Bomb threat to plane: ಗೋವಾ-ಮಾಸ್ಕೋ ವಿಮಾನಕ್ಕೆ ಬಾಂಬ್ ಬೆದರಿಕೆ: ಉಜ್ಬೇಕಿಸ್ತಾನ್‌ದಲ್ಲಿ ತುರ್ತು ಭೂಸ್ಪರ್ಶ

ನವದೆಹಲಿ: (Bomb threat to plane) ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನಕ್ಕೆ ಬಾಂಬ್‌ ಬೆದರಿಕೆಯ ಕರೆ ಬಂದಿದೆ ಈ ಹಿನ್ನಲೆಯಲ್ಲಿ ಜನವರಿ 21 ರ ಶನಿವಾರದ ಮುಂಜಾನೆ ವಿಮಾನವನ್ನು ಉಜ್ಬೇಕಿಸ್ತಾನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನದಲ್ಲಿ 240 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಬಾಂಬ್‌ ಬೆದರಿಕೆಯ ಹಿನ್ನಲೆಯಲ್ಲಿ ಜಾಮ್‌ನಗರ ಭಾರತೀಯ ವಾಯುಪಡೆ ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ.

“ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ಅಜುರ್ ಏರ್ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್‌ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಿಗೆ ಮೆಸೇಜ್‌ ಬಂದಿದೆ. ಈ ಹಿನ್ನಲೆಯಲ್ಲಿ ಜಾಮ್‌ನಗರ ಭಾರತೀಯ ವಾಯುಪಡೆ ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಧಿಕಾರಿಗಳು ವಿಮಾನದ ಸಂಪೂರ್ಣ ತಪಾಸಣೆ ನಡೆಸುತ್ತಿದ್ದಾರೆ.

236 ಪ್ರಯಾಣಿಕರೊಂದಿಗೆ ಮಾಸ್ಕೊದಿಂದ ಗೋವಾಕ್ಕೆ ಬರುತ್ತಿದ್ದ ‘ದಿ ಅಜುರ್ ಏರ್’ ವಿಮಾನಕ್ಕೆ ಜನವರಿ 10ರಂದು ಬಾಂಬ್ ಬೆದರಿಕೆ ಕರೆ ಬಂದಿತ್ತು. ಗೋವಾ ಎಟಿಸಿಗೆ ಕರೆ ಮಾಡಿದ್ದ ದುಷ್ಕರ್ಮಿಗಳು ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದರು. ವಿಮಾನವನ್ನು ಜಾಮ್‌ನಗರದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ‘ದಿ ಅಜುರ್ ಏರ್’ ವಿಮಾನಕ್ಕೆ ಬಾಂಬ್ ದಾಳಿ ಭೀತಿಯ ಬಗ್ಗೆ ಭಾರತೀಯ ಅಧಿಕಾರಿಗಳು ರಾಯಭಾರ ಕಚೇರಿಯನ್ನು ಎಚ್ಚರಿಸಿದ್ದಾರೆ ಎಂದು ದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

ಇದನ್ನೂ ಓದಿ : Truck-car collision: ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿ : 3 ಸಾವು, 2 ಮಂದಿಗೆ ಗಾಯ

ಇದನ್ನೂ ಓದಿ : Praveen Nettaru murder case: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪಿಎಫ್‌ಐ ನಂಟು ಹೊಂದಿರುವ 20 ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಇದರ ಬೆನ್ನಲ್ಲೇ ಗೋವಾ ಪೊಲೀಸರು ಮುಂಜಾಗೃತಾ ಕ್ರಮವಾಗಿ ದಾಬೋಲಿಮ್‌ ವಿಮಾನ ನಿಲ್ದಾಣದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಬಾಂಬ್‌ ಬೆದರಿಕೆಯ ಕರೆ ಬಂದಿದೆ. ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ ಸಿಐಎಸ್ಎಫ್ ಅಧಿಕಾರಿಯೊಬ್ಬರು, ವಿಮಾನ ನಿಲ್ದಾಣ ಕಾರ್ಯಾಚರಣೆ ನಿಯಂತ್ರಣ ಕೇಂದ್ರ (ಎಒಸಿಸಿ) ಭದ್ರತಾ ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ (ಎಸ್‌ಒಸಿಸಿ) ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.

Bomb threat to plane: Bomb threat to Goa-Moscow flight: Emergency landing in Uzbekistan

Comments are closed.