Coffee Plantation Owner : ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರ ಮೇಲೆ ಅಸ್ಸಾಂ ಕಾರ್ಮಿಕರಿಂದ ಹಲ್ಲೆ

ಚಿಕ್ಕಮಗಳೂರು : ಇತ್ತೀಚಿಗೆ ಕಾಫಿ ತೋಟಗಳ ಕೆಲಸಕ್ಕೆ ಸ್ಥಳೀಯ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗದೇ ಇರುವುದರಿಂದ ಬೇರೆ ರಾಜ್ಯದ ಕಾರ್ಮಿಕರನ್ನು ಕರೆ ತರುವುದು ಸಾಮಾನ್ಯವಾಗಿದೆ. ಇದೀಗ ಬೇರೆ ರಾಜ್ಯದಿಂದ ಬಂದ ಕಾರ್ಮಿಕರು ಕಾಫಿ ತೋಟದ ಮಾಲೀಕರ (Coffee Plantation Owner) ಮೇಲೆ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.

ಮೂಡಿಗೆರೆ ತಾಲೂಕಿನ ಬಣಕಲ್‌ ಸಮೀಪದ ಹ್ಯಾರೀಸ್‌ ಎಸ್ಟೇಟ್‌ನಲ್ಲಿ ಕಾರ್ಮಿಕರು ತೋಟದ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ. ಮುಂಗಡ ಹಣವನ್ನು ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದಕ್ಕೆ ಅಸ್ಸಾಂ ಕಾರ್ಮಿಕರು ಮಚ್ಚು ಹಾಗೂ ದೊಣ್ಣೆಯಿಂದ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ತೋಟದ ಮಾಲೀಕ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಇತರ ರಾಜ್ಯದ ಕಾರ್ಮಿಕರನ್ನು ಕರೆತಂದು ಅವರಿಗೆ ಊಟ-ತಿಂಡಿ, ವಸತಿ ಸೌಕರ್ಯ ಹಾಗೂ ವೇತನವನ್ನು ನೀಡಿ ಕಾಫಿ ತೋಟದ ಕೆಲಸ ಮಾಡಿಸಿಕೊಳ್ಳುತ್ತಿರುವ ಮಾಲೀಕರಿಗೆ ಅವರೇ ಸಮಸ್ಯೆಯನ್ನು ತಂದೊಡ್ಡಿದ್ದಾರೆ. ಇದೀಗ ಚಿಕ್ಕಮಗಳೂರಿನ ಕಾಫಿ ತೋಟದ ಮಾಲೀಕರ ಮೇಲೆ ಅಸ್ಸಾಂನಿಂದ ಬಂದ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಹಾಗಾಗಿ ಕಾಫಿತೋಟದ ಮಾಲೀಕರು ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ.

ಇದನ್ನೂ ಓದಿ : Ballari Road Accident : ಬಸ್‌ ಹರಿದು ಮೂವರು ಹಾಸ್ಟೇಲ್‌ ವಿದ್ಯಾರ್ಥಿಗಳ ಸಾವು

ಇದನ್ನೂ ಓದಿ : Haryana Accident : ದಟ್ಟ ಮಂಜಿನಿಂದಾಗಿ ಸರಣಿ ಅಪಘಾತ, ಹಲವು ವಾಹನಗಳು ಜಖಂ : 4 ಮಂದಿಗೆ ತೀವ್ರ ಗಾಯ

ಇದನ್ನೂ ಓದಿ : Madhyapradesh fire accident: ಗುಡಿಸಲಿಗೆ ಬೆಂಕಿ: ವೃದ್ದ ದಂಪತಿ ಸಜೀವ ದಹನ

ಹೆಚ್ಚಾಗಿ ಕಾಫಿತೋಟದ ಕೆಲಸಕ್ಕೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದಿಂದಲೂ ಕೂಲಿ ಕಾರ್ಮಿಕರು ಬರುತ್ತಾರೆ. ಹೀಗೆ ಬಂದವರು ಮುಂಗಡವನ್ನು ಪಡೆದು, ಕೆಲಸ ಮುಗಿಸಿಕೊಂಡು ಹೋಗುತ್ತಾರೆ. ಮತ್ತೆ ಅಗತ್ಯವಿದ್ದಾಗ ಬಂದು ಕೆಲಸ ಮಾಡಿ ಹೋಗುವಂತಹ ನಂಬಿಕಸ್ಥ ಕಾರ್ಮಿಕರು ಕೂಡ ಇದ್ದಾರೆ. ಹಾಗೇ ಮುಂಗಡ ಹಣವನ್ನು ಪಡೆದು ಕೆಲಸ ಮಾಡದೇ ಮೋಸ ಮಾಡುವ ಕಾರ್ಮಿಕರು ಕೂಡ ಇದ್ದಾರೆ. ಇಂತಹ ಸಂದರ್ಭದಲ್ಲಿ ತೋಟದ ಮಾಲೀಕರು ಎಚ್ಚರಿಕೆಯಿಂದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Chikmagalur: Assaulted by Assam workers on coffee plantation owner

Comments are closed.