ನಿಫಾ ವೈರಸ್ ಲಕ್ಷಣಗಳು ಹೇಗಿರುತ್ತೆ ಗೊತ್ತಾ?

ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸದ ನಡುವೆ ರಾಜ್ಯದಲ್ಲಿಯೂ ಹೆಮ್ಮಾರಿಯ ಆತಂಕ ಎದುರಾಗಿದ್ದು, ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ತೀವ್ರ ಜ್ವರ, ಮೈಕೈ ನೋವು, ನಡುಕ, ತೊದಲುವಿಕೆ, ತಲೆನೋವು, ವಾಂತಿ, ನಿದ್ರಾಲಸ್ಯ, ಪ್ರಜ್ಞಾಹೀನತೆ- ಇವು ನಿಫಾ ವೈರಸ್ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ

ಈ ಎಚ್ಚರಿಕೆಗಳನ್ನು ಅನುಸರಿಸಿ : ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು  ಬಾವಲಿಗಳು ಅತಿ ಹೆಚ್ಚು ಕಂಡುಬರುವ ಪ್ರದೇಶ ಗಳಿಂದ ಸಂಗ್ರಹಿಸಿದ ನೀರು ಕುಡಿಯಬಾರದು  ರೋಗಿ ಯ ಶರೀರ ಸ್ರಾವದೊಂದಿಗೆ (ಜೊಲ್ಲು, ಬೆವರು, ಮೂತ್ರ) ಸಂಪರ್ಕ ತಪ್ಪಿಸಿ.

ಇದನ್ನೂ ಓದಿ: 2 ಅಲೆಗಿಂತ 7 ಪಟ್ಟು ಹೆಚ್ಚು ಮಕ್ಕಳನ್ನು ಕಾಡುತ್ತೆ ಕೊರೊನಾ 3ನೇ ಅಲೆ : ತಜ್ಞರ ವರದಿ ಆತಂಕ

ಈ ಕ್ರಮಗಳನ್ನು ಅನುಸರಿಸಿ : ಸೋಂಕಿತ ಪ್ರದೇಶ ಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯ ಗಳನ್ನು ಕೈಗೊಳ್ಳಿ  ಹಂದಿ, ಕುದುರೆ, ನಾಯಿ, ಬೆಕ್ಕು ಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಪ್ರತ್ಯೇಕವಾಗಿಡಿ  ಸೋಂಕಿತರ ಸಂಪರ್ಕದಿಂದ ದೂರವಿರಬೇಕು.

ಇದನ್ನೂ ಓದಿ: INDIA CORONA UPDATES : ಭಾರತದಲ್ಲಿ 24 ಗಂಟೆಯಲ್ಲಿ 47,092 ಹೊಸ ಕೊರೊನಾ ಸೋಂಕು ಪತ್ತೆ

ರೋಗಿ ಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಶುಚಿ ಗೊಳಿಸಬೇಕು  ಹಸ್ತಲಾಘವ ಕೊಡುವುದನ್ನು ತಪ್ಪಿಸಿ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ  ರೋಗಿಯನ್ನು ಉಪಚರಿಸುವಾಗ ಮಾಸ್ಕ್, ಗ್ಲೌಸ್ ಕಡ್ಡಾಯ  ಎಲ್ಲಾ ರೀತಿಯ ಹಣ್ಣು, ತರಕಾರಿಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಿ

(Do you know what the symptoms of Nipah virus look like)

Comments are closed.