ಭಾರತದಲ್ಲಿ ಟಾಪ್ 10 ಕಲುಷಿತ ನಗರಗಳ ಪಟ್ಟಿ : ದೆಹಲಿಗೆ ಅಗ್ರಸ್ಥಾನ, ಕರ್ನಾಟಕಕ್ಕೆ ಎಷ್ಟನೇ ಸ್ಥಾನ ?

10 most polluted cities in india : ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಲುಷಿತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿ ಅಗ್ರಸ್ಥಾನದಲ್ಲಿದ್ರೆ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರ ನಂತರದ ಸ್ಥಾನದಲ್ಲಿವೆ.

10 most polluted cities in india : ಭಾರತದ ಮಹಾನಗರಗಳಲ್ಲಿ ಮಾಲಿನ್ಯ ಮಿತಿಮೀರುತ್ತಿದೆ. ಅದ್ರಲ್ಲೂ ಜನರು ವಿಷಕಾರಿ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಭಾರತದ ಕಲುಷಿತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಷ್ಟ್ರ ರಾಜಧಾನಿ ದೆಹಲಿ ಅಗ್ರಸ್ಥಾನದಲ್ಲಿದ್ರೆ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಬಿಹಾರ ನಂತರದ ಸ್ಥಾನದಲ್ಲಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ಡಿಸೆಂಬರ್ 1 ರಂದು ದೇಶದ 244 ನಗರಗಳ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಈ ಪೈಕಿ ಭಾರತದ 22 ನಗರಗಳು AQI 300 ಕ್ಕಿಂತ ಹೆಚ್ಚು ‘ಅತ್ಯಂತ ಕಳಪೆ’ ಗಾಳಿಯ ಗುಣಮಟ್ಟವನ್ನು ದಾಖಲಿಸಿದರೆ, 34 ಭಾರತೀಯ ನಗರಗಳು AQI 200 ಕ್ಕಿಂತ ಹೆಚ್ಚು ‘ಕಳಪೆ’ ಗಾಳಿಯ ಗುಣಮಟ್ಟವನ್ನು ದಾಖಲು ಮಾಡಿವೆ.

10 most polluted cities in india 2023 Delhi is the top, how many place for Karnataka
Image Credit to Original Source

ರಾಷ್ಟ್ರ ರಾಜಧಾನಿ ದೆಹಲಿ AQI 388 ಕೆಟ್ಟಗಾಳಿಯನ್ನು ದಾಖಲಿಸಿದೆ. ಉಳಿದಂತೆ ರಾಜಸ್ಥಾನ ನಗರಗಳಾದ ಬಿಕಾನೇರ್, ಭಿವಾಡಿ ಮತ್ತು ಹನುಮಾನ್‌ಗಢ್ ಕ್ರಮವಾಗಿ 377, 362 ಮತ್ತು 360 AQI ದಾಖಲಿಸಿವೆ. ಇನ್ನು ಉತ್ತರ ಪ್ರದೇಶದ ನೋಯ್ಡಾ AQI 358 ನೊಂದಿಗೆ ಭಾರತ ಐದನೇ ಅತ್ಯಂತ ಕಲುಷಿತ ನಗರ ಎನಿಸಿಕೊಂಡಿದೆ. ಅಲ್ಲದೇ ಗ್ರೇಟ್‌ ನೊಯ್ಡಾದಲ್ಲಿ AQI 356 ಮತ್ತು ಮೀರತ್‌ನಲ್ಲಿ AQI 355 ದಾಖಲಾಗಿದ್ದು, ನಂತರದ ಸ್ಥಾನದಲ್ಲಿವೆ.

ಇದನ್ನೂ ಓದಿ : ಮಹಿಳೆಯರಿಗೆ ಉಚಿತವಾಗಿ ಸಿಗಲಿದೆ 30,000 ರೂ. : ಗೃಹಲಕ್ಷ್ಮೀ ಬೆನ್ನಲ್ಲೇ ಧನಶ್ರೀ ಯೋಜನೆಗೂ ಅರ್ಜಿ ಸಲ್ಲಿಸಿ

ಬಿಹಾರ ಕೂಡ ಕಲುಷಿತ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಬಿಹಾರದ ರಾಜ್‌ಗಿರ್ AQI 345 ಮತ್ತು ಅರಾಹ್ ನಗರಗಳು AQI 342 ದಾಖಲಿಸಿವೆ. ಭಾರತದ ಟಾಪ್‌ 10ರ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿ ಹರಿಯಾಣದ ಮನೇಸರ್‌ ಇದ್ದು, ಇಲ್ಲಿ 339 ಎಕ್ಯೂಐ ರೆಕಾರ್ಡಿಂಗ್‌ ದಾಖಲಾಗಿದೆ. ಇಷ್ಟೇ ಅಲ್ಲಾ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ದೇಶದ ಅನೇಕ ನಗರಗಳು ಮಾಲಿನ್ಯದ ಪಟ್ಟಿಯಲ್ಲಿವೆ.

ಅಲಿಪುರ್, ಅಯಾ ನಗರ, ರೋಹಿಣಿ ಪ್ರದೇಶಗಳು AQI 410 ದಾಖಲಿಸಿದೆ. ಅಲ್ಲದೇ ದ್ವಾರಕಾ ಸೆಕ್ಟರ್-8, RK ಪುರಂ 401 AQI ಅನ್ನು ದಾಖಲಿಸಿದೆ. ಜಹಾಂಗೀರ್‌ಪುರಿಯಲ್ಲಿ ಎಕ್ಯೂಐ 407, ಪಂಜಾಬ್ ಬಾಗ್‌ನಲ್ಲಿ 415, ವಜೀರ್‌ಪುರದಲ್ಲಿ 427 AQI ದಾಖಲಾಗಿದ್ದು, ದಿನೇ ದಿನೇ ಕಲುಷಿತ ನಗರಗಳ ಪಟ್ಟಿಗೆ ಹೊಸ ನಗರಗಳು ಸೇರ್ಪಡೆ ಆಗುತ್ತಿವೆ.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

ಇನ್ನು 300 AQI ಕ್ಕಿಂತ ಹೆಚ್ಚು ದಾಖಲಿಸಿದ ಪ್ರದೇಶಗಳನ್ನು ನೋಡೋದಾದ್ರೆ, ಬೆಗುಸರೈ 308, 327 ಘಾಜಿಯಾಬಾದ್, 319 ಗುರುಗ್ರಾಮ್, 317 ಮೇಘಾಲಯದ ಬೈರ್ನಿಹಾಟ್, 319 ಫರಿದಾಬಾದ್, 319, ಯುಪಿಯ ಹಾಪುರ್, 329 ಮತ್ತು ಪಟ್ನಾಹರ್‌ನಲ್ಲಿ 303, ಪಟ್ನಾಹರ್‌ನಲ್ಲಿ 333 ದಾಖಲಿಸಿವೆ.

ಭಾರತದ ಟಾಪ್ 10 ಕಲುಷಿತ ನಗರಗಳು

  1. ದೆಹಲಿ: 388
  2. ಬಿಕಾನೇರ್: 377
  3. ಭಿವಾಡಿ: 362
  4. ಹನುಮಾನ್‌ಗಢ: 360
  5. ನೋಯ್ಡಾ: 358
  6. ಗ್ರೇಟರ್ ನೋಯ್ಡಾ: 356
  7. ಮೀರತ್ 355
  8. ರಾಜಗೀರ್: 345
  9. ಅರ್ರಾ: 342
  10. ಮನೇಸರ್: 339

ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಜೊತೆಗೆ ದೀಪಾವಳಿಯ ವೇಳೆಯಲ್ಲಿ ಭತ್ತದ ಕೊಯ್ಲು ಆರಂಭ ಗೊಳ್ಳುತ್ತದೆ. ಹೀಗಾಗಿ ಭತ್ತದ ಕೊಯ್ಲು ಗರಿಷ್ಠ ವಾಯು ಮಾಲಿನ್ಯವನ್ನು ದಾಖಲಿಸಿದ್ದು, ಗಾಳಿಯ ಗುಣಮಟ್ಟ ಕ್ಷೀಣಿಸಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅದ್ರಲ್ಲೂ ಈ ವರ್ಷ ಅತೀ ಹೆಚ್ಚು ವಾಯು ಮಾಲನ್ಯ ದಾಖಲಾಗಿದೆ.

10 most polluted cities in india 2023 Delhi is the top, how many place for Karnataka
Image Credit to Original Source

ಇದನ್ನೂ ಓದಿ : ಕಿಸಾನ್‌ ವಿಕಾಸ ಪತ್ರ ಪಡೆಯುವುದು ಹೇಗೆ ? ಇದರ ಪ್ರಯೋಜನಗಳೇನು ?

ಈ ಹಿಂದಿನ ಅಂಕಿ ಅಂಶಗಳನ್ನು ನೋಡೋದಾದ್ರೆ, ಈ ಬಾರಿಯ ನವೆಂಬರ್ ತಿಂಗಳಲ್ಲಿ ಸರಾಸರಿ AQI 373ರ ದಾಖಲಾಗಿದೆ. 2021 ರಲ್ಲಿ 380 ಮತ್ತು 2016 ರಲ್ಲಿ 374 ಆಗಿತ್ತು. ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ನವೆಂಬರ್‌ ತಿಂಗಳಲ್ಲಿ ಗಾಳಿಯ ಗುಣಮಟ್ಟವು 17 ದಿನಗಳವರೆಗೆ ಅತ್ಯಂತ ಕಳಪೆಯಾಗಿದ್ದರೆ, ನಾಲ್ಕು ದಿನಗಳವರೆಗೆ ಕಳಪೆ ಆಗಿತ್ತು. ಆದರೆ ಕರ್ನಾಟಕದ ಯಾವುದೇ ನಗರಗಳು ಕಲುಷಿತ ನಗರಗಳ ಟಾಪ್‌ 10 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ ಅನ್ನೋದು ಸಮಾಧಾನದ ಸಂಗತಿ.

10 most polluted cities in india 2023 : Delhi is the top, how many place for Karnataka ?

Comments are closed.