ವಾಹನ ಮಾಲೀಕರ ಗಮನಕ್ಕೆ : ಈ ಸಾಧನ ನಿಮ್ಮ ವಾಹನದಲ್ಲಿ ಇರಲೇ ಬೇಕು, ಇಲ್ಲವಾದ್ರೆ ಬಾರೀ ದಂಡ

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಸಾರ್ವಜನಿಕ ಸೇವಾ ವಾಹನಗಳಲ್ಲಿ ಟ್ರ್ಯಾಕಿಂಗ್ (Vehicle Location Tracking ) ಸಾಧನ ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು (Panic Button) ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.

ಕರ್ನಾಟಕ ಸರಕಾರ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದ್ರಲ್ಲೂ ವಿಶೇಷ ವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಸಾರ್ವಜನಿಕ ಸೇವಾ ವಾಹನಗಳಲ್ಲಿ ಟ್ರ್ಯಾಕಿಂಗ್ (Vehicle Location Tracking ) ಸಾಧನ ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು (Panic Button) ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.

ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ಸಾರ್ವಜನಿಕ ಸೇವಾ ವಾಹನಗಳಿಗೆ ಡಿ.1ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಕರ್ನಾಟಕ ಸರಕಾರ, ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡರೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಸಾರ್ವಜನಿಕ ಸೇವೆಯಲ್ಲಿ ದರೋಡೆ ಮುಂತಾದ ಕೆಲ ಘಟನೆಗಳು ವಾಹನಗಳು ಮರುಕಳಿಸುತ್ತಲೇ ಇರುತ್ತವೆ.

Karnataka Vehicle Owner Alert Must Keep This Device In Vehicles
Image Credit to Original Source

ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದಲೇ ಸರಕಾರ ಇದೀಗ ವಾಹನಗಳಲ್ಲಿ ಕಟ್ಟುನಿಟ್ಟಿನ ರೂಲ್ಸ್‌ ಜಾರಿಗೆ ತಂದಿದೆ. ಇದೀಗ ತುರ್ತು ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿದೆ. ಈ ನಿಯಮವು ಹಳದಿ ಬೋರ್ಡ್ ಟ್ಯಾಕ್ಸಿಗಳು, ಕ್ಯಾಬ್‌ಗಳು, ಖಾಸಗಿ ಬಸ್‌ಗಳು, ರಾಷ್ಟ್ರೀಯ ಪರವಾನಗಿ ಹೊಂದಿರುವ ಸರಕು ಸಾಗಣೆ ವಾಹನಗಳು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.

ಇದನ್ನೂ ಓದಿ : Tata Punch Big Offer : 26 ಕಿಮೀ ಮೈಲೇಜ್, ಕೇವಲ 6 ಲಕ್ಷಕ್ಕೆ ಸಿಗುತ್ತೆ ಟಾಟಾ ಪಂಚ್

ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್ ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಮಾಡುವುದರಿಂದ ಮಕ್ಕಳು, ಮಹಿಳೆಯರು ಸಮಸ್ಯೆಗೆ ಸಿಲುಕಿದಾಗ ಈ ಸಾಧನ ಸಹಾಯಕ್ಕೆ ಬರಲಿದೆ. ಅದ್ರಲ್ಲೂಸಾರ್ವಜನಿಕರ ಸೇವೆಯಲ್ಲಿರುವ ವಾಹನಗಳಲ್ಲಿ ಈ ಸಾಧನ ಅಳವಡಿಕೆ ಮಾಡಲಾಗುತ್ತಿದೆ.

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ವಾಹನಗಳಲ್ಲಿ ಈ ಸಾಧನ ಅಳವಡಿಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಲೊಕೇಶನ್‌ ಟ್ರ್ಯಾಕಿಂಗ್‌ ಹಾಗೂ ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವೆ 60:40 ಪಾಲುದಾರಿಕೆಯ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ : ಹುಂಡೈ ಎಕ್ಸ್‌ಟರ್‌ 1 ಲಕ್ಷ ಕಾರು ಬುಕ್ಕಿಂಗ್‌ : ಆಟೋ ಮೊಬೈಲ್‌ ಕ್ಷೇತ್ರದಲ್ಲಿ ಹೊಸ ದಾಖಲೆ

ಈ ಯೋಜನೆಯ ಅನುಷ್ಟಾನಕ್ಕಾಗಿ 2035.90 ಲಕ್ಷ ರೂಪಾಯಿ ವೆಚ್ಚ ತಗಲುತ್ತಿದೆ. ವಾಹನ ಮಾಲೀಕರು ಈ ಸಾಧನವನ್ನು ಸರಕಾರ ಅಥವಾ ಪ್ರಾದೇಶಿಕ ಸಾರಿಗೆ ಇಲಾಖೆ ಸೂಚಿಸಿದ ಕಂಪೆನಿಗಳಿಂದ ಖರೀದಿಸಿ ವಾಹನದಲ್ಲಿ ಅಳವಡಿಕೆ ಮಾಡಬೇಕಾಗಿದೆ. ಡಿಸೆಂಬರ್ 1ರಿಂದಲೇ ಈ ಯೋಜನೆ ಜಾರಿಗೆ ಬಂದಿದ್ದು, ಒಂದು ವರ್ಷದ ಒಳಗೆ (30/11/24 ) ವಾಹನಗಳು ಕಡ್ಡಾಯವಾಗಿ ಈ ಸಾಧನವನ್ನು ಅಳವಡಿಸಿಕೊಳ್ಳಬೇಕು.

Karnataka Vehicle Owner Alert Must Keep This Device In Vehicles
Image Credit to Original Source

ಒಂದೊಮ್ಮೆ ವಾಹನಗಳ ಮಾಲೀಕರು ಸಾಧನವನ್ನು ಅಳವಡಿಸಿಕೊಳ್ಳದೇ ಇದ್ದಲ್ಲಿ ಅಂತಹ ವಾಹನಗಳ ಎಫ್‌ಸಿಯನ್ನು ನವೀಕರಣ ಮಾಡುವುದಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ತಿಳಿಸಿದೆ. ಸದ್ಯ ಪ್ಯಾನಿಕ್‌ ಬಟನ್‌ ಜೊತೆಗೆ ಜಿಪಿಎಸ್‌ ಅಳವಡಿಕೆಗೆ 7,599ರೂ. ವೆಚ್ಚ ತಗಲುತ್ತಿದೆ. VLT ಮತ್ತು ಪ್ಯಾನಿಕ್ ಬಟನ್ ಅಳವಡಿಸಿದ ನಂತರದಲ್ಲಿ ವಾಹನಗಳ ಟ್ರ್ಯಾಕಿಂಗ್‌ ಸಾಧ್ಯವಾಗಲಿದೆ.

ಇದನ್ನೂ ಓದಿ : ಜಾಗತಿಕವಾಗಿ ಲಾಂಚ್​ ಆಗಿದೆ ಹೊಸ ಆವೃತ್ತಿಯ ಹಿಮಾಲಯನ್​ ಮೋಟಾರ್​ ಸೈಕಲ್​: ಇಲ್ಲಿದೆ ವಿಶೇಷತೆ

ವಾಹನಗಳ ನಿರ್ಬಂಧಿತ ಸ್ಥಳಗಳ ಸಂಚಾರ, ಮಾನಿಟರಿಂಗ್‌ ಮ್ಯಾಪ್‌ನಿಂದ ಟ್ರ್ಯಾಕಿಂಗ್‌, ಸಂಚಾರ ನಿಯಮ ಉಲ್ಲಂಘನೆ, ಅತೀ ವೇಗದ ಚಾಲನೆಯ ಕುರಿತ ಮಾಹಿತಿ ಲಭ್ಯವಾಗಲಿದೆ. ಅಷ್ಟೇ ಅಲ್ಲದೇ ವಾಹನ ಪ್ರಯಾಣಿಕರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ದರೋಡೆ ಸೇರಿದಂತೆ ಅಪರಾಧ ಚಟುವಟಿಕೆಗಳಿಗೆ ನಿಯಂತ್ರಣ ಬೀಳಲಿದೆ.

Karnataka Vehicle Owner Alert Must Keep Vehicle Location Tracking Device and Panic Button In Vehicles

Comments are closed.