ಭಾನುವಾರ, ಏಪ್ರಿಲ್ 27, 2025
HomeCinemaDisha Rapecase: ದಿಶಾ ಅತ್ಯಾಚಾರ ಪ್ರಕರಣ:ಸಲ್ಮಾನ್ ಖಾನ್ ಸೇರಿ 38 ಜನರಿಗೆ ಎದುರಾಯ್ತು ಸಂಕಷ್ಟ

Disha Rapecase: ದಿಶಾ ಅತ್ಯಾಚಾರ ಪ್ರಕರಣ:ಸಲ್ಮಾನ್ ಖಾನ್ ಸೇರಿ 38 ಜನರಿಗೆ ಎದುರಾಯ್ತು ಸಂಕಷ್ಟ

- Advertisement -

ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ಥೆಯ ಗೌಪ್ಯತೆ ಕಾಪಾಡುವಲ್ಲಿ ವಿಫಲರಾದ ಕಾರಣಕ್ಕೆ ಬಾಲಿವುಡ್ ನ ಸೆಲೆಬ್ರೆಟಿಗಳು ಸಂಕಷ್ಟಕ್ಕಿಡಾಗಿದ್ದು, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಒಟ್ಟು 38 ಜನರ ವಿರುದ್ಧ ಕ್ರಮಜರುಗಿಸುವಂತೆ ಕೋರಿ ದೂರು ದಾಖಲಾಗಿದೆ.

2019 ರಲ್ಲಿ ಹೈದ್ರಾಬಾದ್ ನ ಸೈಬರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪಶುವೈದ್ಯೆಯೊಬ್ಬಳನ್ನು ನಾಲ್ವರು ಕಾಮುಕರು ಅತ್ಯಾಚಾರ ಎಸಗಿ ಸುಟ್ಟು ಹಾಕಿದ್ದರು. ದೇಶದಾದ್ಯಂತ ಸಂಚಲನ ಮೂಡಿಸಿದ್ದ  ಈ ಪ್ರಕರಣದಲ್ಲಿ ಬಾಲಿವುಡ್ ನಟ-ನಟಿಯರು ಸಂಕಷ್ಟಕ್ಕಿಡಾಗಿದ್ದಾರೆ.

ಈ ಪ್ರಕರಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶವ್ಯಕ್ತಪಡಿಸುವ ಭರದಲ್ಲಿ ಸೆಲೆಬ್ರೆಟಿಗಳು ಅತ್ಯಾಚಾರ ಸಂತ್ರಸ್ಥೆಯ ನಿಜವಾದ ಹೆಸರು,ಊರು ವಿಳಾಸ ದಾಖಲಿಸುವ ಮೂಲಕ ನಿಯಮ ಉಲ್ಲಂಘಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ದೆಹಲಿ ಮೂಲದ ಗೌರವ್ ಗುಲಾಟಿ ಎಂಬ ವಕೀಲರು, ಸೆಲೆಬ್ರೆಟಿಗಳ ವಿರುದ್ಧ ದೆಹಲಿಯ ಸಬ್ಜಿ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನುಪಮ್ ಖೇರ್, ಫರ್ಹಾನ್ ಅಖ್ತರ್,ಅಜಯ್ ದೇವಗನ್,ಅಕ್ಷಯ್ ಕುಮಾರ್, ಸಲ್ಮಾನ್ ಖಾನ್,ರವಿತೇಜ್,ರಕುಲ್ ಪ್ರೀತ ಸಿಂಗ್ ಅಲ್ಲು ಸೀರಿಶ್,ಚಾರ್ಮಿ ಕೌರ್ ವಿರುದ್ಧ ಆರೋಪ ಕೇಳಿಬಂದಿದೆ.  

Case Filed Against 36 celebrities For Revealing Name of Victim in Disha Rape Case

RELATED ARTICLES

Most Popular