Building collapse-3 died: 3 ಅಂತಸ್ತಿನ ಕಟ್ಟಡ ಕುಸಿತ: 2 ಮಕ್ಕಳು ಸೇರಿದಂತೆ 3 ಸಾವು, 6 ಮಂದಿಗೆ ಗಾಯ

ವಿಶಾಖಪಟ್ಟಣಂ: (Building collapse-3 died) ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಮುಂಜಾನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ. ಬೆಳಗಿನ ಜಾವ 2 ಗಂಟೆಗೆ ರಾಮಜೋಗಿ ಪೇಟೆಯ ಹಳೆಯ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ರಾಮಜೋಗಿ ಪೇಟೆಯ ಹಳೆಯ ಕಟ್ಟಡವೊಂದು ಕುಸಿದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರು ಮಂದಿಯನ್ನು ರಕ್ಷಿಸಿದ್ದಾರೆ. ಅಕ್ಕಪಕ್ಕದ ಜಮೀನಿನಲ್ಲಿ ಬೋರ್‌ ವೆಲ್‌ ಕೊರೆಸುತ್ತಿದ್ದ ಕಾರಣದಿಂದ ಮನೆಯ ಅಡಿಪಾಯ ದುರ್ಬಲವಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ವೈಜಾಗ್‌ನ ಸಿಒಪಿ ಸಿಎಚ್ ಶ್ರೀಕಾಂತ್ ಮಾತನಾಡಿ, “ಕಳೆದ ಮಧ್ಯರಾತ್ರಿ ಮನೆ ಕುಸಿದ ಘಟನೆ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಹಾಜರಾಗಿ 6 ಜನರನ್ನು ರಕ್ಷಿಸಿದರು. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇದರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಇನ್ನೋರ್ವ ಬಲಿಪಶು ಬಿಹಾರದಿಂದ ಬಂದವರು, ಇಲ್ಲಿ ಕೆಲಸ ಮಾಡುತ್ತಿದ್ದರು.” ಎಂದಿದ್ದಾರೆ. ಮೃತರಿಬ್ಬರನ್ನು ನೂಡಲ್ಸ್ ಮಾರಾಟಗಾರ ಅಂಜಲಿ (15 ವರ್ಷ) ಮತ್ತು ಚೋಟು (30 ವರ್ಷ) ಎಂದು ಗುರುತಿಸಲಾಗಿದ್ದು, ಮೂರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಇನ್ನು ಘಟನೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯರು ಮತ್ತು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಇದನ್ನೂ ಓದಿ : BMTC conductor burnt alive: BMTC ಬಸ್ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್

ಇದನ್ನೂ ಓದಿ : Assault on teacher: ಶಾಲೆಯಲ್ಲಿ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ : ಶಿಕ್ಷಕನ ಮೇಲೆ ಪೋಷಕರಿಂದ ಹಲ್ಲೆ

ಇದನ್ನೂ ಓದಿ : Kanchipuram explosion: ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 7 ಮಂದಿ ಸಾವು

Building collapse-3 died: 3 storied building collapse: 3 dead including 2 children, 6 injured

Comments are closed.