Exclusive: ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar Trophy) 4ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲಿದ್ದಾರೆ.ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯ ಮಾರ್ಚ್ 9ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ತಮ್ಮದೇ ಹೆಸರಿನಲ್ಲಿರುವ ಕ್ರೀಡಾಂಗಣದಲ್ಲಿ ಮೋದಿ ಟೆಸ್ಟ್ ಪಂದ್ಯವನ್ನು ವೀಕ್ಷ್ಟಿಸಲಿದ್ದಾರೆ. ಇದೇ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಾಥ್ ಕೊಡಲಿದ್ದಾರೆ.

ಅಹ್ಮದಾಬಾದ್’ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಜಗತ್ತಿನ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣವೆಂಬ ದಾಖಲೆ ಹೊಂದಿದೆ. ಈ ಹಿಂದೆ ಸರ್ದಾರ್ ವಲ್ಲಭಾಯ್ ಪಟೇಲ್ ಹೆಸರಲ್ಲಿದ್ದ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗಿದೆ. ಇದೇ ಕ್ರೀಡಾಂಗಣದಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯವನ್ನು ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ 168 ರನ್’ಗಳಿಂದ ಸೋಲಿಸಿ 3 ಪಂದ್ಯಗಳ ಟಿ20 ಸರಣಿಯನ್ನು 2-1ರ ಅಂತರದಲ್ಲಿ ಗೆದ್ದುಕೊಂಡಿತ್ತು. ಆರಂಭಿಕ ಬ್ಯಾಟ್ಸ್’ಮನ್ ಶುಭಮನ್ ಗಿಲ್ 63 ಎಸೆತಗಳಲ್ಲಿ ಅಜೇಯ 126 ರನ್ ಗಳಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು.

ನಾಗ್ಪುರದಲ್ಲಿ ಟೀಮ್ ಇಂಡಿಯಾ ಕ್ಯಾಂಪ್:
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದ್ದು, ಇಂದಿನಿಂದ (ಗುರುವಾರ) ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಭಾರತ ತಂಡದ ಅಭ್ಯಾಸ ಶಿಬಿರ ಆರಂಭವಾಗಲಿದೆ. 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ಆರಂಭವಾಗಲಿದೆ.

ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿ 2023 (India Vs Australia test series):
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಕ್ರಿಕೆಟ್ ಜಗತ್ತಿನ ಅತ್ಯಂತ ಜಿದ್ದಾಜಿದ್ದಿನ ಸರಣಿ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ, ಈ ಬಾರಿ ತವರಿನಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಭಾರತ ಫೈನಲ್ ತಲುಪಬೇಕಾದರೆ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ ಕನಿಷ್ಠ 2-0 ಅಂತರದಲ್ಲಿ ಗೆಲ್ಲಬೇಕಿದೆ. ಆಸ್ಟ್ರೇಲಿಯಾ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ (ICC world test championship) ಫೈನಲ್ ತಲುಪಿದೆ.

ಇದನ್ನೂ ಓದಿ : Ranji Trophy quarter final : ರಣಜಿ ಕ್ವಾರ್ಟರ್ ಫೈನಲ್ ನಲ್ಲಿ ಶ್ರೇಯಸ್ ಗೋಪಾಲ್ ಶತಕ, ಟಾಪ್-4 ಅರ್ಧಶತಕ; ಕರ್ನಾಟಕಕ್ಕೆ 358 ರನ್ ಮುನ್ನಡೆ

ಇದನ್ನೂ ಓದಿ : Ajinkya Rahane county cricket : ಟೆಸ್ಟ್ ಕಂಬ್ಯಾಕ್‌ಗೆ ಕಸರತ್ತು, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಅಜಿಂಕ್ಯ ರಹಾನೆ

ಇದನ್ನೂ ಓದಿ : Shikhar Dhawan : ಶಿಖರ್ ಧವನ್’ಗೆ ಪೇಂಟಿಂಗ್ ಗಿಫ್ಟ್ ಕೊಟ್ಟ ಅಂತರಾಷ್ಟ್ರೀಯ ಚಿತ್ರಕಾರ ವಿಲಾಸ್ ನಾಯಕ್, ಕನ್ನಡಿಗನಿಗೆ ಥ್ಯಾಂಕ್ಸ್ ಎಂದ ಗಬ್ಬರ್

ಇದನ್ನೂ ಓದಿ : Exclusive: ಜ್ಯೂನಿಯರ್ ಮಹಿಳಾ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯ ಕಮಾಲ್, ಭಾರತದ ಯಶಸ್ಸಿನ ಹಿಂದಿದ್ದಾರೆ ಕಲ್ಬುರ್ಗಿ ಕೋಚ್

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳಾಪಟ್ಟಿ:
ಪ್ರಥಮ ಟೆಸ್ಟ್: ಫೆಬ್ರವರಿ 9-13 (ನಾಗ್ಪುರ)
2ನೇ ಟೆಸ್ಟ್: ಫೆಬ್ರವರಿ 17-21 (ದೆಹಲಿ)
3ನೇ ಟೆಸ್ಟ್: ಮಾರ್ಚ್ 1-5 (ಧರ್ಮಶಾಲಾ)
4ನೇ ಟೆಸ್ಟ್: ಮಾರ್ಚ್ 9-13 (ಅಹ್ಮದಾಬಾದ್)

Border-Gavaskar Trophy : Exclusive: Prime Minister Narendra Modi will watch the India vs Australia Test match

Comments are closed.