Bus overtuns in Kerala: ಶಬರಿಮಲೆ ಯಾತ್ರಾರ್ಥಿಗಳ ಬಸ್‌ ಪಲ್ಟಿ: 18 ಮಂದಿಗೆ ಗಾಯ

ಪಟ್ಟಣಂತಿಟ್ಟ: (Bus overtuns in Kerala) ಶಬರಿಮಲೆಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಪಲ್ಟಿಯಾಗಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ಕೇರಳದ ಪತನಂತಿಟ್ಟ ಬಳಿ ಶನಿವಾರ ನಡೆದಿದೆ.

ಈಗಾಗಲೇ ಶಬರಿಮಲೆ ಯಾತ್ರೆ ಪ್ರಾರಂಭವಾಗಿದ್ದು, ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಯಾತ್ರಾರ್ಥಿಗಳು ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆಂದು ಹಲವು ಕಡೆಗಳಿಂದ ತೆರಳುತ್ತಾರೆ. ಈ ವರ್ಷವು ಕೂಡ ಶಬರಿಮಲೆ ಯಾತ್ರೆ ಪ್ರಾರಂಭವಾಗಿದ್ದು, ಯಾತ್ರೆಗೆ ತೆರಳುವ ವೇಳೆ ಆಂಧ್ರ ಪ್ರದೇಶ ಯಾತ್ರಾರ್ಥಿಗಳ ಬಸ್‌ ಪಲ್ಟಿಯಾಗಿರುವ ಘಟನೆ(Bus overtuns in Kerala) ನಡೆದಿದೆ.

ಆಂಧ್ರ ಪ್ರದೇಶದಿಂದ ಬಸ್‌ ಶಬರಿಮಲೆಗೆ ತೆರಳುತ್ತಿರುವ ವೇಳೆ ಈ ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ 8 ವರ್ಷದ ಬಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮಲಯಾಳ ಮನೋರಮಾ ತಿಳಿಸಿದ್ದಾರೆ. ಅವರನ್ನು ರಾಜಶೇಖರ್ (33 ವರ್ಷ), ಗೋಪಿ (33 ವರ್ಷ), ರಾಜೇಶ್ (35 ವರ್ಷ) ಮತ್ತು ಮಣಿಕಂಠನ್ (8 ವರ್ಷ) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಪತ್ತನಂತಿಟ್ಟದ ರಾನ್ನಿ ಬಳಿಯ ಪೆರಿನಾಡು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನಾ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಲು ಮಾರ್ಗದರ್ಶನ ನೀಡಿದ್ದು, ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

ಇದನ್ನೂ ಓದಿ : Apartment block collapse: ಸಿಲಿಂಡರ್‌ ಬ್ಲಾಸ್ಟ್‌; ಅಪಾರ್ಟ್ಮೆಂಟ್‌ ಬ್ಲಾಕ್‌ ಕುಸಿತ

ಇದನ್ನೂ ಓದಿ : Stepfather Arrest: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಮಲತಂದೆ ಅರೆಸ್ಟ್

ದಕ್ಷಿಣ ಭಾರತದ ನಾನಾ ಭಾಗಗಳಿಂದ ಭಕ್ತರನ್ನು ಆಕರ್ಷಿಸುವ ಶಬರಿಮಲೆ ಯಾತ್ರೆ ಗುರುವಾರದಿಂದ ಆರಂಭವಾಗಿದ್ದು, ಯಾತ್ರೆಗೆಂದು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.

(Bus overtuns in Kerala) A bus carrying pilgrims to Sabarimala overturned and 18 people were injured in an incident that took place near Patanthitta in Kerala on Saturday.

Comments are closed.