India’s Longest Train Journey : ಭಾರತದ ಅತಿ ಉದ್ದದ ರೈಲು ಮಾರ್ಗದಲ್ಲಿ ನೀವು ಪ್ರಯಾಣಿಸಿದ್ದೀರಾ?

ರೈಲು ಪ್ರಯಾಣ ಇದೊಂದು ವಿಶಿಷ್ಟ ಅನುಭವ. ಹಳಿಗಳ ಮೇಲೆ ಸಾಗುವ ರೈಲಿ (Train) ನಿಂದ ಊರು, ಮರ, ನದಿಗಳು, ವಿಶಾಲವಾದ ಹೊಲ ಗದ್ದೆಗಳನ್ನು ಕಿಟಕಿಯಿಂದ ನೋಡುವುದೇ ಒಂದು ಮಜಾ. ರೈಲು ಪ್ರಯಾಣ ಎಲ್ಲರಿಗೂ ಇಷ್ಟ. ಏಕೆಂದರೆ ಇದು ಆರಾಮದಾಯಕ ಪ್ರಯಾಣ. ನಮ್ಮ ದೇಶ (India) ದಲ್ಲಿ ದಿನನಿತ್ಯ ಸಾವಿರಾರು ರೈಲುಗಳು ಓಡುತ್ತವೆ. 1800 ರ ದಶಕದಲ್ಲಿ ಪ್ರಾರಂಭವಾದ ರೈಲು, ನಂತರ ಕ್ರಮೇಣ ಬೆಳೆದು ಈಗ ವಿಶ್ವದ ನಾಲ್ಕನೇ (World’s Fourth Largest) ಅತಿದೊಡ್ಡ ರೈಲ್ವೇ ಜಾಲವಾಗಿದೆ. ಆರಂಭದಲ್ಲಿ ಸಣ್ಣ ಚಿಮಣಿಯ ಮೂಲಕ ಹೊಗೆ ಉಗುಳುವ ರೈಲು ಬಂಡಿಗಳು ಕ್ರಮೇಣ ಪೆಟ್ರೋಲ್‌, ಡೀಸಲ್‌, ಇಲೆಕ್ಟ್ರಿಕ್‌ ರೈಲುಗಳಾಗಿ ಬದಲಾಗುತ್ತಾ ಸಾಮಾನ್ಯ ಜನರೂ ಆಯ್ದುಕೊಳ್ಳುವ ಆರಾಮದಾಯಕ ಪ್ರಯಾಣವೆಂದು ಹೆಸರುವಾಸಿಯಾಯಿತು. ಈ ರೈಲು ಮಾರ್ಗಗಳು ಬರೀ ನಮ್ಮ ಗಮ್ಯವನ್ನಷ್ಟೇ ತಲುಪಲು ಸಹಾಯ ಮಾಡುವುದಿಲ್ಲ. ಬದಲಿಗೆ ಅದು ಕ್ರಮಿಸುವ ಮಾರ್ಗದಲ್ಲಿ ಸಿಗುವ ಹಳ್ಳಿ, ಪಟ್ಟಣಗಳ ಜನಜೀವನ, ಪರಂಪರೆಯನ್ನು ಪ್ರಯಾಣಿಕರಿಗೆ ಪರಿಚಯಿಸುತ್ತದೆ. ಈಗ ಒಂದೇ ಪ್ರಯಾಣದಲ್ಲಿ ಹಲವು ರಾಜ್ಯಗಳಿಗೆ ಭೇಟಿ ನೀಡುವ, ಸುದೀರ್ಘ ಸಮಯ ಕಳೆಯವು ರೈಲು ಮಾರ್ಗಗಳೂ ಇವೆ. ಆದರೆ ದೇಶದ ಅತಿ ಉದ್ದದ ರೈಲು ಮಾರ್ಗದ ಬಗ್ಗೆ (India’s Longest Train Journey) ನಿಮಗೆ ಗೊತ್ತಾ? ಇದು ಕ್ರಮಿಸುವ ದೂರ, ಹಾದುಹೋಗುವ ರೈಲು ನಿಲ್ದಾಣಗಳು, ತೆಗೆದುಕೊಳ್ಳುವ ಸಮಯದ ಬಗ್ಗೆ ಇಲ್ಲಿದೆ ಓದಿ.

ರೈಲು ಪ್ರವಾಸದ ವಿಶಿಷ್ಟ ಅನುಭವವನ್ನು ಆನಂದಿಸಬಹುದಾದ ಸುವರ್ಣಾವಕಾಶ ಈಗ ನಿಮಗಿದೆ. ನೀವೂ ಕೂಡಾ ಸುದೀರ್ಘ ರೈಲು ಮಾರ್ಗದ ಪ್ರಯಾಣವನ್ನೂ ಮಾಡಬಹುದು ಅಂದರೆ ನಿಮಗೆ ಆಶ್ಚರ್ಯವಾಗುತ್ತದೆಯಲ್ಲವೇ? ಈಗ ಭಾರತದ ಅತಿ ಉದ್ದದ ರೈಲು ಮಾರ್ಗದಲ್ಲಿ ಪ್ರಯಾಣ ಮಾಡಲು ಸಾಧ್ಯ. ಹೇಗೆಂದರೆ, ವಿವೇಕ್‌ ಎಕ್ಸ್‌ಪ್ರೆಸ್‌ ಎಂಬ ರೈಲು ಅಸ್ಸಾಂನಿಂದ ತಮಿಳುನಾಡಿನ ದಕ್ಷಿಣದ ತುದಿಯವರೆಗೆ ಸಂಪರ್ಕಿಸುವು ದೇಶದ ಅತಿ ಉದ್ದದ ರೈಲು ಪ್ರಯಾಣವಾಗಿದೆ. ವಿವೇಕ್‌ ಎಕ್ಸ್‌ಪ್ರೆಸ್‌ ರೈಲು ನವೆಂಬರ್‌ 22ರಿಂದ ವಾರಕ್ಕೆ ಎರಡು ಬಾರಿ ಲಭ್ಯವಿರುತ್ತದೆ ಎಂದು ಈಶಾನ್ಯ ಗಡಿ ರೇಲ್ವೆ ತಿಳಿಸಿದೆ.

ಅಸ್ಸಾಂನ ದಿಬ್ರುಗಢ್‌ನಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಚಲಿಸುವ ವಿವೇಕ್ ಎಕ್ಸ್‌ಪ್ರೆಸ್ ರೈಲು, ದೂರ ಮತ್ತು ಸಮಯದ ದೃಷ್ಟಿಯಿಂದ ದೇಶದ ಅತಿ ಉದ್ದದ ರೈಲು ಮಾರ್ಗ ಎಂಬ ಹೆಸರನ್ನು ಹೊಂದಿದೆ. ರೈಲು ಮಾರ್ಗವು ಒಟ್ಟು ಒಂಬತ್ತು ರಾಜ್ಯಗಳನ್ನು ದಾಟಿ ಹೋಗುತ್ತದೆ. 58 ರೈಲು ನಿಲ್ದಾಣಗಳ ಮೂಲಕ ಈ ರೈಲು ಕ್ರಮಿಸುತ್ತದೆ. ಈ ರೈಲು ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ಮೂಲಕ ಹೋಗುತ್ತದೆ. ದಿಬ್ರುಗಢ-ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ರೈಲು ಒಟ್ಟೂ 4,189 ಕಿಮೀ ದೂರವನ್ನು ಕ್ರಮಿಸುತ್ತದೆ ಮತ್ತು ಒಂಬತ್ತು ರಾಜ್ಯಗಳ ಮೂಲಕ ಸಾಗುತ್ತದೆ. ಇದು ಒಟ್ಟು 83 ಗಂಟೆಗಳ ಸುದೀರ್ಘ ಪ್ರಯಾಣವಾಗಿದೆ.

ದಿಬ್ರುಗಢ-ಕನ್ಯಾಕುಮಾರಿ ವಿವೇಕ್ ಎಕ್ಸ್‌ಪ್ರೆಸ್ ರೈಲು ಈ ಮೊದಲು ಪ್ರತಿ ಶನಿವಾರ ಮಾತ್ರ ಓಡುತ್ತಿತ್ತು. ಆದರೆ ಈಶಾನ್ಯ ಗಡಿ ರೇಲ್ವೆಯು ನವೆಂಬರ್‌ 22ರಿಂದ ವಾರಕ್ಕೆ ಎರಡು ದಿನ ಈ ರೈಲು ಓಡಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಪ್ರಕಾರ ಇನ್ನು ಮುಂದೆ ವಾರಕ್ಕೆ ಎರಡು ಸಲ ಈ ರೈಲು ಅತಿ ಉದ್ದದ ಮಾರ್ಗ ಕ್ರಮಿಸಲಿದೆ.

ಇದನ್ನೂ ಓದಿ : Beautiful Train Journeys : ಜೀವನದಲ್ಲಿ ಒಮ್ಮೆಯಾದರೂ ಈ 5 ಸುಂದರ ರೈಲು ಪ್ರಯಾಣಗಳನ್ನು ಮಾಡಿ

ಇದನ್ನೂ ಓದಿ : Winter Tour : ಚಳಿಗಾಲದಲ್ಲಿ ಪ್ರವಾಸಕ್ಕೆ ಹೋಗಬೇಕಾ? ಈ ಸ್ಥಳಗಳಿಗೆ ಖಂಡಿತ ಭೇಟಿ ಕೊಡಿ

(India’s Longest Train Journey Vivek Express train covers 4,000kms, 9 states in 83 hours)

Comments are closed.