Chamarajnagar bus accident: ಮಹದೇಶ್ವರ ಬೆಟ್ಟದಲ್ಲಿ ಬಸ್‌ ಅಪಘಾತ: 15 ಕ್ಕೂ ಹೆಚ್ಚು ಮಂದಿಗೆ ಗಾಯ

ಚಾಮರಾಜನಗರ: (Chamarajnagar bus accident) ಗುಜರಾತ್‌ ನಿಂದ ಬಂದಿದ್ದ ಪ್ರವಾಸಿಗರ ಬಸ್ಸೊಂದು ಮಹದೇಶ್ವರ ಬೆಟ್ಟದ ಬಳಿಯಲ್ಲಿ ಪಲ್ಟಿಯಾಗಿ 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಗುಜರಾತ್‌ ನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸ್ಲೀಪರ್‌ ಕೋಚ್‌ ಮೂಲಕ ಪ್ರವಾಸಿಗರು ಬಂದಿದ್ದು, ಪಾಲಾರ್‌ ನ ಎರಡನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಸ್‌ ಹಿಂದಕ್ಕೆ ಜಾರಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಬಸ್‌ ನಲ್ಲಿದ್ದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದು, 15 ಕ್ಕೂ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಬಸ್‌ ನಲ್ಲಿ ೫೦ ಮಂದಿ ಪ್ರವಾಸಿಗರು ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಸುಮಾರು ಇಪ್ಪತ್ತು ಅಡಿಯಷ್ಟು ಎತ್ತರದ ಬೆಟ್ಟದಿಂದ ಬಿದ್ದಿದೆ. ಇನ್ನೂ ಬಸ್‌ ನ ಬಲಬಾಗದಲ್ಲಿ ಮಲಗಿದ್ದ ಪ್ರಯಾನಿಕರು ಸೀಟಿನಿಂದ ಸುಮಾರು ಐದಾರು ಅಡಿಯ ಮೇಲಿಂದ ರಸ್ತೆಗೆ ಬಿದ್ದಿದ್ದಾರೆ.

ಪ್ರಯಾಣಿಕರು ಒಂದು ತಿಂಗಳ ಮಟ್ಟಿಗೆ ಭಾರತ ಪ್ರವಾಸಕ್ಕಾಗಿ ಗುಜರಾತ್‌ ನಿಂದ ಬಂದಿದ್ದು, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ಬಸ್‌ ಪಲ್ಟಿಯಾಗಿದೆ. ಇನ್ನೂ ಅಪಘಾತದಲ್ಲಿ ಗಾಉಯಗೊಂಡವರನ್ನು ಮಲೆಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಮತ್ತು ಮೈಸೂರು ಕೆ.ಆರ್.‌ ಆಸ್ಪತ್ರಗೆ ದಾಖಲಿಸಲಾಗಿದೆ.

ಮಲೆ ಮಹದೇಶ್ವರ ಬೆಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಒಳಗಾದ ಟೂರಿಸ್ಟ್‌ ಬಸ್‌ ನ ಭಾಗಗಳು ಹಾನಿಯಾಗಿದ್ದು, ಆರೋಗ್ಯವಾಗಿರುವ ಪ್ರಯಾಣಿಕರನ್ನು ಊರುಗಳತ್ತ ಕಳುಹಿಸಲು ಅನುಕೂಲ ಮಾಡಿಕೊಡಲಾಗಿದ್ದು, ಪಲ್ಟಿಯಾದ ಬಸ್‌ ಅನ್ನು ಕ್ರೇನ್‌ ಮೂಲಕ ತೆಗೆಯಲಾಗಿದೆ. ಪೊಲೀಸರು ಬಸ್‌ ಅನ್ನು ವಶಕ್ಕೆ ಪಡೆದಿದ್ದು, ಬಸ್‌ ಚಾಲಕನನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Rocks fell on highway: ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಬಂಡೆಕಲ್ಲುಗಳು: 1 ಸಾವು, 2 ಮಂದಿಗೆ ಗಾಯ

ಇದನ್ನೂ ಓದಿ : Strange incident-man died: ವಿಚಿತ್ರ ಘಟನೆ: ಮಾಲೀಕನನ್ನೆ ಗುಂಡು ಹಾರಿಸಿ ಕೊಂದ ನಾಯಿ

ಇದನ್ನೂ ಓದಿ : Warrior heart attack death: ತಾಯಿಯ ವರ್ಷದ ಕಾರ್ಯಕ್ಕೆ ಹುಟ್ಟೂರಿಗೆ ಬರುತ್ತಿದ್ದ ಯೋಧ ಹೃದಯಾಘಾತದಿಂದ ಸಾವು

Chamarajnagar bus accident: Bus accident in Mahadeshwar Hill: More than 15 injured

Comments are closed.