Nwc:ದೇಶದೆಲ್ಲೆಡೆಗಿಂತ ಹೆಚ್ಚು ಮಹಿಳಾ ಶೋಷಣೆ ಉತ್ತರಪ್ರದೇಶದಲ್ಲಿ: ಬಿಜೆಪಿಗೆ ಮುಜುಗರ ತಂದ ವರದಿ

ನವದೆಹಲಿ: ಕೊರೋನಾ ಉದ್ಯೋಗದ ಕೊರತೆ, ಆರ್ಥಿಕ ಮುಗ್ಗಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೇ ದೇಶದಲ್ಲಿ ಪ್ರಸಕ್ತ ವರ್ಷ ಮಹಿಳೆಯರ ಮೇಲಿನ ದೌರ್ಜನ್ಯಗಳು ಪ್ರಕರಣಗಳು ಹೆಚ್ಚು ವರದಿಯಾಗಿವೆ.

ಕಳೆದ ವರ್ಷಕ್ಕೆ ಹೋಲಿಸಿದರೇ ಕೇವಲ 8 ತಿಂಗಳಿನಲ್ಲೇ ಶೇಕಡಾ 46 ರಷ್ಟು ಮಹಿಳಾ ಶೋಷಣೆ ಪ್ರಕರಣಗಳು ಹೆಚ್ಚಿದ್ದು, ಇವುಗಳ ಪೈಕಿ ಉತ್ತರ ಪ್ರದೇಶದಲ್ಲೇ ಹೆಚ್ಚಿನ ಪ್ರಕರಣ ದಾಖಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ.

ಇದನ್ನು ಓದಿ: ನಿಮಗೆ 75 ವರ್ಷ ದಾಟಿದೆಯಾ? ನಿಮಗಿದೆ ಶುಭ ಸುದ್ದಿ , ಹಿರಿಯರು ಇನ್ಮೇಲೆ Income Tax ಪಾವತಿಸಬೇಕಿಲ್ಲ !

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಆಯೋಗವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತ ಬಂದಿದೆ. ಹೀಗಾಗಿ ಮಹಿಳೆಯರು ಧೈರ್ಯವಾಗಿ ದೂರು ದಾಖಲಿಸಲು ಸಿದ್ಧವಾಗುತ್ತಿದ್ದಾರೆ ಎಂದರು.

2021 ರ ಜನವರಿಯಿಂದ ಅಗಸ್ಟ್ ಅಂತ್ಯದವರೆಗೆ ದೇಶದಲ್ಲಿ ಒಟ್ಟು 19,953 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಾಂತ್ಯಕ್ಕೆ ಒಟ್ಟು 13,618 ಪ್ರಕರಣಗಳು ಮಾತ್ರ ದಾಖಲಾಗಿದ್ದವು. ಈ ವರ್ಷ ಜುಲೈ ತಿಂಗಳೊಂದರಲ್ಲೇ 3,248 ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.

(crimes against women rised in india in 2021)

Comments are closed.