Byndur murder case : ಮಲಯಾಳಂ ಸಿನಿಮಾ ಆಧರಿಸಿ ನಡೆದಿತ್ತು ಹತ್ಯೆಗೆ ಮಾಸ್ಟರ್​ ಪ್ಲಾನ್​

ಉಡುಪಿ : Byndur murder case :ಬೈಂದೂರು ತಾಲೂಕು ಪಡುವರಿ ಗ್ರಾಮದ ಒತ್ತಿನೆಣೆ ಎಂಬಲ್ಲಿ ನಡೆದ ಆನಂದ ದೇವಾಡಿಗ ಕೊಲೆ ಪ್ರಕರಣ ಇಡೀ ಬೈಂದೂರು ತಾಲೂಕನ್ನು ಬೆಚ್ಚಿ ಬೀಳಿಸಿದೆ. ಅಮಾಯಕನ ಕೊಲೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಬೈಂದೂರು ಠಾಣಾ ಪೊಲೀಸರು ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಸದನಾಂದ ಶೇರಿಗಾರ್​ ಹಾಗೂ ಆತನ ಸಹೋದರ ಸಂಬಂಧಿಗಳಾದ ಸತೀಶ್​ ದೇವಾಡಿಗ ಹಾಗೂ ನಿತ್ಯಾನಂದ ದೇವಾಡಿಗ ಈ ಕೊಲೆಗೆ ಸಂಪೂರ್ಣ ಮಾಸ್ಟರ್​ ಪ್ಲಾನ್​ ರೂಪಿಸಿದ್ದರು ಎನ್ನಲಾಗಿದೆ.


ಮಲಯಾಳಂ ಸಿನಿಮಾ ಕುರೂಪ್​ ಕತೆಯಾಧರಿಸಿ ಕೊಲೆಗೆ ಸಂಚು :

ಸದಾನಂದ ಶೇರಿಗಾರ್​ ಸಹೋದರ ಸಂಬಂಧಿಯಾದ ಸತೀಶ್​ ದೇವಾಡಿಗ ವೃತ್ತಿಯಲ್ಲಿ ಟೈಲರ್​ ಆಗಿದ್ದ. ಸ್ವಂತ ಅಂಗಡಿಯನ್ನು ಇಟ್ಟುಕೊಂಡಿದ್ದ ಈತ ಸದಾನಂದ ದೇವಾಡಿಗನನ್ನು ಭೂಮಿ ವ್ಯಾಜ್ಯದಿಂದ ಹೊರ ತರುವ ಸಲುವಾಗಿ ಅಮಾಯಕನೊಬ್ಬನನ್ನು ಕೊಲೆ ಮಾಡಲು ಪ್ಲಾನ್​ ರೂಪಿಸಿದ್ದ ಎನ್ನಲಾಗಿದೆ. ಈತನ ಟೈಲರ್​ ಶಾಪ್​ನಲ್ಲಿಯೇ ಕೊಲೆಗೆ ಸಂಪೂರ್ಣ ಪ್ಲಾನ್​ ಮಾಡಲಾಗಿತ್ತು . ಮಲಯಾಳಂ ಸಿನಿಮಾ ಕುರೂಪ್​​​ನ ಕತೆಯಾಧರಿಸಿ ಈ ಕೊಲೆಗೆ ಸತೀಶ್​ ದೇವಾಡಿಗ ಪ್ಲಾನ್​ ಮಾಡಿದ್ದ ಎಂದು ತಿಳಿದು ಬಂದಿದೆ.


ಸಂಪೂರ್ಣ ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸಿದ ಸದಾನಂದ ಶೇರಿಗಾರ್​ ತನ್ನ ಸಹೋದರರಿಗೆ ಕರೆ ಮಾಡಿ ನಾನು ಕಾಣೆಯಾಗಿದ್ದೇನೆಂದು ದೂರು ನೀಡುವಂತೆ ಕೇಳಿದ್ದ ಎನ್ನಲಾಗಿದೆ. ಆದರೆ ಸಹೋದರ ಅಣ್ಣನ ಮಾತಿಗೆ ಸೊಪ್ಪು ಹಾಕದೇ ಯಾವುದೇ ದೂರನ್ನು ನೀಡಲು ಹೋಗಿರಲಿಲ್ಲ.


ಆನಂದ ದೇವಾಡಿಗನನ್ನು ಆಯ್ಕೆ ಮಾಡಿದ್ದು ಶಿಲ್ಪಾ :
ಈ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಶಿಲ್ಪಾ ಆರೋಪಿ ಸದಾನಂದ ಶೇರಿಗಾರ್​ ಸ್ನೇಹಿತೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಆನಂದ ದೇವಾಡಿಗನನ್ನೇ ಕೊಲೆ ಮಾಡೋಣ ಎಂದು ಹೇಳಿದ್ದು ಇದೇ ಶಿಲ್ಪಾ. ಲೈಂಗಿಕ ಸುಖ ನೀಡುತ್ತೇನೆಂದು ಆನಂದ ದೇವಾಡಿಗನನ್ನು ನಂಬಿಸಿದ್ದ ಈಕೆ ಆತನಿಗೆ ವಯಾಗ್ರ ನೀಡುವ ನೆಪದಲ್ಲಿ ನಿದ್ದೆ ಮಾತ್ರೆ ನೀಡಿದ್ದಳು. ಮದ್ಯದೊಳಗೆ ನಿದ್ರೆ ಮಾತ್ರ ಬೆರಿಸಿದ್ದರಿಂದ ಅದನ್ನು ಕುಡಿದ ಆನಂದ್​ ನಿದ್ರೆ ಜಾರಿದ್ದ ಬಳಿಕ ಸದಾನಂದನನ್ನು ಕರೆಸಿ ಆತನನ್ನು ಕಾರಿಗೆ ತುಂಬಿಕೊಂಡು ಒತ್ತಿನೆಣೆಗೆ ಬಂದು ಆನಂದ್​ ಸಮೇತ ಕಾರಿಗೆ ಬೆಂಕಿ ಹಚ್ಚಿ ಆನಂದ್​ ಕೊಲೆ ಮಾಡಿದ್ದರು. ಇದಾದ ಬಳಿಕ ಸ್ಥಳಕ್ಕೆ ಆಗಮಿಸಿದ ಸತೀಶ್​ ದೇವಾಡಿಗ ಹಾಗೂ ನಿತ್ಯಾನಂದ ದೇವಾಡಿಗ ಮತ್ತೊಂದು ಕಾರಿನಲ್ಲಿ ಇವರಿಬ್ಬರನ್ನು ಕರೆದೊಯ್ದಿದ್ದರು .


ಹತ್ಯೆಗೆ ಸ್ಥಳ ಆಯ್ಕೆ ಮಾಡಿದ್ದು ಸತೀಶ್​ & ನಿತ್ಯಾನಂದ
ಆನಂದ ದೇವಾಡಿಗನನ್ನು ಕೊಲೆ ಮಾಡಲು ಪ್ಲಾನ್​ ತಯಾರಾದ ಬಳಿಕ ಘಟನೆ ನಡೆಯುವ ಮೂರು ದಿನಗಳ ಹಿಂದೆ ಸತೀಶ್​ ಹಾಗೂ ನಿತ್ಯಾನಂದ ಹೆನಬೇರ್​ಗೆ ಆಗಮಿಸಿ ಇಲ್ಲಿನ ಅಜ್ಞಾತ ಸ್ಥಳಗಳನ್ನು ಮಾರ್ಕ್​ ಮಾಡಿ ಹೋಗಿದ್ದರು ಎನ್ನಲಾಗಿದೆ.


ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು :
ಪ್ರಕಾಶ್​ ದೇವಾಡಿಗ ಎಂಬವರು ನೀಡಿದ ದೂರು ಆಧರಿಸಿದ ಪೊಲೀಸರು ವಿಧಿವಿಜ್ಞಾನ ತಜ್ಞರ ಸಹಾಯದಿಂದ ಕಾರಿನ ಚಾಸಿಸ್​ ನಂಬರ್​ ಪತ್ತೆ ಮಾಡಿ ಮಾಲೀಕನನ್ನು ಕಂಡು ಹಿಡಿದಿದ್ದರು. ಬಳಿಕ ಸಾಸ್ತಾನ ಸಿಸಿ ಟಿವಿಯಲ್ಲಿ ರೆಕಾರ್ಡ್​ ಆಗಿದ್ದ ಕಾರಿನ ಚಲನವಲನಗಳನ್ನು ಕಲೆ ಹಾಕಿದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಇದನ್ನು ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

ಇದನ್ನೂ ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ

Byndur murder case :A plan to kill based on the story of a Malayalam movie

Comments are closed.