Ragi Laddu Recipe:ರಾಗಿ ಮುದ್ದೆ, ದೋಸೆ ಇಷ್ಟಪಡದವರು ತಿನ್ನಿ ರಾಗಿ ಲಡ್ಡು

(Ragi Laddu Recipe)ಸಿರಿಧಾನ್ಯಗಳಲ್ಲಿ ಒಂದಾದ ರಾಗಿಯಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಪೌಷ್ಟಿಕಾಂಶದ ಆಗರವಾದ ರಾಗಿಯಿಂದ ದೊಸೆ, ಮುದ್ದೆಯನ್ನು ಮಾಡಿ ತಿನ್ನುತ್ತೇವೆ. ಮಕ್ಕಳಿಗೆ ಬರಿ ದೊಸೆ ಮುದ್ದೆಯನ್ನು ಮಾಡಿ ಕೊಡುವುದರಿಂದ ಅದನ್ನು ತಿನ್ನಲು ಇಷ್ಟಪಡುವುದಿಲ್ಲ ಹಾಗಾಗಿ ರಾಗಿ ಲಡ್ಡು ಮಾಡಿ ಡಬ್ಬಿಯಲ್ಲಿ ಇಟ್ಟು ಪ್ರತಿದಿನ ಒಂದೊಂದು ಕೊಡುವುದರಿಂದ ಆರೋಗ್ಯಕ್ಕೂ ಉತ್ತಮ . ರಾಗಿಲಡ್ಡು ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Ragi Laddu Recipe)ಬೇಕಾಗುವ ಸಾಮಾಗ್ರಿಗಳು:

  • ಕಡಲೆ ಬೀಜ
  • ಕಪ್ಪು ಎಳ್ಳು ಅಥವಾ ಬಿಳಿ ಎಳ್ಳು
  • ರಾಗಿ ಹಿಟ್ಟು
  • ಬೆಲ್ಲ
  • ಪಿಸ್ತಾ
  • ಏಲಕ್ಕಿ

ಮಾಡುವ ವಿಧಾನ

ಬಾಣಲೆಗೆ ಅರ್ಧ ಕಡಲೆ ಬೀಜ ಹಾಕಿ ಹುರಿಯಬೇಕು ನಂತರ ಅದೇ ಬಾಣಲೆಯಲ್ಲಿ ಒಂದು ಚಮಚ ಕಪ್ಪು ಎಳ್ಳು ಅಥವಾ ಬಿಳಿ ಎಳ್ಳು ಹುರಿದುಕೊಂಡು ಬೌಲ್‌ ಗೆ ಹಾಕಿ ಇಟ್ಟುಕೊಳ್ಳಬೇಕು. ಬಾಣಲೆಗೆ ಅರ್ಧ ಚಮಚ ತುಪ್ಪ ಹಾಕಿ ಅದಕ್ಕೆ ಅರ್ಧ ಕಪ್‌ ರಾಗಿ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಸೌಟು ಆಡಿಸಬೇಕು. ಈ ಮೊದಲು ಹುರಿದುಕೊಂಡ ಕಡಲೆ ಬೀಜದ ಸಿಪ್ಪೆ ಬಿಡಿಸಿ ಕುಟ್ಟಣಿಗೆಯಲ್ಲಿ ಪುಡಿಯಾಗದಂತೆ ಕುಟ್ಟಿಕೊಳ್ಳಬೇಕು. ನಂತರ ಹುರಿದುಕೊಂಡ ಎಳ್ಳನ್ನು ಬೌಲ್‌ ಗೆ ಹಾಕಿಕೊಂಡು, ಬಾಣಲೆಯಲ್ಲಿ ತುಪ್ಪದಲ್ಲಿ ಹುರಿದುಕೊಂಡ ರಾಗಿಯನ್ನು ಮಿಶ್ರಣ ಮಾಡಿಕೊಳ್ಳಬೇಕು.

ಬಾಣಲೆಗೆ ಒಂದು ಕಪ್‌ ಗಟ್ಟಿ ಬೆಲ್ಲ, ಎರಡು ಚಮಚ ನೀರು ಹಾಕಿ ಅಂಟು ಬರುವ ತನಕ ಸೌಟು ಆಡಿಸಬೇಕು. ಈಗಾಗಲೇ ಮಿಶ್ರಣ ಮಾಡಿಕೊಂಡ ಎಳ್ಳು,ರಾಗಿಹಿಟ್ಟು ಮಿಶ್ರಣ, ಕಡ್ಲೆ ಬೀಜ, ಪಿಸ್ತಾ, ಏಲಕ್ಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬೆಲ್ಲದ ಪಾಕ ವನ್ನು ಬೆರೆಸಿಕೊಂಡು ಮಿಶ್ರಣ ಮಾಡಿ ಉಂಡೆಯನ್ನು ಕಟ್ಟಿದರೆ ರುಚಿಯಾದ ಮತ್ತು ಆರೋಗ್ಯಕರ ರಾಗಿ ಲಡ್ಡು ತಿನ್ನಲು ರೆಡಿ.

ಇದನ್ನೂ ಓದಿ:Loss Of Appetite : ಕಡಿಮೆ ಹಸಿವಾಗಲು ಕಾರಣ ಗೊತ್ತಾ; ಅದಕ್ಕೆ ಪರಿಹಾರ ಇಲ್ಲಿದೆ ಓದಿ…

ಇದನ್ನೂ ಓದಿ:Ajawan And Camphor Health Tips:ಅಜವಾನ, ಪಚ್ಚ ಕರ್ಪೂರ ಬಳಸಿದ್ರೆ ಶೀತ ,ಕೆಮ್ಮು ,ತಲೆನೋವು ಕಡಿಮೆಯಾಗುತ್ತೆ

ರಾಗಿ
ಕ್ಯಾಲ್ಸಿಯಂ ಅಂಶ ಹೇರಳವಾಗಿ ಇರುವುದರಿಂದ ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹ ಇರುವವರು ರಾಗಿಯನ್ನು ಸೇವನೆ ಮಾಡಿದರೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅಷ್ಟೇ ಅಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿನ ವಿಟಮಿನ್‌ ಡಿ ಕೊರತೆಯನ್ನು ಕಡಿಮೆ ಮಾಡುತ್ತದೆ. ರಾಗಿಯಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಯಿಂದ ಬಳಲುತ್ತಿದ್ದರೆ ಇದನ್ನು ನಿವಾರಣೆ ಮಾಡುತ್ತದೆ. ಬಡವರ ಆಹಾರ ಎಂದು ಕರೆಸಿಕೊಳ್ಳುವ ರಾಗಿಯಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಪ್ರತಿದಿನದ ಆಹಾರ ಪದ್ದತಿಯಲ್ಲಿ ರಾಗಿಯ ಆಹಾರ ಸೇವನೆ ಮಾಡಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

Ragi Laddu Recipe Those who don’t like ragi mudde, dosa eat ragi laddu

Comments are closed.