KMF RBKMUL Recruitment 2023 : ಕೆಎಮ್‌ಎಫ್‌ ವಿವಿಧ ಹುದ್ದೆಗಳಿಗೆ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ (KMF RBKMUL Recruitment 2023) ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆದೊಂದಿಗೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ತಿಳಿಸಿದ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿದೆ.

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಇಲಾಖೆಯ ಹೆಸರು : ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ (KMF RBKMUL)
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 24 ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆವಾರು ಹುದ್ದೆಗಳ ವಿವರ :

  • ಡೈರಿ ಮೇಲ್ವಿಚಾರಕರು ದರ್ಜೆ : 6 ಹುದ್ದೆಗಳು
  • ಆಡಳಿತ ಸಹಾಯಕ ದರ್ಜೆ : 6 ಹುದ್ದೆಗಳು
  • ಅಕೌಂಟ್ಸ್ ಅಸಿಸ್ಟೆಂಟ್ ದರ್ಜೆ : 2 ಹುದ್ದೆಗಳು
  • ಕಿರಿಯ ತಾಂತ್ರಿಕರು (ಬಾಯ್ಲರ್) : 5 ಹುದ್ದೆಗಳು
  • ಕಿರಿಯ ತಾಂತ್ರಿಕರು (ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್) : 2 ಹುದ್ದೆಗಳು
  • ಕಿರಿಯ ತಾಂತ್ರಿಕರು (ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್) : 2 ಹುದ್ದೆಗಳು
  • ಕಿರಿಯ ತಾಂತ್ರಿಕರು (ರೆಫ್ರಿಜರೇಶನ್‌ ಮತ್ತು ಎ.ಸಿ) : 1 ಹುದ್ದೆ

ವಿದ್ಯಾರ್ಹತೆ :
ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಇಲಾಖೆಯ ಮಾನದಂಡದ ಪ್ರಕಾರ ಆಯಾ ಹುದ್ದೆಗಳಿಗೆ ಸಂಬಂಧ ಪಟ್ಟ ವಿದ್ಯಾರ್ಹತೆ ಒಳಗೊಂಡಿರುತ್ತದೆ.

ವಯೋಮಿತಿ ವಿವರ :
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ ೧೮ ವರ್ಷ ವಯೋಮಿತಿಯನ್ನು ಪೂರೈಸಿರಬೇಕು. ಹಾಗೆ ಎಸ್‌ಸಿ, ಎಸ್‌ಟಿ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯಸ್ಸನ್ನು ಮೀರಿರಬಾರದು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯಸ್ಸು ಮೀರಬಾರದು. ಇನ್ನುಳಿದಂತೆ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯಸ್ಸನ್ನು ಮೀರಿರಬಾರದು.

ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹುದ್ದೆವಾರು ವೇತನ ಶ್ರೇಣಿ ವಿವರ :

  • ಡೈರಿ ಮೇಲ್ವಿಚಾರಕರು ದರ್ಜೆ : ರೂ.40900-78200/-
  • ಆಡಳಿತ ಸಹಾಯಕ ದರ್ಜೆ : ರೂ.21400-42000/-
  • ಅಕೌಂಟ್ಸ್ ಅಸಿಸ್ಟೆಂಟ್ ದರ್ಜೆ : ರೂ.21400-42000/-
  • ಕಿರಿಯ ತಾಂತ್ರಿಕರು (ಬಾಯ್ಲರ್) : ರೂ.21400-42000/-
  • ಕಿರಿಯ ತಾಂತ್ರಿಕರು (ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್) : ರೂ.21400-42000/-
  • ಕಿರಿಯ ತಾಂತ್ರಿಕರು (ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್) : ರೂ.21400-42000/-
  • ಕಿರಿಯ ತಾಂತ್ರಿಕರು (ರೆಫ್ರಿಜರೇಶನ್‌ ಮತ್ತು ಎ.ಸಿ) : ರೂ.21400-42000/-

ಇದನ್ನೂ ಓದಿ : KVAFSU Recruitment 2023 : ಪಶು, ಮೀನುಗಾರಿಕೆ ಇಲಾಖೆ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : CISF Recruitment 2023 : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ : 706 ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ನೇಮಕಾತಿ

ಇದನ್ನೂ ಓದಿ : ಭಾರತೀಯ ಸೇನೆಯ ಅಗ್ನಿಶಾಮಕ, ಸಹಾಯಕ ಹಾಗೂ ವಿವಿಧ ಹುದ್ದೆಗಳ ನೇಮಕಾತಿ

ಪ್ರಮುಖ ದಿನಾಂಕಗಳು :
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26 ಜನವರಿ 2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಫೆಬ್ರವರಿ 2023

KMF RBKMUL Recruitment 2023 : KMF Recruitment for Various Posts : Apply Now

Comments are closed.