾದ ಟೈಟಲ್ ಸೆ.10 ರ ಗಣೇಶ ಚತುರ್ಥಿಯಂದು ಅನಾವರಣಗೊಳ್ಳಲಿದೆ.

ಡಿ ಬಾಸ್ ನಟನೆಯ 55 ನೇ ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ.ಸುರೇಶ್ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 2019 ರಲ್ಲಿ ದರ್ಶನ್ ಗೆ ಹೆಸರು ತಂದುಕೊಟ್ಟ ಯಜಮಾನ ಚಿತ್ರತಂಡ ಜೊತೆ ತಮ್ಮ ಮತ್ತೊಂದು ಸಿನಿಮಾದ ಸಿಹಿಸುದ್ದಿಯನ್ನು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ದರ್ಶನ್ ರಾಜಾವೀರಮದಕರಿ ನಾಯಕ ಸಿನಿಮಾದಲ್ಲಿ ನಟಿಸುತ್ತಿದ್ದು, 55 ನೇ ಸಿನಿಮಾದ ಟೈಟಲ್ ಗಣೇಶ ಹಬ್ಬದಂದು ಹೊರಬೀಳಲಿದೆ. ಮೀಡಿಯಾ ಹೌಸ್ ಅಡಿಯಲ್ಲಿ ದರ್ಶನ್ 55 ನೇ ಸಿನಿಮಾ ನಿರ್ಮಾಣವಾಗುತ್ತಿದ್ದು, ಇದು ಮೀಡಿಯಾ ಹೌಸ್ ಅಡಿಯಲ್ಲಿ ಬರ್ತಿರೋ ಡಿ ಬಾಸ್ 10 ನೇ ಸಿನಿಮಾ.

ಕಳೆದ ವರ್ಷ ರಿಲೀಸ್ ಆದ ಡಿ ಬಾಸ್ ನಟನೆಯ ರಾಬರ್ಟ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಲಾಭ ಗಳಿಸಿದ್ದು, ಕಣ್ಣೇ ಹೊಡಿಯಾಕ್ ಸಾಂಗ್ ಹಲವು ದಾಖಲೆ ಬರೆದಿತ್ತು.  

Dboss 55 th movie title launchess on ganesh chaturthi

Comments are closed.