ವಿಟ್ಲ : ಕಾರು ಹಾಗೂ ಆಟೋ ರಿಕ್ಷಾ ನಡುವೆ ನಡೆದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪುಣಚ ಗ್ರಾಮದ ಮಾಣಿಲದಲ್ಲಿ ನಡೆದಿದೆ.
ಪರಿಯಲ್ಲಡ್ಕ ನಿವಾಸಿಯಾಗಿರುವ ಅಶ್ರಪ್ ಎಂಬವರೇ ಸಾವನ್ನಪ್ಪಿರುವ ಆಟೋ ಚಾಲಕ. ಕಾರು ಹಾಗೂ ಆಟೋ ರಿಕ್ಷಾ ಮಾಣಿಲ ಗ್ರಾಮದ ಬಳಿಯಲ್ಲಿ ಪರಸ್ಪರ ಡಿಕ್ಕಿಯಾಗಿದೆ. ಕಾರು ಡಿಕ್ಕಿಯಾದ ಪರಿಣಾಮ ಆಟೋ ಸಂಪೂರ್ಣವಾಗಿ ನುಗ್ಗುಗುಜ್ಜಾಗಿದೆ.
ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಶ್ರಪ್ ಸಾವನ್ನಪ್ಪಿದ್ದಾರೆ. ಈ ಕುರಿತು ವಿಟ್ಲ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಯುವತಿಯ ನಗ್ನ ವಿಡಿಯೋ ಕಾಲ್‌ಗೆ ಬೆತ್ತಲಾದ ಆಟೋ ಚಾಲಕ : ವಾರದಲ್ಲೇ ವೈರಲ್ ಆಯ್ತು ವಿಡಿಯೋ
ಇದನ್ನೂ ಓದಿ : ಮೈಸೂರು ಸಾಮೂಹಿಕ ಅತ್ಯಾಚಾರ : ಐವರು ಆರೋಪಿಗಳ ಬಂಧನ, ಓರ್ವ ಅಪ್ರಾಪ್ತ : ಡಿಜಿ-ಐಜಿಪಿ ಪ್ರವೀಣ್ ಸೂದ್