Coastal Bomb blast: ಕರಾವಳಿ ಸ್ಫೋಟದ ಮಾಸ್ಟರ್‌ ಮೈಂಡ್‌ ಅರಾಫತ್‌ : ಸಿಗ್ನಲ್‌ ಆಪ್‌ ಬಳಕೆ !

ಮಂಗಳೂರು: (Coastal Bomb blast) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಕ್ಕೊಂದು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಉಗ್ರ ಶಾರೀಖ್‌ ನ ಉಗ್ರ ರೂಪದ ಅಸಲಿಯತ್ತು ಒಂದೊಂದಾಗಿ ಬಯಲಾಗುತ್ತಿದೆ. ಅಧಿಕಾರಿಗಳ ವಿಚಾರಣೆಯ ವೇಳೆಯಲ್ಲಿ ಉಗ್ರ ಶಾರೀಖ್‌ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲು ಪ್ರತ್ಯೇಕ ಆಪ್‌ ಬಳಸುತ್ತಿದ್ದ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಅಲ್ಲದೇ ಕರಾವಳಿ ಸ್ಫೋಟದ ಹಿಂದೆ ಉಗ್ರ ಶಾರೀಖ್‌ ಜೊತಗಿರುವ ಮಾಸ್ಟರ್‌ ಮೈಂಡ್‌ ಉಗ್ರರ ಮಾಹಿತಿಗಳು ಕೂಡ ಬಹಿರಂಗವಾಗಿದೆ.

ಮಂಗಳೂರು ಬಾಂಬ್‌ ಸ್ಫೋಟ (Coastal Bomb blast)ದ ಕುರಿತು ತನಿಖೆ ತೀವ್ರಗೊಳ್ಳುತ್ತಿದೆ. ಇದರ ಹಿಂದಿರುವ ಉಗ್ರರ ಜನ್ಮ ಜಾಲಾಡಲು ಎನ್‌ಐಎ ಅಧಿಕಾರಿಗಳು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಇದರ ತನಿಖೆ ತೀವ್ರವಾಗುತ್ತಿದ್ದಂತೆಯೇ ಶಾರೀಖ್‌ ಹಿಂದಿರುವ ಉಗ್ರರ ಮುಖಗಳು ಕಳಚಿ ಬೀಳುತ್ತಿದೆ. ಉಗ್ರ ಶಾರೀಖ್‌ ನ ಹಿಂದೆ ಸಾಕಷ್ಟು ಉಗ್ರರ ಕೈವಾಡವಿರುವುದು ಈಗಾಗಲೇ ತಿಳಿದುಬಂದಿದೆ. ಇದೀಗ ಕರಾವಳಿ ಸ್ಫೋಟದ ಹಿಂದಿರುವ ಇನ್ನೋರ್ವ ಮಾಸ್ಟರ್‌ ಮೈಂಡ್‌ ಉಗ್ರನ ಕುರಿತು ಸ್ಫೋಟಕ ಮಾಹಿತಿ ತಿಳಿದು ಬಂದಿದೆ. ಶಾರೀಖ್‌ ಹಿಂದೆ ತೀರ್ಥಹಳ್ಳಿ ಮೂಲದ ಅರಾಫತ್‌ ಅಲಿ ಎನ್ನುವ ಉಗ್ರನ ಕೈ ಇರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಈತ ಕರಾವಳಿ ಸ್ಫೋಟದ ಮಾಸ್ಟರ್‌ ಮೈಂಡ್‌ ಆಗಿದ್ದ ಎನ್ನುವ ಭಯಾನಕ ಸತ್ಯ ಕೂಡ ಬಯಲಾಗಿದೆ. ದುಬೈನಲ್ಲೇ ಕುಳಿತು ಉಗ್ರ ಶಾರೀಖ್‌ ಗೆ ಸ್ಫೋಟಕ್ಕೆ ಸಹಾಯ ಮಾಡುತ್ತಿದ್ದ. ಅಲ್ಲದೇ ಉಗ್ರಗಾಮಿಗಳಿಗೆ ಆರ್ಥಿಕ ನೆರವನ್ನು ಸಹ ನೀಡುತ್ತಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.

ಇದೀಗ ಮಂಗಳೂರು ಬಾಂಬ್‌ ಸ್ಫೋಟದ ಹಿಂದಿರುವ ಮಾಸ್ಟರ್‌ ಮೈಂಡ್ ಉಗ್ರನಾಗಿರುವ ಅರಾಫತ್‌ ನ ಬೇಟೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಮಂಗಳೂರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಭಯೋತ್ಪಾದಕ ಶಾರೀಖ್‌ ನ ಬಹು ವಿಧದ ವೇಷಗಳು ಬಹಿರಂಗವಾಗುತ್ತಿದೆ. ಈತ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸುವ ಹಿನ್ನಲೆಯಲ್ಲಿ ಪ್ರತ್ಯೇಕ ಆಪ್‌ ಕೂಡ ಬಳಸುತ್ತಿದ್ದ ಎನ್ನುವ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಹಿಜಾಬ್‌, ಹಲಾಲ್‌ ಬೆನ್ನಲ್ಲೇ ಧರ್ಮದಂಗಲ್: ಜಾತ್ರೆಗಳಲ್ಲಿ ಹಿಂದೂಗಳಿಷ್ಟೇ ವ್ಯಾಪಾರಕ್ಕೆ ಅವಕಾಶ : ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಇದನ್ನೂ ಓದಿ : Mangalore Blast case: ಮಂಗಳೂರು ಬ್ಲಾಸ್ಟ್‌ : ನಕಲಿ ಪಾಸ್‌ ಪೋರ್ಟ್‌ ಬಳಸಿ ವಿದೇಶಕ್ಕೆ ಹಾರುವ ಪ್ಲ್ಯಾನ್‌ ಮಾಡಿದ್ದ ಶಾರೀಖ್

ಸಿಗ್ನಲ್‌ ಆಪ್‌ ಬಳಸುತ್ತಿದ್ದ ಶಾರೀಖ್‌..!

ಉಗ್ರರೊಂದಿಗಿನ ರಹಸ್ಯ ಸಂಪರ್ಕ ಸಾಧಿಸಲು ಸೆಕ್ಯೂರ್ ಸಿಗ್ನಲ್‌ ಪೋಟೋಕಾಲ್‌ ಇರುವಂತಹ ಆಪ್‌ ಬಳಸುತ್ತಿದ್ದು, ಸೆಕ್ಯೂರ್‌ ಸಿಗ್ನಲ್‌ ಪೋಟೋಕಾಲ್‌ ಆಪ್‌ ಬಳಸಿ ಈತ ಮತೀನ್‌ ಹಾಗೂ ಅರಾಫತ್‌ ಅಲಿ ಜೊತೆ ಸಂಪರ್ಕ ನಡೆಸಲು ಹುನ್ನಾರವನ್ನು ಹಾಕಿದ್ದ. ಇದರಿಂದ ಯಾವುದೇ ರೀತಿಯಲ್ಲಿ ಸಿಗ್ನಲ್‌ ಹ್ಯಾಕ್‌ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಈ ಸಿಗ್ನಲ್‌ ಆಪ್‌ ಯಾವುದೇ ಮಾಹಿತಿಯನ್ನು ದಾಖಲಿಸಿಕೊಳ್ಳುವುದಿಲ್ಲ. ಗ್ರೂಪ್‌ ಮೆಸೆಜ್‌, ವಾಯ್ಸ್‌ ಮೆಸೆಜ್‌ ಹಾಗೂ ಫೋಟೋಗಳನ್ನು ಕೂಡ ಇದರಲ್ಲಿ ಕಳುಹಿಸಬಹುದು. ಸಿಗ್ನಲ್‌ ಆಪ್‌ ಮೂಲಕವೇ ಉಗ್ರ ಶಾರೀಖ್‌ ಭಯೋತ್ಪಾದಕರ ಸಂಪರ್ಕ ನಡೆಸುತ್ತಿದ್ದ ಎನ್ನುವ ಮಾಹಿತಿ ಬಹಿರಂಗವಾಗಿದೆ.

(Coastal Bomb blast) Explosive information is being revealed every minute regarding the Mangalore bomb blast case. The originality of the fierce form of Ugra Sharikh is being revealed one by one. Explosive information was revealed during the interrogation of the authorities that the extremist Sharikh was using a separate app to communicate with the terrorists. Also, the information of the terrorist mastermind who is behind the coastal blast along with the extremist Sharikh has also been revealed.

Comments are closed.