ಬೆಂಗಳೂರು: (Bus driver attempt to suicide) ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆರ್. ಆರ್. ನಗರದ ಡಿಪೋ 21 ರಲ್ಲಿ ನಡೆದಿದೆ. ರಂಗನಾಥ್ ಎನ್ನುವವರು ಆತ್ಮಹತ್ಯೆಗೆ ಯತ್ನಿಸಿರುವ ಚಾಲಕ.
ಮಾಗಡಿ ಮೂಲದವರಾಗಿದ್ದ ರಂಗನಾಥ್ ಕಳೆದ ಹದಿನೈದು ವರ್ಷಗಳಿಂದ ಬಿಎಂಟಿಸಿ ಬಸ್ ನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಡಿಪೋ ಮ್ಯಾನೇಜರ್ ಆದ ನಾಗರಾಜ್ ಗೌಡ ಅವರು ರಂಗನಾಥ್ ಅವರಿಗೆ ರಜೆ ನೀಡದೇ ಸತಾಯಿಸುತ್ತಿದ್ದು, ಹೆಚ್ಚುವರಿಯಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಎಟಿಎಸ್ ಚರಿತಾ ರಂಗನಾಥ್ ಅವರಿಗೆ ಕಿರುಕುಳ ನೀಡುತ್ತಿದ್ದು, ಇದರಿಂದ ರಂಗನಾಥ್ ಮನನೊಂದಿದ್ದರು.
ಇಂದು ಬೆಳಿಗ್ಗೆ ಎಂದಿನಂತೆ ರಂಗನಾಥ್ ಡಿಪೋಗೆ ಬಂದು ಕರ್ತವ್ಯಕ್ಕೆ ಹಾಜರಾಗಿದ್ದು, ಇವರು ಬಂದಾಗ ಮ್ಯಾನೇಜರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೊದಲೇ ಇವರ ಕಿರುಕುಳಕ್ಕೆ ಬೇಸತ್ತಿದ್ದ ರಂಗನಾಥ್ ಇದರಿಂದ ತೀವ್ರವಾಗಿ ಮನನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಲ್ಲದೇ ಆತ್ಮಹತ್ಯೆಗೆ ಯತ್ನಿಸುವ ಮೊದಲೇ ಪತ್ರ ಬರೆದಿದ್ದು ಅದರಲ್ಲಿ ಡಿಪೋ ಮ್ಯಾನೇಜರ್ ಆದ ನಾಗರಾಜ್ ಗೌಡ ರಜೆ ನೀಡದೇ ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಎಟಿಎಸ್ ಚರಿತಾ ನನಗೆ ಕಿರುಕುಳ ಕೊಡ್ತಿದ್ದಾರೆ ಎಂಬುದಾಗಿ ಪತ್ರದಲ್ಲಿ ಬರೆದಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ವಿಷ ಕುಡಿದ ವಿಚಾರ ತಿಳಿಯುತ್ತಿದ್ದಂತೆ ಡಿಪೋದಲ್ಲಿದ್ದ ಬಿಎಂಟಿಸಿ ಸಿಬ್ಬಂದಿಗಳು ರಂಗನಾಥ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ : Road crash in bengaluru: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ : ಬೆಂಗಳೂರಲ್ಲಿ ಕುಸಿಯಿತು ರಸ್ತೆ
ಇದನ್ನೂ ಓದಿ : Hit and drag case: ಬಾನೆಟ್ ಮೇಲೆ ಯುವಕನನ್ನು 1 ಕಿ.ಮೀ. ಎಳೆದೊಯ್ದ ಕಾರು ಚಾಲಕಿ
ರಂಗನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Bus driver attempt to suicide: Tired of being harassed by the authorities, the BMTC bus driver tried to commit suicide