Corona Mask Test : ಇನ್ಮುಂದೆ ಮಾಸ್ಕ್ ಮೂಲಕವೂ ಕೋವಿಡ್ ಪತ್ತೆಹಚ್ಚಬಹುದು

ಕೋವಿಡ್ ಪತ್ತೆಗಾಗಿ ಆರ್‌ಟಿಪಿಸಿಆರ್, ಆ್ಯಂಟಿಜೆನ್ ಟೆಸ್ಟ್ ಮಾಡುವುದು ಗೊತ್ತಿದೆ. ಅದಕ್ಕಾಗಿ ಎಲ್ಲರೂ ಒಂದಲ್ಲ ಒಂದು ಬಾರಿ ಕ್ಯೂ ನಿಂತು ನೋವನುಭವಿಸಿದ್ದು ಇದೆ.
ಪ್ರತಿ ಬಾರಿ ಟೆಸ್ಟ್‌ಗೆ ಹೋದಾಗಲೂ ಪರ್ಯಾಯ ಮಾರ್ಗ ಇದ್ದರೆ ಒಳ್ಳೆಯದಿತ್ತು ಎಂದು ಅಂದುಕೊಂಡಿದ್ದಿದೆ. ಅಂತಹದ್ದೊಂದು ವಿಧಾನ ಬಂದಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಹೌದು! ಇದೀಗ ಜಪಾನ್ ವಿಜ್ಞಾನಿಗಳು ಕೋವಿಡ್ -19 ವೈರಸ್ ಅನ್ನು ಪತ್ತೆಹಚ್ಚುವ ಅದ್ಭುತ ಫೇಸ್ ಮಾಸ್ಕ್ (Corona Mask Test
Covid) ಅನ್ನು ಅಭಿವೃದ್ಧಿಪಡಿಸಿದ್ದಾರೆ. ಮಾಸ್ಕ್ ಮೇಲೆ ಫ್ಲೋರೊಸೆಂಟ್ ಬೆಳಕನ್ನು ಬೆಳಗಿಸುವ ಮೂಲಕ ಬಿಡುವ ಉಸಿರಾಟದಲ್ಲಿ ಕೊರೊನಾವೈರಸ್ ಪತ್ತೆಯಾಗುತ್ತದೆ ಎಂದು ಹೇಳಲಾಗಿದೆ.

ಕ್ಯೋಟೋ ಪ್ರಿಫೆಕ್ಚರಲ್ ಯೂನಿವರ್ಸಿಟಿಯ ಅಧ್ಯಕ್ಷ ಯಸುಹಿರೊ ತ್ಸುಕಾಮೊಟೊ ನೇತೃತ್ವದ ಸಂಶೋಧನಾ ತಂಡ (President Yasuhiro Tsukamoto of Kyoto Prefectural University) ಕೋವಿಡ್ ಪತ್ತೆ ಮಾಡುವ ಮಾಸ್ಕ್ ಅಭಿವೃದ್ಧಿಪಡಿಸಿದೆ. ಈ ಪ್ರತಿಕಾಯಗಳನ್ನು ಆಸ್ಟ್ರಿಚ್‌ಗಳ ಮೊಟ್ಟೆಗಳಿಂದ ಸಂಗ್ರಹಿಸಲಾಗುತ್ತದೆ, ಅವುಗಳು ಕೊರೊನಾವೈರಸ್‌ನ ನಿಷ್ಕ್ರಿಯ, ಹಾನಿಕಾರಕವಲ್ಲದ ರೂಪದೊಂದಿಗೆ ಚುಚ್ಚಲಾಗುತ್ತದೆ.

ಈ ಮಾಸ್ಕ್ ಹೇಗೆ ಕೆಲಸ ಮಾಡುತ್ತದೆ?
ನೀವು ಮಾಸ್ಕ್ ಅನ್ನು ಸಾಮಾನ್ಯ ರೀತಿಯಲ್ಲಿಯೇ ಧರಿಸಿದರಾಯಿತು. ಕೋವಿಡ್-19 ವೈರಸ್‌ನ ಸಕ್ರಿಯತೆಯನ್ನು ಪತ್ತೆಹಚ್ಚಲು ಮಾಸ್ಕ್ ಮೇಲೆ ಕಂಡುಬರುವ ಕಣಗಳನ್ನು ಬಳಸಲಾಗುತ್ತದೆ. ಧರಿಸಿರುವ ಮಾಸ್ಕ್‌ನಿಂದ ಫಿಲ್ಟರ್‌ನಲ್ಲಿ ಆ್ಯಂಟಿಬೋಡಿಗಳನ್ನು ಸಿಂಪಡಿಸುವ ಮೂಲಕ ಕೋವಿಡ್ -19 ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು. ಅದರ ನಂತರ, ಯುವಿ ಕಿರಣಗಳ ಅಡಿಯಲ್ಲಿ ಮಾಸ್ಕ್ ಇಟ್ಟುಕೊಳ್ಳುವಾಗ, ಮಾಸ್ಕ್ ಫ್ಲೋರೊಸೆಂಟ್ ದೀಪಗಳೊಂದಿಗೆ ಹೊಳೆಯುತ್ತದೆ. ಸ್ಮಾರ್ಟ್‌ಫೋನ್‌ನ ಎಲ್‌ಇಡಿ ಲೈಟ್ ಅನ್ನು ಕೂಡ ಬೆಳಕಿನ ಮೂಲವಾಗಿ ಬಳಸಿಕೊಳ್ಳಬಹುದು ಎಂದು ಸಂಶೋಧಕರು ಹೇಳಿಕೊಳ್ಳುತ್ತಾರೆ, ಇದರಿಂದಾಗಿ ಹೆಚ್ಚಿನ ಜನರು ತಂತ್ರಜ್ಞಾನದಿಂದ ಪ್ರಯೋಜನ ಪಡೆಯಲು ಸಾಧ್ಯವಿದೆ.

ಅಸಲಿ ಕಥೆ ಏನು
ತ್ಸುಕಾಮೊಟೊ ಮತ್ತು ಅವರ ತಂಡವು 10 ದಿನಗಳ ಅವಧಿಯಲ್ಲಿ 32 ಕೋವಿಡ್ -19 ರೋಗಿಗಳನ್ನು ಪರೀಕ್ಷಿಸಿದೆ ಮತ್ತು ಅವರು ಧರಿಸಿದ್ದ ಮಾಸ್ಕ್ ಯುವಿ ಬೆಳಕಿನಲ್ಲಿ ಹೊಳೆಯುತ್ತಿರುವುದನ್ನು ಕಂಡುಹಿಡಿದಿದೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ. ಮಾಸ್ಕ್ ಬಾಯಿಯ ಫಿಲ್ಟರ್‌ನಲ್ಲಿ ಇರಿಸಲಾಗಿರುವ ಕೊರೋನಾಗೆ ಆಸ್ಟ್ರಿಚ್ ಪ್ರತಿಕಾಯವು ಕೆಮ್ಮುವಿಕೆ, ಸೀನುವಿಕೆ ಮತ್ತು ನೀರಿನಲ್ಲಿ ಕೊರೊನಾವೈರಸ್ ಅನ್ನು ಸೆರೆಹಿಡಿಯುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ. ಬೆಳಕಿನೊಂದಿಗೆ ಸಂವಹನ ನಡೆಸುವ ಮೂಲಕ ಮತ್ತು ಫ್ಲೋರೊಸೆಂಟ್ ಡೈ-ಲೇಬಲ್ ಆಸ್ಟ್ರಿಚ್ ಪ್ರತಿಕಾಯದೊಂದಿಗೆ ಪ್ರತಿಕ್ರಿಯಿಸುವ ಮೂಲಕ ವೈರಸ್ ಇದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಯಲಾಗುತ್ತದೆ. ಈ ತಂತ್ರಜ್ಞಾನಕ್ಕೆ ಪೇಟೆಂಟ್ ಸಲ್ಲಿಸಲಾಗಿದೆ, ಆದರೂ ವಾಣಿಜ್ಯ ತಪಾಸಣೆ ಕಿಟ್‌ಗಳಿಗೆ ಜನರು ಸ್ವಲ್ಪ ಹೆಚ್ಚು ಕಾಯಬೇಕಾಗುತ್ತದೆ. ಈ ವರ್ಷವೇ ಜಪಾನ್ ಮತ್ತು ಸಾಗರೋತ್ತರದಲ್ಲಿ ಇದು ಜನರಿಗೆ ಲಭಿಸಲಿದೆ ಎಂದುನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(Face Mask will tell you covid 19 virus threat Corona Mask Test)

Comments are closed.