Car bike accident: ಕೋಟಾದಲ್ಲಿ ಕಾರು-ಬೈಕ್‌ ಢಿಕ್ಕಿ: ನವವಿವಾಹಿತ ಸಾವು, ಇನ್ನೋರ್ವ ಗಂಭೀರ

ಕೋಟಾ: (Car bike accident) ವೇಗವಾಗಿ ಬಂದ ಕಾರೊಂದಕ್ಕೆ ಬೈಕ್‌ ಢಿಕ್ಕಿ ಹೊಡೆದ ಪರಿಣಾಮ ವಾರದ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತನೋರ್ವ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಕೋಟಾದ ದಾದಾಬರಿ ಪ್ರದೇಶದಲ್ಲಿ ನಡೆದಿದೆ. ರಾಜ್‌ ಸೋನಿ ( 22 ವರ್ಷ) ಮೃತ ನವವಿವಾಹಿತ ಯುವಕ.

ಗಾಜಿಯಾಬಾದ್ ಮೂಲದ ಯುವತಿಯನ್ನು ವಾರದ ಹಿಂದೆಯಷ್ಟೇ ವಿವಾಹವಾಗಿದ್ದ 22 ವರ್ಷದ ಯುವಕ ರಾಜ್‌ ಸೋನಿ ಕೋಟಾದ ದಾದಾಬರಿ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದಕ್ಕೆ ಬೈಕ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ ಸೋನಿ ಸ್ನೇಹಿತ ಪ್ರಿನ್ಸ್ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ನಂತರ ಬೈಕ್‌ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರರು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸೋನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವೇಳೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ಮೃತ ಸೋನಿ ಸ್ನೇಹಿತ ಪ್ರಿನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಮೃತ ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸೋನಿಯ ಶವವನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಘಟನೆಯ ಕುರಿತು ಪೊಲೀಸರು ಅಪರಿಚಿತ ಕಾರು ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆಯ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ನಗರದ ಉದ್ಯೋಗನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸೋನಿ ಅವರು ಆಭರಣ ಮಳಿಗೆ ಹೊಂದಿದ್ದು, ವಾರದ ಹಿಂದೆಯಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ. ಈ ಘಟನೆ ನಡೆದಾಗ ಸೋನಿ ಅವರ ಪತ್ನಿ ತನ್ನ ತಂದೆಯ ಮನೆಯಲ್ಲಿದ್ದರು ಎಂದು ಸೋನಿ ಅವರ ಚಿಕ್ಕಪ್ಪ ವರದಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : Gujarath crime: 3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಜೋಡಿ

ಇದನ್ನೂ ಓದಿ : Gaya railway accident: ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದ ಮಹಿಳೆ : ಮುಂದೆ ಏನಾಯ್ತು?

ಇದನ್ನೂ ಓದಿ : Davanagere bike accident: ಅಪರಿಚಿತ ವಾಹನಕ್ಕೆ ಬೈಕ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

Car bike accident: Car-bike collision in Kota: Newlywed dies, another seriously

Comments are closed.