Concret mixer truck accident: ಕಾಂಕ್ರೀಟ್ ಮಿಕ್ಸರ್ ಟ್ರಕ್-ಕಾರು ಭೀಕರ ಅಪಘಾತ: ಇಬ್ಬರು ಸಾವು

ಬೆಂಗಳೂರು: (Concret mixer truck accident) ಕಾಂಕ್ರೀಟ್ ಮಿಕ್ಸರ್ ಟ್ರಕ್ ಬ್ಯಾಲೆನ್ಸ್ ಕಳೆದುಕೊಂಡು ಕಾರಿನ ಮೇಲೆ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರು ಗ್ರಾಮಾಂತರ ಬನ್ನೇರುಘಟ್ಟ ರಸ್ತೆಯ ಕಗ್ಗಲಿಪುರ ಕ್ರಾಸ್‌ನಲ್ಲಿ ಬುಧವಾರ ನಡೆದಿದೆ. ಗಾಯತ್ರಿ (46 ವರ್ಷ) ಹಾಗೂ ಮಗಳು ಸಮತಾ (15 ವರ್ಷ) ಘಟನೆಯಲ್ಲಿ ಭೀಕರವಾಗಿ ಸಾವನ್ನಪ್ಪಿರುವ ದುರ್ದೈವಿಗಳು.

ಗಾಯತ್ರಿ ಎಂಬ ಮಹಿಳೆ ತನ್ನ ಮಗಳು ಸಮತಾಳನ್ನು ಶಾಲೆಗೆ ಬಿಡಲು ಹೋಗಿದ್ದ ವೇಳೆ ಇನ್ನೊಂದು ಕಡೆಯಿಂದ ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ನಿಯಂತ್ರಣ ತಪ್ಪಿ ಅವರ ಕಾರಿನ ಮೇಲೆ ಪಲ್ಟಿ(Concret mixer truck accident)ಯಾಗಿದೆ. ಪರಿಣಾಮ ತಾಯಿ ಮಗಳು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.

ಕಾಂಕ್ರೀಟ್ ಮಿಕ್ಸರ್ ವಾಹನವು ಅತಿವೇಗದಲ್ಲಿ ಚಲಿಸಿದ್ದು, ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಅಪಘಾತಕ್ಕೆ ಕಾರಣವಾಯಿತು ಎನ್ನಲಾಗಿದೆ.ಸದ್ಯ ಘಟನೆಯ ಕುರಿತು ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ : Mathura fire accident: 3 ಅಂತಸ್ತಿನ ಬಟ್ಟೆ ಶೋರೂಮ್ ನಲ್ಲಿ ಬೆಂಕಿ ಅವಘಡ

ಇದನ್ನೂ ಓದಿ : Teacher murder: ಆನ್‌ಲೈನ್ ತರಗತಿ ವೇಳೆ ಶಿಕ್ಷಕ ಕತ್ತು ಹಿಸುಕಿ ಕೊಲೆ

ಇದನ್ನೂ ಓದಿ : Padma Royal Challenge Scheme Fraud: ಕುಂದಾಪುರದಲ್ಲಿ ಪದ್ಮಾ ರಾಯಲ್‌ ಚಾಲೆಂಜ್‌ ಸ್ಕೀಮ್‌ ಹೆಸರಲ್ಲಿ ಕೋಟ್ಯಾಂತರ ರೂ ವಂಚನೆ: ಪ್ರಕರಣ ದಾಖಲು

ತಾಯಿ-ಮಗಳು ಇಬ್ಬರು ಸಾವನ್ನಪ್ಪಿದ್ದರೆ, ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಾಲ್ಕು ಕ್ರೇನ್ ಮತ್ತು ಜೆಸಿಬಿ ಸಹಾಯದಿಂದ ಕಾರಿನೊಳಗೆ ಬಹಳ ಸಮಯ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Concrete mixer truck accident: Concrete mixer truck-car accident: Two killed

Comments are closed.