Child raped-Accused arrested: 20 ತಿಂಗಳ ಮಗುವಿನ ಮೇಲೆ ಅತ್ಯಾಚಾರ : ಆರೋಪಿ ಅರೆಸ್ಟ್‌

ಮುಂಬೈ: (Child raped-Accused arrested) 20 ತಿಂಗಳ ಹೆಣ್ಣು ಮಗುವಿನ ಮೇಲೆ ನೆರೆಹೊರೆಯ 35 ವರ್ಷದ ನೆರೆಯ ವ್ಯಕ್ತಿಯೋರ್ವ ಅತ್ಯಾಚಾರವೆಸಗಿರುವ ಘಟನೆ ಮುಂಬೈ ನಲ್ಲಿ ನಡೆದಿದೆ. ಮಗುವಿನ ಪೋಷಕರು ಆರೋಪಿಯ ವಿರುದ್ಧ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ ನಂತರದಲ್ಲಿ ಘಟನೆ ಬೆಳಕಿಗೆ ಬಂದಿದೆ.

ಒಂದೆರಡು ದಿನಗಳ ಹಿಂದೆ ಮನೆಯಲ್ಲಿ ಪೋಷಕರು ಇಲ್ಲದೇ ಇದ್ದಾಗ 35 ವರ್ಷದ ನೆರೆಯ ವ್ಯಕ್ತಿಯೋರ್ವ ಬಂದು ಅಂಬೆಗಾಲಿಡುತ್ತಿರುವ 20 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಮಗು ನೋವಿನಿಂದ ಅಳುತ್ತಿರುವುದನ್ನು ಗಮನಿಸಿ ಪೋಷಕರು ನೋಡಿದಾಗ ಅತ್ಯಾಚಾರವಾಗಿರುವುದು ತಿಳಿದುಬಂದಿದೆ.

ಇದೀಗ ಮಗುವಿನ ಪೋಷಕರು ಮುಂಬೈ ಪೊಲೀಸ್‌ ಠಾಣೆಯಲ್ಲಿ ಆರೋಪಿ ವ್ಯಕ್ತಿಯ ವಿರುದ್ದ ದೂರು ದಾಖಲಿಸಿದ್ದು, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು.

ಈಗಿನ ಪ್ರಪಂಚದಲ್ಲಿ ಹುಟ್ಟಿದ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಅತ್ಯಚಾರದ ಪ್ರಕರಣಗಳು ಹೆಚ್ಚುತ್ತಿವೆ. ಅತ್ಯಾಚಾರ ತಡೆಯಲು ಎಷ್ಟೇ ಕ್ರಮ ಕೈಗೊಂಡರೂ ಕೂಡ ಅತ್ಯಾಚಾರದ ಪ್ರಕರಣಗಳು ನಿಲ್ಲುತ್ತಿಲ್ಲ.

ಅನೈತಿಕ ಸಂಬಂಧದ ಶಂಕೆ: ಕತ್ತು ಸೀಳಿ ಪತ್ನಿಯನ್ನೇ ಕೊಲೆಗೈದ ಪತಿ

ಹುಬ್ಬಳ್ಳಿ: ಹೆಂಡತಿಗೆ ಅನೈತಿಕ ಸಂಬಂಧವಿರುವುದಾಗಿ ಶಂಕಿಸಿ ಗಂಡನೇ ಕತ್ತು ಸೀಳಿ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೋಳಿವಾಡ ಗ್ರಾಮದಲ್ಲಿ ನಡೆದಿದೆ. ಶಾರದಾ ದೇವರಮನಿ ಕೊಲೆಯಾದ ಮಹಿಳೆ.

ಇದನ್ನೂ ಓದಿ : Truck- Bus accident: ಟ್ರಕ್ – ಬಸ್ ಭೀಕರ ಅಪಘಾತ : 55 ಮಂದಿಗೆ ಗಾಯ

ಇದನ್ನೂ ಓದಿ : Cement container accident: ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್‌ ಕಂಟೈನರ್‌ ಪಲ್ಟಿ: ಕಾರು ಜಖಂ

ಇದನ್ನೂ ಓದಿ : Crane collapsed-4 death: ತಮಿಳುನಾಡಿನಲ್ಲಿ ಕ್ರೇನ್‌ ಕುಸಿದು ನಾಲ್ವರು ದುರ್ಮರಣ : 9 ಮಂದಿಗೆ ಗಾಯ

ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಲಹದ ಕಾರಣ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪತಿ ಉಡಚಪ್ಪ ದೇವರಮನಿಯನ್ನು ಪೊಲೀಸರು ಬಂಧಿಸಿದ್ದಾರೆ.

Child raped-Accused arrested: Rape of a 20-month-old child: Accused arrested

Comments are closed.