ಭಾನುವಾರ, ಏಪ್ರಿಲ್ 27, 2025
HomeCrimeಗೆಳತಿಯನ್ನು ಕೊಲೆಗೈದು ವಾಟ್ಸಾಪ್‌ ಸ್ಟೇಟಸ್‌ ಹಾಕಿ ಸಿಕ್ಕಿಬಿದ್ದ ಪ್ರಿಯಕರ

ಗೆಳತಿಯನ್ನು ಕೊಲೆಗೈದು ವಾಟ್ಸಾಪ್‌ ಸ್ಟೇಟಸ್‌ ಹಾಕಿ ಸಿಕ್ಕಿಬಿದ್ದ ಪ್ರಿಯಕರ

- Advertisement -

Chennai Lover kills Girlfriend : ಚೆನ್ನೈ : ಕೇರಳದ ನರ್ಸಿಂಗ್‌ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿಯೋರ್ವಳು ಚೆನ್ನೈನ ಹೋಟೆಲ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತನ್ನ ಗೆಳತಿಯನ್ನು ಕೊಲೆಗೈದ ಪ್ರಿಯಕರ ವಾಟ್ಸಾಪ್‌ ಸ್ಟೇಟಸ್‌ ಹಾಕಿ ಇದೀಗ ಸಿಕ್ಕಿ ಬಿದ್ದಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರ.

ಫೌಸಿಯಾ (20 ವರ್ಷ) ಎಂಬಾಕೆಯೇ ಕೊಲೆಯಾದ ದುರ್ದೈವಿ. ಆಶಿಕ್‌ ಎಂಬಾತನೇ ಕೊಲೆಗೈದಿರುವ ಆರೋಪಿ. ಫೌಸಿಯಾ ಹಾಗೂ ಆಶಿಕ್‌ ಕೇರಳದ ಕೊಲ್ಲಂ ಮೂಲದವರು. ಚೆನ್ನೈನ ಕ್ರೋಮ್‌ಪೇಟೆಯ ಸಿಎಲ್‌ಸಿ ವರ್ಕ್ಸ್‌ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಫೌಸಿಯಾ ಶವ ಪತ್ತೆಯಾಗಿದೆ.

Chennai Lover kills Girlfriend Fousiya in Hotel Post pic of body as Whatsapp Status
Image Credit to Original Source

ಆರೋಪಿ ಆಶಿಕ್ ಮತ್ತು ಫೌಸಿಯಾ ಬೆಳಿಗ್ಗೆ 10:30ರ ಸುಮಾರಿಗೆ ಹೋಟೆಲ್‌ನಲ್ಲಿ ರೂಮ್‌ ಪಡೆದುಕೊಂಡಿದ್ದರು. ಇಬ್ಬರೂ ರೂಮ್‌ ಸೇರಿಕೊಂಡ ನಂತರದಲ್ಲಿ ಮೊಬೈಲ್‌ನಲ್ಲಿದ್ದ ಮಹಿಳೆಯ ಪೋಟೋದ ಬಗ್ಗೆ ಫೌಸಿಯಾ ಪ್ರಶ್ನಿಸಿದ್ದಾಳೆ. ಈ ವೇಳೆಯಲ್ಲಿ ದಂಪತಿ ನಡುವೆ ಜಗಳವಾಗಿದೆ. ಇದರಿಂದ ಕೋಪಗೊಂಡ ಆಶಿಕ್‌ ಹೊಡೆದು ಟಿಶರ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : ವಾಹನ ಮಾಲೀಕರ ಗಮನಕ್ಕೆ : ಈ ಸಾಧನ ನಿಮ್ಮ ವಾಹನದಲ್ಲಿ ಇರಲೇ ಬೇಕು, ಇಲ್ಲವಾದ್ರೆ ಬಾರೀ ದಂಡ

ಫೌಸಿಯಾ ಕೊಲೆಯಾದ ನಂತರದಲ್ಲಿ ಹೋಟೆಲ್‌ನಿಂದ ಎಸ್ಕೇಪ್‌ ಆಗಿದ್ದು, ಫೌಸಿಯಾ ಮೃತ ಪೋಟೋವನ್ನು ವಾಟ್ಸಾಪ್‌ ಸ್ಟೇಟಸ್‌ ಹಾಕಿಕೊಂಡಿದ್ದಾನೆ. ಫೌಸಿಯಾ ಸ್ನೇಹಿತರು ಆತನ ಸ್ನೇಟಸ್‌ ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೋಟೆಲ್‌ಗೆ ಭೇಟಿ ನೀಡಿದ ನಂತರದಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಫೌಸಿಯಾ ಕ್ರೋಮ್‌ಪೇಟೆಯ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್‌ ವಿದ್ಯಾರ್ಥಿನಿ ಆಗಿದ್ದಳು. ಫೌಸಿಯಾ ಹಾಗೂ ಆಶಿಕ್‌ ಇಬ್ಬರೂ ಕೂಡ ಕಳೆದ ಐದು ವರ್ಷಗಳಿಂದ ಸಂಬಂಧ ಹೊಂದಿದ್ದು, ರಹಸ್ಯವಾಗಿ ಮದುವೆ ಆಗಿದ್ದರು. ಇಬ್ಬರಿಗೂ ಮಗುವಿದ್ದು, ಆ ಮಗುವನ್ನು ಚಿಕ್ಕಮಗಳೂರಿನಲ್ಲಿ ದತ್ತು ಸ್ವೀಕಾರ ನೀಡಿದ್ದರು.

Chennai Lover kills Girlfriend Fousiya in Hotel Post pic of body as Whatsapp Status
Image Credit to Original Source

ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಫೌಸಿಯಾ ಕಳೆದ ಮೂರು ದಿನಗಳಿಂದಲೂ ಕಾಲೇಜಿಗೆ ಹೋಗಿರಲಿಲ್ಲ. ಆಶಿಕ್‌ ಕಳೆದ ಎರಡು ವರ್ಷಗಳ ಹಿಂದೆ ಆಶಿಕ್‌ ಬೇರೆ ಮಹಿಳೆಯರ ಜೊತೆಗೆ ಸಂಬಂಧ ಹೊಂದಿರುವ ವಿಚಾರ ತಿಳಿದು, ದಂಪತಿಯ ನಡುವೆ ಜಗಳವಾಗಿತ್ತು. ಇದೇ ವಿಚಾರದಲ್ಲಿ ಇಬ್ಬರೂ ಬೇರೆಯಾಗಿದ್ದು, ಕೇರಳ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ :  ಭಾರತದಲ್ಲಿ ಟಾಪ್ 10 ಕಲುಷಿತ ನಗರಗಳ ಪಟ್ಟಿ : ದೆಹಲಿಗೆ ಅಗ್ರಸ್ಥಾನ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ ?

ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಆಶಿಕ್‌ ಕೆಲವೇ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆ ಆಗಿದ್ದ. ನಂತರದಲ್ಲಿ ದಂಪತಿಗಳು ಕ್ಷಮೆಯಾಚಿಸಿದ ಬಳಿಕ ಮತ್ತೆ ಒಂದಾಗಿದ್ದರು. ಅಲ್ಲದೇ ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು. ಮೃತ ಫೌಸಿಯಾಳ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Chennai Lover kills Girlfriend Fousiya in Hotel Post pic of body as Whatsapp Status

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular